ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ನೇತೃತ್ವದ ನಿಯೋಗ ಕೇಂದ್ರ ಸಚಿವ ಕುಮಾರಸ್ವಾಮಿ ಗೆ ಭೇಟಿ
ಜಮೀನು ಕಳೆದುಕೊಂಡ ರೈತರಿಗೆ ಹೆಚ್ಚಿನ ಪರಿಹಾರ ನೀಡಲು ಶ್ರೀ ಸಿಮೆಂಟ್ ಕಂಪೆನಿಗೆ ಶಿಫಾರಸ್ಸು ಮಾಡಲು ಮನವಿ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಶ್ರೀ ಸಿಮೆಂಟ್ ಕೊಡ್ಲಾ-ಬೆನಕನಳ್ಳಿ ಕಂಪನಿಯವರು ಭೂಸ್ವಾಧೀನ ಕಾಯ್ದೆ ಉಲ್ಲಂಘನೆ ಮಾಡಿ ಕಡಿಮೆ ದರದಲ್ಲಿ ಕೊಡ್ಲಾ, ಬೆನಕನಳ್ಳಿ, ಡೋಣಗಾಂವ, ರಾಜೋಳ್ಳಾ ಗ್ರಾಮದ ರೈತರ ಜಮೀನುಗಳನ್ನು ಸರ್ಕಾರ ನಿಗಧಿಪಡಿಸಿದ ದರದಲ್ಲಿ ರೈತರಿಗೆ ಪರಿಹಾರ ಕೊಡದೇ ಮೀನಾಮೇಷ ಮಾಡುತ್ತಿರುವ ಕಂಪನಿಯ ಅಧಿಕಾರಿಗಳಿಗೆ ಹೆಚ್ಚಿನ ಮೊತ್ತದ ಪರಿಹಾರ ನೀಡುವಂತೆ ಶಿಫಾರಸ್ಸು ಮಾಡುವಂತೆ ಕೊಡ್ಲಾ, ಬೆನಕನಳ್ಳಿ ಡೋಣಗಾಂವ, ರಾಜೋಳ್ಳಾ ರೈತರ ಸಂಘದ ಪದಾಧಿಕಾರಿಗಳು ಕಲಬುರಗಿ ಜಿಲ್ಲಾ ಜೆಡಿಎಸ್ ಪಕ್ಷದ ಅಧ್ಯಕ್ಷ ಬಾಲರಾಜ್ ಗುತ್ತೇದಾರ ಅವರ ನೇತೃತ್ವದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕಾ ಇಲಾಖೆಯ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಬಳಿ ನಿಯೋಗ ಹೋಗಿ ಮನವಿ ಪತ್ರ ಸಲ್ಲಿಸಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಬೆಂಗಳೂರಿನ ನಿವಾಸದಲ್ಲಿ ಮನವಿ ಪತ್ರ ಸಲ್ಲಿಸಿ ಶ್ರೀ ಸಿಮೆಂಟ್, ಕಂಪನಿ ಸ್ಥಾಪನೆ ಮಾಡುವ ಸಲುವಾಗಿ ಡೋಣಗಾಂವ, ರಾಜೋಳ್ಳಾ, ಕೊಡ್ಲಾ, ಬೆನಕನಳ್ಳಿ ಗ್ರಾಮದ ರೈತರ ಜಮೀನುಗಳನ್ನು ಪ್ರತಿ ಎಕರೆಗೆ 11,68,000/- (ಹನ್ನೊಂದು ಲಕ್ಷ ಆರವತ್ತೆಂಟು ಸಾವಿರ ರೂಪಾಯಿ) ಯಂತೆ 2009 ಸರ್ವೆ ನಂ 293/1, 293/2 ಖರೀದಿ ಮಾಡಿರುತ್ತಾರೆ. ಆದರೆ ಎಲ್ಲಾ ಸರ್ವೆ ನಂಬರಗೆ 2,35,000/- ರೂಪಾಯಿ 2009ರಲ್ಲಿ ನೀಡಿರುತ್ತಾರೆ. ಮತ್ತೆ 3.65,000/- ರೂಪಾಯಿ 2012ರಲ್ಲಿ ಕೊಟ್ಟಿರುತ್ತಾರೆ. ಮತ್ತೆ 2016ರಲ್ಲಿ ರೂಪಾಯಿ 2,00,000/- ಹಾಗೂ ಒಂದು ಉದ್ಯೋಗ ಒಟ್ಟು 8,00,000/- (ಎಂಟು ಲಕ್ಷ) ಮಾತ್ರ ಕೊಟ್ಟಿರುತ್ತಾರೆ. ಇನ್ನು ಬಾಕಿ ಕೊಡಬೇಕಾದ 3.68.000/- ಕೊಟ್ಟಿರುವುದಿಲ್ಲ , ಬಾಕಿ ಹಣವನ್ನು ಕೊಡುವಂತೆ ಸತತವಾಗಿ ಪ್ರತಿಭಟನೆ ಮಾಡುತ್ತಾ ಬಂದಿರುತ್ತೇವೆ. ಇದರಲ್ಲಿ ಸಹ ತಾರತಮ್ಯ ಮಾಡಿರುತ್ತಾರೆ. ಆದರೆ ಇದರ ಕುರಿತು ಶ್ರೀ ಸಿಮೆಂಟ್ ಕಂಪನಿ ಕೊಡ್ಲಾದಲ್ಲಿ 1-12-2022 ರಿಂದ ಪ್ರತಿಭಟನೆ ಕುಳಿತು ಇಲ್ಲಿಯವರೆಗೆ 648 ದಿನಗಳು ಕಳೆದಿದೆ. ಈ ಕುರಿತು ಸಹಾಯಕ ಆಯುಕ್ತರು ಸೇಡಂ ಇವರಿಗೆ ಮನವಿ ಸಲ್ಲಿಸಿದಾಗ ಸಹಾಯಕ ಆಯುಕ್ತರು ಸೇಡಂ ಇವರ ಕಛೇರಿಯಲ್ಲಿ 3-4 ಬಾರಿ ಸಭೆ ಮಾಡಿದ್ದು ಸಭೆಯಲ್ಲಿ 3.68,000/- ಹೆಚ್ಚಿನ ಮೊತ್ತ ಕೊಡಲೇಬೇಕೆಂದು ಸಭೆಯ ನಡುವಳಿ ಪತ್ರದಲ್ಲಿ ಬರೆದುಕೊಟ್ಟಿರುತ್ತಾರೆ ಹಾಗೂ ಪ್ರಾದೇಶಿಕ ಆಯುಕ್ತರು ಕೂಡ ಸಹ ಸಭೆ ನಡೆಸಿ. ಆ ಸಭೆಯಲ್ಲಿಯೂ 109 ಉಲ್ಲಂಘನೆಯಾಗಿದೆ ಹಾಗೂ ಹೆಚ್ಚಿನ ಮೊತ್ತದ ನೀಡಬೇಕೆಂದು ಆದೇಶ ಮಾಡಿರುತ್ತಾರೆ ಹಾಗೂ ಜಿಲ್ಲಾಧಿಕಾರಿಗಳಿಗೆ 15 ಬಾರಿ ಮನವಿ ಪತ್ರ ಸಲ್ಲಿಸಿರುತ್ತೇವೆ. 1 ಬಾರಿ ಮಾತ್ರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ 15 ದಿನಗಳ ಒಳಗಾಗಿ ಸಭೆಯನ್ನು ಕರೆದು ಸದರಿ ವಿಷಯದ ಕುರಿತು ನಿರ್ಣಯ ಮಾಡಿ ನ್ಯಾಯ ಒದಗಿಸಿಕೊಡುತ್ತೇವೆಂದು ಹೇಳಿ ಸುಮಾರು 6 ತಿಂಗಳು ಕಳೆದರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಆದಕಾರಣ ರೈತರಿಗೆ ಆದ ಅನ್ಯಾಯವನ್ನು ಸರಿಪಡಿಸಿ ಪ್ರತಿ ಎಕರೆಗೆ ರೈತರಿಗೆ ಬರಬೇಕಾದ 3,68,000/- ಕೊಡುವಂತೆ ಕಂಪನಿಯ ಆಡಳಿತ ಮಂಡಳಿಯವರಿಗೆ ಆದೇಶ ಮಾಡಬೇಕೆಂದು ಕೇಂದ್ರ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಕಲಬುರಗಿ ಜಿಲ್ಲಾಧ್ಯಕ್ಷರಾದ ಬಾಲರಾಜ್ ಗುತ್ತೇದಾರ, ಸುನೀತಾ ತಳವಾರ, ಶೇರ ಅಲಿ ಖಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
“ಕಳೆದ 2 ವರ್ಷದಿಂದ ರೈತರು ಶ್ರೀ ಸಿಮೆಂಟ್ ವಿರುದ್ಧ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ, ಕಾರ್ಖಾನೆ ಮುಂದೆ ರೈತರು ನಡೆಸುತ್ತಿರುವ ಧರಣಿ 649 ದಿನಕ್ಕೆ ಕಾಲಿಟ್ಟಿದೆ, ಪ್ರತಿಭಟನಾ ಧರಣಿಯಲ್ಲಿ ಒಬ್ಬ ರೈತನು ಮೃತಪಟ್ಟಿದ್ದು , ರೈತರ ಹೋರಾಟಕ್ಕೆ ಕಾರ್ಖಾನೆಯವರು ಹಾಗೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲಾ, ಇದರ ಕುರಿತು ಕೇಂದ್ರ ಸಚಿವರಿಗೆ ಮನವರಿಕೆ ಮಾಡಲಾಗಿದೆ”.-ಬಾಲರಾಜ್ ಗುತ್ತೇದಾರ ಜೆಡಿಎಸ್ ಜಿಲ್ಲಾಧ್ಯಕ್ಷರು ಕಲಬುರಗಿ.
.