Oplus_0

ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ, ಚಿತ್ತಾಪುರದಲ್ಲಿ ಶೇ.84.38 ಮತದಾನ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ನಿಮಿತ್ತ ಶುಕ್ರವಾರ ನಡೆದ ಮತದಾನದಲ್ಲಿ ತಾಲೂಕಿನ ಚಿತ್ತಾಪುರ ಮತ್ತು ವಾಡಿ ಪಟ್ಟಣದ ಎರಡು ಮತಗಟ್ಟೆಗಳಲ್ಲಿ ಒಟ್ಟು ಶೇ.84.38 ಮತದಾನವಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.

ಪಟ್ಟಣದ ಪ್ರಜಾ ಸೌಧದ ಮತಗಟ್ಟೆ ಸಂಖ್ಯೆ -92 ರಲ್ಲಿ ಒಟ್ಟು 176 ಮತದಾರರ ಪೈಕಿ ಮಹಿಳಾ 64, ಪುರುಷ 84 ಸೇರಿದಂತೆ ಒಟ್ಟು 148 ಶಿಕ್ಷಕ ಮತದಾರರು ಮತ ಚಲಾವಣೆ ಮಾಡಿದ್ದು ಶೇ.84.09 ಮತದಾನವಾಗಿದೆ.

ವಾಡಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 93 ರಲ್ಲಿ ಒಟ್ಟು 125 ಮತದಾರರ ಪೈಕಿ ಮಹಿಳಾ 57, ಪುರುಷ 49 ಸೇರಿದಂತೆ ಒಟ್ಟು 106 ಶಿಕ್ಷಕ ಮತದಾರರು ಮತ ಚಲಾಯಿಸಿದ್ದು, ಶೇ.84.8 ಮತದಾನವಾಗಿದೆ ಎಂದು ತಿಳಿಸಿದ್ದಾರೆ.

ಮತಗಟ್ಟೆ ಕೇಂದ್ರಗಳಿಗೆ ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿ, ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಭೇಟಿ ನೀಡಿದ್ದರು, ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು.

Spread the love

Leave a Reply

Your email address will not be published. Required fields are marked *

error: Content is protected !!