Oplus_0

ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಟೀಕೆ ಮಾಡೋದೆ ಬಿಜೆಪಿ ಮುಖಂಡರ ಉದ್ಯೋಗ: ಮಲ್ಲಿಕಾರ್ಜುನ ಕಾಳಗಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಬಿಜೆಪಿ ಮುಖಂಡರಿಗೆ ಯಾವುದೇ ಉದ್ಯೋಗ ಇಲ್ಲ, ಬರೀ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಟೀಕೆ ಮಾಡೋದೆ ಉದ್ಯೋಗವಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ತಿರುಗೇಟು ನೀಡಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬಯ್ಯೋದು, ಟೀಕೆ ಮಾಡುವುದರಿಂದ ಎರಡು ಅಂಕ ಹೆಚ್ಚು ಸಿಗುವ ಹಾಗೂ ಮುಂದೆ ಟಿಕೆಟ್ ಸಿಗುವುದು ಎನ್ನುವ ಭ್ರಮೆಯಲ್ಲಿ ಬಿಜೆಪಿ ಮುಖಂಡರು ಇದ್ದಾರೆ ಎಂದು ಕುಟುಕಿದರು.

ಚಿತ್ತಾಪುರ ಬಿಜೆಪಿ ಯಲ್ಲಿ ಗಟ್ಟಿ ನಾಯಕತ್ವ ಇಲ್ಲದೆ ಇರುವುದರಿಂದ ಬೆಂಗಳೂರು ಹಾಗೂ ಕಲಬುರಗಿ ಯಿಂದ ಚಿತ್ತಾಪುರ ಕ್ಕೆ ಪ್ರೇಸ್ ಮೀಟ್ ಮಾಡಲು ಬರುತ್ತಾರೆ ಎಂದು ವ್ಯಂಗ್ಯವಾಡಿದರು.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಕೆಲ ಮುಖಂಡರು ಚಿತ್ತಾಪುರಕ್ಕೆ ಬಂದಿದ್ದರು, ಈ ಬಾರಿ ಒಬ್ಬರು ಬಂದಿದ್ದಾರೆ. ಚಿತ್ತಾಪುರ ಕ್ಷೇತ್ರದ ಶುದ್ಧ ರಾಜಕೀಯವನ್ನು ಕಲುಷಿತ ಮಾಡುವುದೇ ಇವರ ಉದ್ದೇಶ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಒನ್ ಮ್ಯಾನ್ ಆರ್ಮಿ ತರಹ ಪ್ರಿಯಾಂಕ್ ಖರ್ಗೆ ಒಬ್ಬರೇ ಇದ್ದಾರೆ, ಆದರೆ ಬಿಜೆಪಿ ಯಲ್ಲಿ ಅವರವರ ನಡುವೆ ಪೈಪೋಟಿ ಜಿದ್ದಾಜಿದ್ದಿ ಇದೆ. ಬಿಜೆಪಿ ಮುಖಂಡರಿಗೆ ಬರೀ ಗಾಳಿಯಲ್ಲಿ ಗುಂಡು ಹೊಡೆಯುವುದು ಗೊತ್ತಿದೆ, ನಿಖರತೆ ಖಚಿತವಾಗಿ ಹಾಗೂ ಸ್ವಷ್ಟ ಮಾಹಿತಿಯಿಂದ ಮಾತನಾಡಲು ಬರುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ರೈತರ ಕೂಲಿಕಾರ್ಮಿಕರ ಹಾಗೂ ವಿದ್ಯಾರ್ಥಿಗಳ ಬಾಯಿ ಮುಚ್ಚಿಸುವುದು ಬಹಳ ದಿನ ನಡೆಯಲ್ಲ ಎಂದು ಹೇಳಿದರು.

ದೆಹಲಿಯಲ್ಲಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳ‌ ಮೇಲೆ ಹಲ್ಲೆ ಮಾಡಿ ಹಿಂಸೆ ಮಾಡಿದ ಸರ್ಕಾರದ ನಡೆ ಖಂಡನೀಯ ಎಂದರು.

ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ರೈತರ ಮೇಲೆ ಗೋಲಿಬಾರ್ ಆಯಿತು, ಕಾರ್ಮಿಕರ ಹಾಗೂ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಆಗಿದೆ, ಹೀಗಾಗಿ ಬಿಜೆಪಿ ಮುಖಂಡರಿಗೆ ರೈತರ, ಕಾರ್ಮಿಕರ ಹಾಗೂ ವಿದ್ಯಾರ್ಥಿಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ರಸೂಲ್ ಮುಸ್ತಫಾ, ಕಾಂಗ್ರೆಸ್ ಮುಖಂಡರಾದ ಅಹ್ಮದ್ ಸೇಠ್, ಸೈಯ್ಯದ್ ಸೇಠ್, ಬಸವರಾಜ ಮುಡಬೂಳಕರ್, ಪ್ರಕಾಶ ಸೇರಿದಂತೆ ಇತರರು ಇದ್ದರು.

“ಇತಿಹಾಸ ಇರುವ ಕಾಂಗ್ರೆಸ್ ಪಕ್ಷದ ಅಸ್ತಿತ್ವದ ಬಗ್ಗೆ ಮಾತನಾಡುವ ಯೋಗ್ಯತೆ ರುದ್ರಯ್ಯ ಅವರಿಗೆ ಇಲ್ಲ, ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ನ್ಯಾಯಯುತ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ನೀಡಿದೆ”.-ಮಲ್ಲಿಕಾರ್ಜುನ ಕಾಳಗಿ ಪುರಸಭೆ ಮಾಜಿ ಅಧ್ಯಕ್ಷರು.

Spread the love

Leave a Reply

Your email address will not be published. Required fields are marked *

error: Content is protected !!