ಕೂರಿಗೆ ಪೂಜೆ ಮಣ್ಣಿನೊಂದಿಗೆ ಬೆಸೆದ ನಮ್ಮ ಸಂಸ್ಕೃತಿಯ ಅಮೂಲ್ಯ ಪರಂಪರೆ | ಸುಗೂರ ಎನ್ ಗ್ರಾಮದಲ್ಲಿ ಭಕ್ತಿಭಾವದಿಂದ ನೆರವೇರಿದ ಕೂರಿಗೆ ಪೂಜೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿರುವ ಸಚ್ಚಿದಾನಂದ ನಿತ್ಯ ನಿರಂಜನ ಮೂರ್ತಿ, ಸ್ವಯಂಸಿದ್ಧ ಶರಣರ ಸನ್ನಿಧಿಯಾದ ಪವಾಡ ಪುರುಷ ಸದ್ಗುರು ಶ್ರೀ ಭೋಜಲಿಂಗೇಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಪವಿತ್ರ ಕೂರಿಗೆ ಪೂಜಾ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.
ಶ್ರೀ ಭೋಜಲಿಂಗೇಶ್ವರ ಮಠದ ಪೀಠಾಧಿಪತಿ ಶ್ರೀ ಹಿರಗಪ್ಪ ತಾತನವರು ಹಾಗೂ ಕಿರಿಯ ಪೀಠಾಧಿಪತಿ ಶ್ರೀ ಅಭಿನವ ಡಾ. ಭೋಜರಾಜರು ಅವರ ದಿವ್ಯ ಅಮೃತ ಹಸ್ತದಿಂದ ಕೂರಿಗೆಗೆ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮಠದ ಸಹಸ್ರಾರು ಭಕ್ತರು ಉಪಸ್ಥಿತರಿದ್ದು, ಪೂಜ್ಯರ ದರ್ಶನ ಪಡೆದು ಆಶೀರ್ವಾದ ಪಡೆದರು.
ರೈತನು ತನ್ನ ಬದುಕಿನ ಭರವಸೆಯಾದ ಭೂಮಿತಾಯಿಯ ಮಡಿಲಲ್ಲಿ ಹೊಸ ಬಿತ್ತನೆಯ ಕನಸು ಕಾಣುವ ಮುನ್ನ, ಬೀಜ ಬಿತ್ತುವ ಪವಿತ್ರ ಸಾಧನವಾದ ಕೂರಿಗೆಯನ್ನು ಪೂಜಿಸುವುದು ನಮ್ಮ ಹಿರಿಯರು ಬೆಳೆಸಿಕೊಂಡು ಬಂದಿರುವ ಮಣ್ಣಿನ ಸಂಸ್ಕೃತಿಯ ಅಮೂಲ್ಯ ಪರಂಪರೆಯಾಗಿದೆ. ಇದು ಕೇವಲ ಒಂದು ಆಚರಣೆಯಲ್ಲ, ರೈತನ ಶ್ರಮ, ಭೂಮಿಯ ಮೇಲಿನ ನಂಬಿಕೆ ಹಾಗೂ ಅನ್ನದಾತನ ಬದುಕಿನೊಂದಿಗೆ ಬೆಸೆದುಕೊಂಡಿರುವ ಭಕ್ತಿ–ಭಾವನೆಯ ಪ್ರತೀಕವಾಗಿದೆ.
ಕಾಲ ಬದಲಾದರೂ, ಬದುಕಿನ ರೀತಿಗಳು ಬದಲಾದರೂ ನಮ್ಮ ನೆಲದ ಬೇರುಗಳನ್ನು ಮರೆಯದೆ ಇಂತಹ ಪ್ರಾಚೀನ ಸಂಸ್ಕೃತಿ ಮತ್ತು ಪರಂಪರೆಯನ್ನು ಇಂದಿಗೂ ಜೀವಂತವಾಗಿರಿಸಿಕೊಂಡಿರುವುದು ಶ್ರೀಮಠದ ಹೆಮ್ಮೆಯಾಗಿದೆ.
ಕೂರಿಗೆ ಪೂಜೆಯ ಮೂಲಕ ಭೂಮಿತಾಯಿಗೆ ನಮಿಸಿ, ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ರೈತರ ಬದುಕಿನಲ್ಲಿ ಸುಖ–ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಲಾಯಿತು. ಅನ್ನದಾತನ ಹೊಲ ಹಸಿರಾಗಲಿ, ರೈತನ ಬದುಕು ಸಮೃದ್ಧಿಯಾಗಲಿ, ಭೂಮಿತಾಯಿ ಸದಾ ಕರುಣೆಯ ಮಡಿಲಾಗಲಿ, ಪ್ರತಿ ಮನೆಯಲ್ಲೂ ಅನ್ನ–ಆನಂದ ತುಂಬಿರಲಿ ಎಂಬ ಶುಭಾಶಯಗಳೊಂದಿಗೆ ಶ್ರೀಮಠದ ವತಿಯಿಂದ ರೈತ ಸಮುದಾಯಕ್ಕೆ ಆಶೀರ್ವಾದ ಕೋರಲಾಯಿತು.
ಈ ಸಂದರ್ಭದಲ್ಲಿ ಶ್ರವಣಕುಮಾರ ಶಾಸ್ತ್ರೀಗಳು ಭೇವಿನಹಾಳ, ಹಾಸ್ಯ ಕಲಾವಿದರು ಬಸವರಾಜ ಮಹಾಮನಿ, ಶರಣಗೌಡ ಬೆನಕನಹಳ್ಳಿ, ಭೀಮರೆಡ್ಡಿಗೌಡ ಕುರಾಳ, ವಿಶ್ವನಾಥ ರೆಡ್ಡಿ ಪಾಟೀಲ ಸುಗೂರ ಎನ್, ಬಸ್ಸುಗೌಡ ಮಾಲಿ ಪಾಟೀಲ, ಈರಣ್ಣ ಬಲಕಲ್ ಯಾದಗಿರಿ, ಸಿದ್ರಾಮರೆಡ್ಡಿಗೌಡ ಬೆನಕನಹಳ್ಳಿ,ಡಾ. ವಿರೇಶ ಎಣ್ಣಿ ನಾಲವಾರ, ಎಸ್ ಎಸ್ ಜ್ಯುಗೇರಿ, ಮಲ್ಲಪ್ಪ ಅರಕೇರಿ, ಮಲ್ಲಯ್ಯ ಕಸಬಿ, ಪ್ರಭು ಹೂಗಾರ, ಶಂಕರಗೌಡ ಮಾಸ್ತರ ಶಿಕ್ಷಕರು ಲಿಂಗಸೂಗೂರ, ಬಸವರಾಜ ಹವಾಲ್ದಾರ್, ಸುರೇಶ್ ಕೋಟಿಮನಿ, ಮಹಾಂತೇಶ ಗೌಡರ ಲಿಂಗಸೂಗೂರ, ಮಹಾದೇವ ರೆಡ್ಡಿ ತುಮಕೂರು, ಬಸವರಾಜ ಹಡಪದ ಸುಗೂರ ಎನ್, ವಿಶ್ವನಾಥ ಸ್ವಾಮಿ ನಾಯ್ಕಲ್, ಮಲ್ಲಿಕಾರ್ಜುನ ಬಡಿಗೇರ, ಮಲ್ಲಿನಾಥ ಚಿನ್ನಾ ಪೋಟೋ ಸ್ಟುಡಿಯೋ, ಮಲ್ಲಪ್ಪ ಅರಿಕೇರಿ, ಸಾಬರೆಡ್ಡಿ ಚಿತ್ರಕಲಾ ಶಿಕ್ಷಕರು ಯಾದಗಿರಿ, ಬಾಬು ಪಾಟೀಲ, ಶ್ರೀಕಾಂತ್ ಪಾಟೀಲ ತುಮಕೂರು, ಸಿದ್ದುಗೌಡ ಕುರಾಳ, ರಾಜೇಂದ್ರ ನಾಯ್ಕೊಡಿ, ಭೀಮು ಯಾದಗಿರಿ ಸುಗೂರ ಎನ್, ಸಿದ್ದು ಕರವೇ ಹತ್ತಿಕುಣಿ, ಶರಣು ಹೊಳಮಾರಡಗಿ, ರಾಜು ಚಿಗರಳ್ಳಿ, ಸಂತೋಷ ಗುತ್ತೇದಾರ, ಶರಣಬಸಪ್ಪ ಶಿಕ್ಷಕರು ಡೋಣಗಾಂವ್, ನಾಗೇಶ ಶಿಕ್ಷಕರು ಪತ್ತಾರ, ಬಸವರಾಜ ಶಿಕ್ಷಕರು ತರಕಸಪೇಠ್, ಗಂಗಾಧರ ಶಿಕ್ಷಕರು ಭೀಮನಹಳ್ಳಿ, ಅನೀಲಕುಮಾರ್ ಚವ್ಹಾಣ, ಶರಣು ಬಡಿಗೇರ ಸೇರಿದಂತೆ ಸಾವಿರಾರು ಭಕ್ತರು ಕೂರಿಗೆ ಪೂಜೆಯಲ್ಲಿ ಸಾಂಪ್ರದಾಯಿಕವಾಗಿ ಭಾಗವಹಿಸಿ ಪೂಜ್ಯರ ದರ್ಶನ ಪಡೆದರು.
ನಮ್ಮ ಮಣ್ಣು, ಕೃಷಿ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಇಂತಹ ಆಚರಣೆಗಳು ಸದಾ ಜೀವಂತವಾಗಿರಲಿ ಎಂಬ ಆಶಯ ವ್ಯಕ್ತವಾಯಿತು. ಶ್ರೀ ಭೋಜಲಿಂಗೇಶ್ವರ ಸದ್ಗುರುವಿನ ಕೃಪಾಕಟಾಕ್ಷವು ಸಮಸ್ತ ರೈತ ಬಾಂಧವರ ಮೇಲಿರಲಿ ಎಂದು ಪ್ರಾರ್ಥಿಸಲಾಯಿತು ಎಂದು ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್ ತಿಳಿಸಿದ್ದಾರೆ.
