Oplus_0

ಕುರುಬ ಸಮಾಜದ ತಾಲೂಕು ಅಧ್ಯಕ್ಷರಾಗಿ ಡಬ್ಬಿಗೇರ್ ಆಯ್ಕೆ | ಕುರುಬ ಸಮಾಜದ ಏಳಿಗೆಗೆ ಸಂಘಟಿತರಾಗಿ: ಭಲವಂತರಾಯ್ ಪಾಟೀಲ ಕರೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಹಿಂದುಳಿದ ಕುರುಬ ಸಮಾಜದ ಏಳ್ಗೆಗಾಗಿ ಎಲ್ಲರೂ ಸಂಘಟಿತರಾಗಬೇಕು ಎಂದು ಕುರುಬ ಸಮಾಜದ ಜಿಲ್ಲಾಧ್ಯಕ್ಷ ಭಲವಂತರಾಯ್ ಪಾಟೀಲ ಕರೆ ನೀಡಿದರು.

ಪಟ್ಟಣದ ಕನಕ ಭವನದಲ್ಲಿ ಶುಕ್ರವಾರ ನಡೆದ ತಾಲೂಕು ಕುರುಬ ಸಮಾಜದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜವನ್ನು ತುಳಿಯುವುದಾಗಲಿ ಹಿಂದಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಡಿ ಈ ನಿಟ್ಟಿನಲ್ಲಿ ಒಳ್ಳೆಯದು ಮಾಡುವುದಕ್ಕೆ ಆಗದಿದ್ದರೂ ಪರವಾಗಿಲ್ಲ ಆದರೆ ಕೆಟ್ಟದನ್ನು ಮಾತ್ರ ಮಾಡಬೇಡಿ ಎಂದು ಕಿವಿಮಾತು ಹೇಳಿದರು. ಮುಂಬರುವ ಜಿಪಂ, ತಾಪಂ, ಗ್ರಾಪಂ, ಎಂಎಲ್ಸಿ ಸೇರಿದಂತೆ ಇತರೇ ಚುನಾವಣೆಗಳಲ್ಲಿ ಕುರುಬ ಸಮಾಜಕ್ಕೆ ಸಿಗಬೇಕಾದ ಪಾಲು ನಿರ್ಭಯವಾಗಿ ಕೇಳಬೇಕು ಎಂದು ಹೇಳಿದರು. ಮೊದಲು ಸಮಾಜ ನಂತರ ಪಕ್ಷ ಇದು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರತೂರ್ ಮಾತನಾಡಿ, ಹಿಂದೊಮ್ಮೆ ಚಿತ್ತಾಪುರ ತಾಲೂಕಿನಲ್ಲಿ ಕುರುಬ ಸಮಾಜದ ಸಂಘಟನೆ ಇಲ್ಲದೆ ಇರುವ ಸಮಯದಲ್ಲಿ ನಾವುಗಳು ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿ ಸಂಘಟನೆ ಮಾಡಿದ್ದರಿಂದ ಇಂದು ಸಮಾಜ ಮುಖ್ಯವಾಹಿನಿಗೆ ಬಂದಿದೆ. ಹಾಗಾಗಿ ಈಗಿನ ಅಧ್ಯಕ್ಷರು ಪದಾಧಿಕಾರಿಗಳು ಮುಂದುವರಿಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.

ಹಿರಿಯ ಮುಖಂಡ ಮಲ್ಲಿಕಾರ್ಜುನ ಪೂಜಾರಿ ಭಂಕೂರ ಮಾತನಾಡಿ, ಸಂಘಟಿತರಾದರೆ ಮಾತ್ರ ಬೆಲೆ ಬರಲಿದೆ ಹೀಗಾಗಿ ಎಲ್ಲರೂ ಸಂಘಟನಾ ಮನೋಭಾವ ಬೆಳೆಸಿಕೊಳ್ಳಬೇಕು. ಅಧ್ಯಕ್ಷರಾದರು ಮನೆಯಲ್ಲಿ ಕುಳಿತುಕೊಳ್ಳದೇ ಹಳ್ಳಿ ಹಳ್ಳಿಗೆ ಹೋಗಿ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದು ಹೇಳಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು 50 ಲಕ್ಷ ವೆಚ್ಚದಲ್ಲಿ ಕನಕ ಭವನ ನಿರ್ಮಿಸಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಹೀಗಾಗಿ ಇದಕ್ಕೆ ಇನ್ನೂ 50 ಲಕ್ಷ ನೀಡಲು ಸಿದ್ಧರಿದ್ದಾರೆ ಎಂದು ತಿಳಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ:

ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಡಬ್ಬಿಗೇರ್ ಹಣಿಕೇರಾ, ಉಪಾಧ್ಯಕ್ಷರಾಗಿ ನಾಗೇಶ್ ಪೂಜಾರಿ ಚಿತ್ತಾಪುರ, ಕಾರ್ಯದರ್ಶಿಯಾಗಿ ಪ್ರದೀಪ್ ಪೂಜಾರಿ ಕದ್ದರಗಿ, ಕಾರ್ಯಾಧ್ಯಕ್ಷರಾಗಿ ಯಲ್ಲಾಲಿಂಗ ಪೂಜಾರಿ ಕನಗನಳ್ಳಿ, ಖಜಾಂಚಿ ಹಂಪಯ್ಯ ಪೂಜಾರಿ ಅಳ್ಳೋಳ್ಳಿ ಅವರನ್ನು ಆಯ್ಕೆ ಮಾಡಲಾಯಿತು. ನಂತರ ನೂತನ ಪದಾಧಿಕಾರಿಗಳಿಗೆ ಮುಖಂಡರು ಸನ್ಮಾನಿಸಿದರು.

ಸಮಾಜದ ನಿಕಟಪೂರ್ವ ಅಧ್ಯಕ್ಷ ಬಸವರಾಜ ಹೊಸಳ್ಳಿ, ಮಾಜಿ ಅಧ್ಯಕ್ಷ ಜುಮ್ಮಣ್ಣ ಪೂಜಾರಿ ಅವರು ಮಾತನಾಡಿದರು. ತಿಪ್ಪಣ್ಣ ವಗ್ಗರ್, ರವಿಗೊಂಡ ಕಟ್ಟಿಮನಿ, ನಿರ್ಮಲಾ ಬರಗಲಿ, ಯಲ್ಲಾಲಿಂಗ ಪೂಜಾರಿ ಮುಗುಟಿ, ಸೂರ್ಯಕಾಂತ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ ಮೊಗಲಾ, ಜಗನ್ನಾಥ ಆಲೂರು, ಬಸವರಾಜ ಪೂಜಾರಿ ಮೊಗಲಾ, ಹಣಮಂತ ಪೂಜಾರಿ, ಶಾಂತಿಯಮ್ಮ ಹಣಿಕೇರಾ, ಈರಣ್ಣ ಪೂಜಾರಿ, ಬಸವರಾಜ ಕೇಶವಾರ, ಮಲ್ಲು ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಂತೋಷ ಪೂಜಾರಿ ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!