ಕೊಳಗೇರಿ ಅಭಿವೃದ್ಧಿ ಮಂಡಳಿ ಹೋರಾಟ ಸಮಿತಿ ರಚನೆ, ಅಧ್ಯಕ್ಷರಾಗಿ ಲಕ್ಷ್ಮೀಕಾಂತ್ ತಾಂಡೂರಕರ್ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹೋರಾಟ ಸಮಿತಿ ರಚನೆ ಮಾಡಲಾಗಿದ್ದು ಅಧ್ಯಕ್ಷರಾಗಿ ಲಕ್ಷ್ಮೀಕಾಂತ್ ತಾಂಡೂರಕರ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಪಟ್ಟಣದ ನಾಗಾವಿಯ ಅರವತ್ತು ಕಂಬದ ದೇವಸ್ಥಾನದ ಆವರಣದಲ್ಲಿ ನಡೆದ ಸ್ಲಂ ಬೋರ್ಡ್ ನಿವಾಸಿಗಳ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಅಂಬದಾಸ್ ಚವ್ಹಾಣ, ಅಧ್ಯಕ್ಷರಾಗಿ ಲಕ್ಷ್ಮೀಕಾಂತ್ ತಾಂಡೂರಕರ್, ಉಪಾಧ್ಯಕ್ಷರಾಗಿ ಕೃಷ್ಣ ಭೋವಿ, ಜಗನ್ ಕಾಶಿ, ಕಾರ್ಯದರ್ಶಿ ಮಲ್ಲಿಕಾರ್ಜುನ್ ರೆಡ್ಡಿ, ಖಜಾಂಚಿ ಚಂದ್ರಶೇಖರ್ ಕಡೇಸೂರ್, ಉಪ ಖಜಾಂಚಿ ಶಂಕರ್ ಸೋಮ್ಲಾ ರಾಠೋಡ, ಸಹ ಕಾರ್ಯದರ್ಶಿ ಕುಮಾರ್ ಚವ್ಹಾಣ, ಪ್ರಧಾನ ಕಾರ್ಯದರ್ಶಿ ಶಿವರುದ್ರ ಕಟ್ಟಿಮನಿ, ಗೌರವ ಸದಸ್ಯರಾಗಿ ಅಲ್ಲಾಭಕಾಶ್ ಮುಲ್ಲಾವಾಲೆ, ಶಿವಾಜಿ ಸಿಂಧೆ, ಮನೋಹರ ಚವ್ಹಾಣ, ಸಂತೋಷ್ ಎಸ್ ಭಂಗಿ, ನಾಗು ಹೋಳಿಕಟ್ಟಿ, ಸಂತೋಷ್ ಜಾಧವ, ರಾಜು ಗುತ್ತೇದಾರ, ರವಿ ಭೀಮನಹಳ್ಳಿಕರ್, ಹರಿಲಾಲ್ ಜಾಧವ, ಸುನಿಲ್ ರಾಠೋಡ, ನಾಗೇಶ್ ತುಕಾರಾಮ್ ಚವ್ಹಾಣ, ಸುನಿತಾ ಶಿವಾಜಿ ರಾಠೋಡ, ಇಂದಿರಾ ಭಜಂತ್ರಿ, ಮಾಲನ್ ಬಿ, ಕಾಶಮ್ಮ ಶರಣಪ್ಪ ಭಜಂತ್ರಿ ಅವರು ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ಲಕ್ಷ್ಮೀಕಾಂತ್ ತಾಂಡೂರಕರ್ ಮಾತನಾಡಿ, ಕೊಳೆಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ದಿಗ್ಗಾಂವ ಕ್ರಾಸ್ ಕೆಸಿಎಲ್ ಫ್ಯಾಕ್ಟರಿ ಹತ್ತಿರ ಹಾಗೂ ಸಾತನೂರ ರಸ್ತೆಯಲ್ಲಿ ನಿರ್ಮಾಣವಾದ ಜಿ+1 ಸಾವಿರ ಮನೆಗಳಿಗೆ ಮೂಲಭೂತ ಸೌಲಭ್ಯಗಳು ಪಡೆಯುವುದಕ್ಕೆ ಹಾಗೂ ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಸಮಿತಿ ರಚನೆ ಮಾಡಲಾಗಿದೆ, ಹೀಗಾಗಿ ಎಲ್ಲರೂ ಒಗ್ಗೂಡಿ ಈ ಸಮಿತಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

