Oplus_0

ಸಚಿವರು ಆರ್.ಎಸ್.ಎಸ್ ಬಗ್ಗೆ ಮಾತನಾಡುವುದು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಲಿ | ಚಿತ್ತಾಪುರ ತಾಲೂಕಿನಲ್ಲಿ ಆಡಳಿತ ಯಂತ್ರ ಕುಸಿದಿದೆ: ಆರ್.ರುದ್ರಯ್ಯ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನಲ್ಲಿ ಆಡಳಿತ ಯಂತ್ರ ಕುಸಿದಿದೆ, ಸರ್ಕಾರಿ ಇಲಾಖೆಗಳಲ್ಲಿ ಜನರ ಕೆಲಸಗಳು ಆಗುತ್ತಿಲ್ಲ ಸಾರ್ವಜನಿಕ ಆಡಳಿತದ ಹಿತಾಸಕ್ತಿ ವಿರುದ್ಧವಾಗಿ ನಡೆದಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ದಂಡೋತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಷಾಹಾರ ಸೇವಿಸಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಆರ್.ರುದ್ರಯ್ಯ ಹೇಳಿದರು.

ಪಟ್ಟಣದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂತಹ ದುರ್ಘಟನೆಗಳು ಸಂಭವಿಸಿದಾಗ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಹಾರೋಪಾಯ ಕ್ರಮ ಕೈಗೊಳ್ಳಬೇಕು ಆದರೆ ಇವರು ಬೆಂಗಳೂರಿನಿಂದಲೇ ಅಧಿಕಾರಿಗಳಿಗೆ ಹೇಳುತ್ತಾರೆ, ಘಟನೆ ಜರುಗಿ ಎರಡು ದಿನಗಳು ಕಳೇದರೂ ಇನ್ನೂ ಭೇಟಿ ನೀಡಿಲ್ಲ ಇದರಿಂದ ಗೊತ್ತಾಗುತ್ತದೆ ಚಿತ್ತಾಪುರ ಕ್ಷೇತ್ರದ ಮೇಲೆ ಇವರ ಕಾಳಜಿ ಎಷ್ಟಿದೆ ಎಂದು. ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ಸಹಕಾರ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುವ ಮೂಲಕ ಧಮ್ಕಿ ಹಾಕಿದ್ದಾರೆ ಇದು ಸರಿಯಲ್ಲ ಎಂದರು.

ತಾಲೂಕಿನಲ್ಲಿ ದುರಾಡಳಿತದ ಎಲ್ಲೆ ಮೀರಿದೆ, ಸಚಿವರು ಅಭಿವೃದ್ಧಿ ಬಗ್ಗೆ ಮಾತನಾಡಲ್ಲ ಬರೀ ಯಾವಾಗಲೂ ಆರ್.ಎಸ್.ಎಸ್ ಬಗ್ಗೆ ಮಾತನಾಡುತ್ತಾರೆ, ಆರ್.ಎಸ್.ಎಸ್ ನಿಷೇಧ ಮತ್ತು ನೋಂದಣಿ ಬಗ್ಗೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ಪ್ರಚಾರ ಪಡೆಯುವುದಕ್ಕಿಂತ ಮೊದಲು ಕೋರ್ಟ್ ಗೆ ಹೋಗಲಿ ಎಂದು ಸವಾಲು ಹಾಕಿದರು.

ಆರ್’ಡಿಪಿಆರ್ ಒಳ್ಳೆಯ ಖಾತೆ ವಾಗಿತ್ತು ಮನಸು ಮಾಡಿದರೆ ಏನೆಲ್ಲಾ ಬದಲಾವಣೆ ಮಾಡಬಹುದಿತ್ತು ಹಳ್ಳಿ ಹಳ್ಳಿಗೆ ನೀರು, ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಮಾಡಬಹುದಿತ್ತು, ಮಾದರಿ ತಾಲೂಕು ಅನ್ನಾಗಿ ಮಾಡಬಹುದಿತ್ತು ಆದರೆ ಬರೀ ಆರ್.ಎಸ್.ಎಸ್ ಬಗ್ಗೆ ಮಾತಾಡೋದೇ ಹೆಚ್ಚು, ಪ್ರಭಾವಿ ಸಚಿವರ ಕ್ಷೇತ್ರ ಮಾದರಿ ಕ್ಷೇತ್ರವಾಗಬೇಕಿತ್ತು, ಜಿಲ್ಲೆಯಲ್ಲೇ ಬೇರೆ ತಾಲೂಕುಗಳಿಗೆ ಹೋಲಿಸಿದರೆ ಚಿತ್ತಾಪುರ ತಾಲೂಕು ತೀರಾ ಕೆಳಮಟ್ಟದಲ್ಲಿದೆ ಎಂದು ಕುಟುಕಿದರು.

ಏಕಮೇವ ಚಕ್ರಾಧಿಪತ್ಯದಿಂದ ಬದಲಾವಣೆ ಹೇಗೆ ಸಾಧ್ಯ ಜನರನ್ನು ಕತ್ತಲೆಯಲ್ಲಿಟ್ಟು ನಿರಂತರವಾಗಿ ಅಧಿಕಾರದಲ್ಲಿ ಮುಂದುವರೆದಿದ್ದಾರೆ. ಇಲ್ಲಿವರೆಗೆ ರಾಜ್ಯದಲ್ಲಿ ದಲಿತರ ಕುರಿತು ಒಮ್ಮೆಯಾದರೂ ಮಾತನಾಡಿದ್ದಾರೆಯೇ, ಜಿಲ್ಲೆಯಲ್ಲಿ ಖರ್ಗೆ ಅವರಿಂದ ಯಾರಾದರೊಬ್ಬ ದಲಿತ ಉದ್ದಾರ ಆಗಿದ್ದಾರೆಯೇ ಎಂದು ಪ್ರಶ್ನಿಸಿದರು.

ಲಿಂಗಸೂಗೂರು ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾರಣ: 

ಮೊದಲು ಖರ್ಗೆ ಅವರ ಆಪ್ತ ಆಗಿದ್ದೆ ಆದರೆ ಈಗಿಲ್ಲ ಮೂರು ವರ್ಷದಿಂದ ನನಗೆ ಅವರು ಸಂಪರ್ಕವಿಲ್ಲ. ನಾನು 2023 ರಲ್ಲಿ ಲಿಂಗಸೂಗೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 14 ಸಾವಿರ ಮತುಗಳು ಪಡೆದು ಕಾಂಗ್ರೆಸ್ ಅಭ್ಯರ್ಥಿ ಬಿ.ಎಸ್.ಹೊಲಗೇರಿ ಅವರ ಸೋಲಿಗೆ ಪ್ರಮುಖ ಕಾರಣನಾಗಿದ್ದೇನೆ, ಖರ್ಗೆ ವಿರುದ್ಧ ಕೆಲಸ ಮಾಡಿದ್ದೇನೆ, ಹೀಗಿದ್ದಾಗ ಅವರ ಆಪ್ತ ಆಗಲು ಹೇಗೆ ಸಾಧ್ಯ ಎಂದರು.

ಎಸ್ಐಆರ್ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಪಕ್ಷಾತೀತವಾಗಿ ಕಾರ್ಯನಿರ್ವಹಿಸಿ:

ಎಸ್ಐಆರ್ ಅಲ್ಪಸಂಖ್ಯಾತರ ಹಾಗೂ ದಲಿತರ ಮತ್ತು ಬಡವರ ವಿರೋಧಿ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ, ದೇಶದಲ್ಲಿ ಇಲ್ಲಿವರೆಗೆ ಎಸ್ಐಆರ್ 9 ಬಾರಿ ಆಗಿದೆ. ಆದರೆ ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಕಾಂಗ್ರೆಸ್ ವಿರೋಧಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಶುದ್ಧ ಮಾಡಲು ಮತ್ತು ನ್ಯಾಯಯುತ ಹಕ್ಕು ಒದಗಿಸಲು ಎಸ್ಐಆರ್ ತುಂಬಾ ಅವಶ್ಯಕವಾಗಿದೆ. ಎಸ್ಐಆರ್ ಗೆ ಯಾರೂ ತಕರಾರು ಮಾಡುತ್ತಿಲ್ಲ ಬರೀ ಕಾಂಗ್ರೆಸ್ ಮಾತ್ರ ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮಾಡುತ್ತಿದೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಪಕ್ಷಾತೀತವಾಗಿ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿ ಇಲ್ಲದಿದ್ದರೆ ಶಿಕ್ಷಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ: 

ನಾನು ಕಳೆದ 25 ವರ್ಷಗಳಿಂದ ಕಲಬುರ್ಗಿಯಲ್ಲಿಯೇ ಇದ್ದೇನೆ ನನ್ನ ಇಬ್ಬರು ಮಕ್ಕಳ ವಿದ್ಯಾಭ್ಯಾಸ ಇಲ್ಲಿಯೇ ಆಗಿದೆ ಅಲ್ಲದೇ ನನ್ನ ಮಕ್ಕಳು 371 ಜೆ. ವ್ಯಾಪ್ತಿಯಲ್ಲಿಯೇ ಬರುತ್ತಾರೆ, ನನ್ನ ಸರ್ಕಾರದ ಹೆಚ್ಚಿನ ಸೇವೆ ಇದೇ ಭಾಗದಲ್ಲಿ ಆಗಿದೆ ಹೀಗಾಗಿ ಕಲಬುರಗಿ ನನಗೇನು ಹೊಸದಲ್ಲ ಎಂದು ತಿರುಗೇಟು ನೀಡಿದರು. ಕೆಲವರಿಗೆ ನನ್ನ ನೋಡಿ ಭಯ ಆಗಿದೆ ಕಾರಣ ನನ್ನ ವಿರುದ್ಧ ಪಕ್ಷದ ನಾಯಕರಿಗೆ ದೂರು ನೀಡಿದ್ದಾರೆ, ಈಗಲೂ ನಾನು ಪಕ್ಷದ ಆದೇಶದಂತೆ ಹಾಗೂ ಕೋಟ್ಟ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದೇನೆ, ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದರು.

ಕಲಬುರಗಿ ಮಾಜಿ ಮೇಯರ್ ವಿಶಾಲ್ ದರ್ಗಿ ಮಾತನಾಡಿ, ನಾನು ಮೇಯರ್ ಇದ್ದಾಗ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಇಪ್ಪತ್ತಕ್ಕೂ ಅಧಿಕ ಬಾರಿ ಫೋನ್ ಮಾಡಿದರೂ ಸಹ ಒಮ್ಮೆಯೂ ಸಭೆಗೆ ಬಂದಿಲ್ಲ ಹೀಗಾಗಿ ಕಲಬುರಗಿ ಮಹಾನಗರದ ಅಭಿವೃದ್ಧಿ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎಂದು ಹೇಳಿದರು. ಅಭಿವೃದ್ಧಿಯ ಜಪ ಮಾಡುವುದು ಬಿಟ್ಟು ಬರೀ ಬೆಳಿಗ್ಗೆ ಮತ್ತು ಸಂಜೆ ಆರ್.ಎಸ್.ಎಸ್ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಪುರಸಭೆ ಮಾಜಿ ಅಧ್ಯಕ್ಷ ನಾಗರಾಜ ಭಂಕಲಗಿ, ಮಾಜಿ ಸದಸ್ಯರಾದ ರಮೇಶ್ ಬೊಮ್ಮನಳ್ಳಿ, ಪ್ರಭು ಗಂಗಾಣಿ, ಸುರೇಶ್ ಬೆನಕನಳ್ಳಿ, ದಶರಥ ದೊಡ್ಡಮನಿ, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸುರಕರ್, ಮಹಿಳಾ ಮೋರ್ಚಾ ಅಧ್ಯಕ್ಷೆ ನಾಗುಬಾಯಿ ಜಿತುರೆ, ಅಕ್ಕಮಹಾದೇವಿ ನಾಗೇಶ್, ಚಂದ್ರಶೇಖರ ಉಟಗೂರ, ರವಿ ಮದನಕರ್ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!