Oplus_0

ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ, ಠಿಕಾಣಿ ಹೂಡಿದ ಬಿಜೆಪಿ ಮುಖಂಡರು 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ನಿಮಿತ್ತ ಬಿಜೆಪಿ ಮುಖಂಡರು ಮತಗಟ್ಟೆ ಸಮೀಪ ಹಾಕಲಾಗಿದ್ದ ಟೆಂಟಿನಲ್ಲಿ ಠಿಕಾಣಿ ಹೂಡಿ ಶಿಕ್ಷಕ ಮತದಾರರನ್ನು ಮನವೊಲಿಸುವ ಅಂತಿಮ ಹಂತದ ಕಸರತ್ತು ನಡೆಸುತ್ತಿರುವುದು ಕಂಡು ಬಂತು.

ಈ ವೇಳೆ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಪರವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ತಾಲೂಕು ಉಸ್ತುವಾರಿ ಶಶಿಕಲಾ ತೆಂಗಳಿ ಮತಗಟ್ಟೆಗೆ ಭೇಟಿ ನೀಡಿ ಬಿಜೆಪಿ ಮುಖಂಡರೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಹಿರಿಯ ನಾಯಕ ಚಂದ್ರಶೇಖರ ಅವಂಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್, ನಗರಾಧ್ಯಕ್ಷ ಆನಂದ ಪಾಟೀಲ ನರಬೋಳ, ರೈತ ಮೋರ್ಚಾ ಅಧ್ಯಕ್ಷ ರಮೇಶ್ ಬೊಮ್ಮನಳ್ಳಿ, ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ಸುರೇಶ್ ರಾಠೋಡ, ಮಲ್ಲಿಕಾರ್ಜುನ ಎಮ್ಮೆನೋರ, ದೀಪಕ್ ಹೊಸ್ಸುರಕರ್, ತಮ್ಮಣ್ಣ ಡಿಗ್ಗಿ, ಶಾಂತಕುಮಾರ ಮಳಖೇಡ, ನಾಗುಬಾಯಿ ಜಿತುರೆ, ಅಕ್ಕಮಹಾದೇವಿ ನಾಗೇಶ್, ಪ್ರಸಾದ್ ಅವಂಟಿ, ಎಸ್.ಟಿ ಮೋರ್ಚಾ ತಾಲೂಕ ಅಧ್ಯಕ್ಷ ರಾಜು ದೊರೆ, ಬಾಲಾಜಿ ಬುರಬುರೆ, ಕೋಟೇಶ್ವರ ರೇಶ್ಮಿ, ಸಿದ್ದರಾಮೇಶ್ವರ್ ರೇಶ್ಮಿ, ದಶರಥ ದೊಡ್ಡಮನಿ, ಗುರುರಾಜ್ ಪೂಜಾರಿ ದಂಡಗುಂಡ, ಸಂಗಮೇಶ ಪಾಟೀಲ, ರಮೇಶ್ ಕಾಳನೂರು, ಚಂದ್ರಶೇಖರ ಕಡೇಸೂರ, ಶರಣು ಸಿದ್ರಾಮಗೋಳ, ಮೇಘರಾಜ್ ಗುತ್ತೇದಾರ, ಹನುಮಾನ್ ಜೀ, ವೀರಶೆಟ್ಟಿ ಮೊಗಲಾ, ಮಹೇಶ್ ಬಾಳಿ, ಶ್ರೀಕಾಂತ್ ಸುಲೇಗಾಂವ, ಶರಣು ತೊನಸನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!