ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಮಟ್ಟದ ಅಧ್ಯಯನ ಪ್ರವಾಸ ಕಾರ್ಯಕ್ರಮ ಯಶಸ್ವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಚಿತ್ತಾಪುರ ತಾಲೂಕು ವ್ಯಾಪ್ತಿಯಲ್ಲಿ ತಾಲೂಕು ಮಟ್ಟದ ಅಧ್ಯಯನ ಪ್ರವಾಸ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಚಿತ್ತಾಪುರ ತಾಲೂಕಿನ ಹಳೆ ಶಹಾಬಾದ ವಲಯದ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಒಂದು ದಿನದ ಅಧ್ಯಯನ ಪ್ರವಾಸ ಕಾರ್ಯಕ್ರಮದಲ್ಲಿ ಸರ್ಕಾರಿ ಇಲಾಖೆ, ಸ್ವ ಉದ್ಯೋಗ ಘಟಕ, ಮತ್ತು ಕ್ಷೇತ್ರ ಭೇಟಿ ಮಾಡಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಆರತಿ ತುಪ್ಪದ್ ರವರು ಮಹಿಳೆಯರಿಗೆ ಸರ್ಕಾರದಿಂದ ಸಿಗುವ ಶ್ರೀ ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ, ಮಾತೃ ವಂದನಾ, ಮಹಿಳಾ ಉದ್ಯೋಗಿಣಿ ಯೋಜನೆ ಬಗ್ಗೆ ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಭಾಗ್ಯ ಲಕ್ಷ್ಮಿ ಯೋಜನೆಯ ಮಾನದಂಡಗಳ ಬಗ್ಗೆ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ ಮತ್ತು ಮಕ್ಕಳಿಗೆ ಸಿಗುವ ಪೌಷ್ಟಿಕ ಆಹಾರ ಬಳಕೆ ಬಗ್ಗೆ ಮಾಹಿತಿ ನೀಡಿ ಸದುಪಯೋಗ ಪಡೆಯುವ ಬಗ್ಗೆ ತಿಳಿಸಿದರು.
ಅಗ್ನಿ ಶಾಮಕ ಇಲಾಖೆ ಠಾಣಾಧಿಕಾರಿ ನಾಗರಾಜ್ ರವರು ಅಗ್ನಿ ಅವಘಡಗಳು ಸಂಭವಿಸಿದಾಗ ಸಂಪರ್ಕಿಸಬೇಕಾದ ಸಹಾಯವಾಣಿಗಳ ಬಗ್ಗೆ ತಿಳಿಸಿದರು, ಅಡುಗೆ ಅನಿಲ ಪಡೆದುಕೊಳ್ಳಬೇಕಾದರೆ ಗಮನಿಸಬೇಕಾದ ಅಂಶಗಳ ಬಗ್ಗೆ ಮಾಹಿತಿ ನೀಡಿ ಮನೆಯಲ್ಲಿ ಆಕಸ್ಮಿಕವಾಗಿ ಸಿಲಿಂಡರ್ ಲೀಕೇಜ್ ಆದಾಗ ಅಥವಾ ಬೆಂಕಿ ಅವಘದ ಸಂಭವಿಸಿದಾಗ ಬೆಂಕಿ ನಂದಿಸಲು ಉಪಯೋಗಿಸುವ ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸ್ವ ಉದ್ಯೋಗ ಘಟಕ ಭೇಟಿ ನೀಡಿ ಸ್ವ ಸಹಾಯ ಸಂಘದ ಸದಸ್ಯರು ಪ್ರಭಾವತಿ ಅಗರಬತ್ತಿ ತಯಾರಿ, ದೀಪದ ಬತ್ತಿ ತಯಾರಿ, ಧೂಪ ತಯಾರಿ ಮಾಡಿ ಸ್ವ ಉದ್ಯೋಗದಿಂದ ಸ್ವಾವಲಂಬಿ ಜೀವನ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಸ್ಥಳೀಯ ಆರಾಧ್ಯ ದೇವಿಯಾದ ಶ್ರೀ ಯಲ್ಲಮ್ಮ ದೇವಿ ಹಾಗೂ 60 ಕಂಬದ ಗುಡಿ ದರ್ಶನ ಪಡೆಯಲಾಯಿತು.
ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಸರ್ಕಾರಿ ಇಲಾಖೆಯವರಿಗೆ, ಸ್ವ ಉದ್ಯೋಗ ಸದಸ್ಯರಿಗೆ, ವಾಹನ ಚಾಲಕರಿಗೆ, ಒಕ್ಕೂಟ ಅಧ್ಯಕ್ಷರಿಗೆ, ಸೇವಾಪ್ರತಿನಿಧಿ ಹಾಗೂ ಸಂಘದ ಸದಸ್ಯರಿಗೆ ಸಮನ್ವಯಾಧಿಕಾರಿ ಅರ್ಚನಾ ಅವರು ಧನ್ಯವಾದಗಳು ಸಲ್ಲಿಸಿದರು.

