Oplus_0

ಭಾರತ್ ಜೋಡೊ ಯುವ ಸಂಘ ರಚನೆಗಾಗಿ ಅರ್ಜಿ ಆಹ್ವಾನ: ಭಾರತಿ ದಂಡೋತಿ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರದ ಆದೇಶದಂತೆ ಭಾರತ್ ಜೋಡೊ ಯುವ ಸಂಘಗಳನ್ನು ಸ್ಥಾಪಿಸಲು ಮತ್ತು ನೋಂದಾಯಿಸಲು ಆಸಕ್ತ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿತ್ತಾಪುರ ಪುರಸಭೆ ವ್ಯಾಪ್ತಿಯಲ್ಲಿ ಸರಾಸರಿ 6000 ಜನಸಂಖ್ಯೆಗೆ ಒಂದರಂತೆ 7 ಯುವ ಸಂಘಗಳನ್ನು ಸ್ಥಾಪಿಸಲು ಆದೇಶಿಸಿದ್ದು 16 ರಿಂದ 35 ವರ್ಷದೊಳಗಿನ ಸ್ಥಳೀಯ ನಿವಾಸಿಗಳು ಈ ಸಂಘದ ಸದಸ್ಯರಾಗಲು ಅರ್ಹರಿರುತ್ತಾರೆ. ಬಿಜಿವೈಎಸ್ ಪೋರ್ಟಲ್ ಮೊಬೈಲ್ ಆಪ್ ಮೂಲಕ ಅಥವಾ ಸ್ಥಳೀಯ ಕರ್ನಾಟಕ ಒನ್ ಹಾಗೂ ನಾಗರೀಕ ಸೇವಾ ಕೇಂದ್ರಗಳ ಸಹಾಯದಿಂದ ಆನಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ನೋಂದಣಿಗಾಗಿ ಆಧಾರ್ ಕಾರ್ಡ್ ಕಡ್ಡಾಯ. ಪ್ರತಿ ಸದಸ್ಯರಿಗೆ ರೂ.10 ನೋಂದಣಿ ಶುಲ್ಕ, ನಿಗದಿಪಡಿಸಲಾಗಿದೆ. ಒಬ್ಬ ಯುವಕ/ಯುವತಿ ಒಂದೇ ಸಂಘದ ಸದಸ್ಯರಾಗಬಹುದು ಎಂದು ತಿಳಿಸಿದ್ದಾರೆ

Spread the love

Leave a Reply

Your email address will not be published. Required fields are marked *

You missed

error: Content is protected !!