Oplus_0

ಚಿತ್ತಾಪುರದಲ್ಲಿ ಕೆ.ಡಿ ಡ್ಯಾನ್ಸ್ ಸ್ಟುಡಿಯೋ ಉದ್ಘಾಟನೆ | ಕಲೆಗೆ ಪ್ರೋತ್ಸಾಹ ಅಗತ್ಯ: ದಿಗ್ಗಾಂವ ಶ್ರೀ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ:  ಯಾವುದೇ ಕಲೆ ಇರಲಿ ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ದಿಗ್ಗಾಂವ ಶ್ರೀ ಸಿದ್ದವೀರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಬಜಾಜ್ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ ಡ್ಯಾನ್ಸ್ ಮಾಸ್ಟರ್ ಕುಮಾರ್ ಜಾಧವ್ ಅವರ ಕೆ.ಡಿ ಡ್ಯಾನ್ಸ್ ಸ್ಟುಡಿಯೋ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನೃತ್ಯ ಎನ್ನುವುದು ಜೀವನದ ಅವಿಭಾಜ್ಯ ಅಂಗವಾಗಿದೆ ಹಾಗಾಗಿ ಪ್ರಸ್ತುತ ಚಿಕ್ಕ ಮಕ್ಕಳಿಂದ ದೊಡ್ಡವರ ವರೆಗೆ ಎಲ್ಲರೂ ನೃತ್ಯ ಕಲೆಯಲ್ಲಿ ಆಸಕ್ತರಾಗಿದ್ದಾರೆ ಎಂದರು.

ಚಿತ್ತಾಪುರ ಪಟ್ಟಣದಲ್ಲಿ ಕುಮಾರ್ ಜಾಧವ್ ನೇತೃತ್ವದಲ್ಲಿ ಪ್ರಾರಂಭವಾದ ಡ್ಯಾನ್ಸ್ ತರಬೇತಿ ಕೇಂದ್ರದ ಬೆಳವಣಿಗೆಗೆ ಎಲ್ಲರೂ ಸಹಕರಿಸಿ ಪ್ರೋತ್ಸಾಹ ಮಾಡಬೇಕು ಎಂದು ಕರೆ ನೀಡಿದರು.

ಬಂಜಾರ ಸಮಾಜದ ಶ್ರೀ ಅನಿಲ್ ಮಹಾರಾಜ್ ಮಾತನಾಡಿ, ಡ್ಯಾನ್ಸ್ ಕಲೆಯಿಂದ  ಏಕಾಗ್ರತೆ ಮೂಡುವುದು ಹಾಗೂ ದೇಹದ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸದೃಢತೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಡ್ಯಾನ್ಸ್ ಮಾಸ್ಟರ್ ಕುಮಾರ್ ಜಾಧವ್ ಮಾತನಾಡಿ, ಚಿತ್ತಾಪುರ ಪಟ್ಟಣದಲ್ಲಿ ನೃತ್ಯ (ಡ್ಯಾನ್ಸ್) ತರಬೇತಿ ಕೇಂದ್ರದ ಕೊರತೆ ಇರುವುದನ್ನು ಮನಗಂಡು ನಾನು ಸ್ಥಳೀಯ ಶಾಲಾ ಕಾಲೇಜುಗಳ ಮಕ್ಕಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಡ್ಯಾನ್ಸ್ ಕೇಂದ್ರ ಪ್ರಾರಂಭ ಮಾಡಿದ್ದೇನೆ. ಹೀಗಾಗಿ ತಾಲೂಕಿನ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ, ಸಂತೋಷ ಚವ್ಹಾಣ, ವಿಶಾಲ್ ನಾಯಕ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಅನಮೋಲ್ ಬಜಾಜ್, ಗೋಪಾಲ್ ಜಾಧವ್, ಸುಭಾಷ್ ಜಾಧವ್, ಅನಿಲ್ ಚವ್ಹಾಣ, ಬಸವರಾಜ ಪಾಟೀಲ್ ದಂಡಗುಂಡ, ಸುನೀಲ್ ರಾಠೋಡ ಬಾಹರಪೇಟ್, ಸುಧೀರ್ ರಾಠೋಡ, ಶಾಮ್ ಚವ್ಹಾಣ, ಮೋಹನ್ ಚವ್ಹಾಣ, ರವಿ ಕಾರಬಾರಿ, ಉಮೇಶ್ ರಾಠೋಡ, ವಿಕಾಸ್ ಜಾಧವ್, ಸುಭಾಷ್ ಬೆನಕನಳ್ಳಿ ಸೇರಿದಂತೆ ಇತರರು ಇದ್ದರು. ಶರಣು ಉಡುಗಿ ನಿರೂಪಿಸಿ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!