ವಾಡಿ ಪಟ್ಟಣದಲ್ಲಿ ಜೂ. 20 ರಂದು ವಿಶ್ವಯೋಗ ದಿನಾಚರಣೆ ನಿಮಿತ್ತ ಸೈಕಲ್ ಜಾಥಾ: ವೀರಣ್ಣ ಯಾರಿ
ನಾಗಾವಿ ಎಕ್ಸಪ್ರೆಸ್
ವಾಡಿ: 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 20ರಂದು ಬೆಳಗ್ಗೆ 7.30 ಗಂಟೆಗೆ ಪಟ್ಟಣದ ಕುಂದನೂರ ವೃತ್ತದಿಂದ ಶ್ರೀನಿವಾಸ ಗುಡಿ ವೃತ್ತ,ಬಸವೇಶ್ವರ ವೃತ್ತ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ವೃತ್ತದ ಮುಖಾಂತರ ಆಝಾದ್ ವೃತ್ತದ ವರೆಗೆ ಪಟ್ಟಣದ ಪುರಸಭೆ, ಬೆಳಗಿನ ಬಳಗ ಹಾಗೂ ಪತಂಜಲಿ ಯೋಗ ಸಮಿತಿಯಿಂದ ಸೈಕಲ್ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ತಿಳಿಸಿದ್ದಾರೆ.
ಪಟ್ಟಣದ ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಯೋಗಾಸಕ್ತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
12ನೇ ಅಂತರರಾಷ್ಟ್ರೀಯ ಯೋಗ ದಿನದ ಘೋಷ ವಾಕ್ಯವಾದ ಆರೋಗ್ಯಕರ ವಯಸ್ಸಿಗೆ ಯೋಗ ಎಂಬ ಸಂದೇಶದ ಮಹತ್ವ ಸಾರುವುದು ಸೈಕಲ್ ಜಾಥಾದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ದೈಹಿಕ ಶಕ್ತಿ, ಮಾನಸಿಕ ನೆಮ್ಮದಿ ಜೊತೆಗೆ ದೀರ್ಘಾಯುಷ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಪರಿಸರ ಕಾಳಜಿ ಜೊತೆಗೆ ಯೋಗ ಒಂದು ಅತ್ಯುತ್ತಮವಾದ ಮಾರ್ಗವಾಗಿದೆ, ಅದನ್ನು ನಮ್ಮ ಬದುಕಿನ ಭಾಗವಾಗಿಸಲು 20 ಮತ್ತು 21ರ ಯೋಗದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಅದೇ ರೀತಿ ಜೂ 21ರಂದು ಬೆಳಗ್ಗೆ 6.30 ಗಂಟೆಗೆ ಪಟ್ಟಣದ ರೈಲ್ವೆ ಬ್ರೀಡ್ಜ್ ಹತ್ತಿರದ ಶ್ರೀ ಮುನಿಯಪ್ಪ ದಾಸ ಶಾಲಾ ಆವರಣದಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ ಯೋಗಾಸಕ್ತರು, ವಿದ್ಯಾರ್ಥಿಗಳು ಆಗಮಿಸಿ, 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಯಶಸ್ಸಿನ ಪಾಲುದಾರರಾಗಲು ವೀರಣ್ಣ ಯಾರಿ ಆಮಂತ್ರಿಸಿದ್ದಾರೆ.

