ಚಿತ್ತಾಪುರ ಡಾ.ಬಿ.ಆರ್.ಅಂಬೇಡ್ಕರ ಭವನ ಉದ್ಘಾಟನಾ ಸಮಿತಿಯ ಪದಾಧಿಕಾರಿಗಳ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಮುಖಂಡರ ನೇತೃತ್ವದಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ ಭವನ ಉದ್ಘಾಟನಾ ಸಮಾರಂಭದ ಪೂರ್ವಭಾವಿ ಸಭೆ ನಡೆಯಿತು. ಈ ಸಭೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ ಭವನ ಉದ್ಘಾಟನಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಶಿವರುದ್ರ.ಎಸ್.ಭೀಣ್ಣಿ (ಗೌರವಾಧ್ಯಕ್ಷರು), ಮಲ್ಲಿಕಾರ್ಜುನ.ಎಂ.ಬೆಣ್ಣೂರಕರ್ (ಅಧ್ಯಕ್ಷರು), ಉದಯಕುಮಾರ್ ಸಾಗರ, ದೇವಿಂದ್ರ ಕುಮಸಿ, ಶ್ರೀಕಾಂತ ಶಿಂಧೆ, ರಾಜಣ್ಣ ಹುಂಡೇಕಾರ, ಬಾಬುರಾವ ಹೇರೂರ, ನಾಗಪ್ಪ ಕಲ್ಲಕ್ (ಉಪಾಧ್ಯಕ್ಷರು), ಸಂಜಯ ಬುಳಕರ್, ಮಲ್ಲಿಕಾರ್ಜುನ ಮುಡಬೂಳಕರ್ (ಪ್ರದಾನ ಕಾರ್ಯದರ್ಶಿಗಳು), ಜಗನ್ನಾಥ ಮುಡಬೂಳಕರ್, ಸೂರಜ್ ಕಲ್ಲಕ್ (ಸಂಘಟನಾ ಕಾರ್ಯದರ್ಶಿಗಳು), ರವಿ ಸಾಗರ, ಬಸವರಾಜ ಮುಡಬೂಳಕರ್, ದಯಾಸಾಗರ ಚಿಟ್ಟೆಕಾರ, ಶರಣಬಸಪ್ಪ ಮರಗೋಳ, ರಾಜು ಬುಳಕರ್ (ಸಹ ಕಾರ್ಯದರ್ಶಿಗಳು), ಲೋಹಿತ ಮುದ್ದಡಗಿ (ಖಜಾಂಚಿ).
ಸಮಿತಿಯ ನೂತನ ಗೌರವಾಧ್ಯಕ್ಷ ಶಿವರುದ್ರ ಭೀಣ್ಣಿ ಮತ್ತು ಅಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್ ಅವರಿಗೆ ಮುಖಂಡರು ಸನ್ಮಾನಿಸಿ ಗೌರವಿಸಲಾಯಿತು.
ಸಭೆಯಲ್ಲಿ ಚಿತ್ತಾಪುರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ಭವನ ಉದ್ಘಾಟನೆ ಬಗ್ಗೆ, ಬಸ್ ನಿಲ್ದಾಣ ಎದುರುಗಡೆ ಇರುವ ಬುದ್ಧವಿಹಾರದ ಬಗ್ಗೆ, ಸನ್ನತಿ ಕನಗನಹಳ್ಳಿ ಬುದ್ಧವಿಹಾರ ಬಗ್ಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅ.25 ರಂದು ಬೇಟಿಯಾಗಿ ಮನವಿ ಸಲ್ಲಿಸಲು ಸಭೆಯಲ್ಲಿ ತಿರ್ಮಾನಿಸಲಾಯಿತು. ಹಾಗೂ ಡಾ.ಬಿ.ಆರ್.ಅಂಬೇಡ್ಕರರವರ ನಿಂತಿರುವ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಹಾಗೂ ಡಾ.ಬಿ.ಆರ್.ಅಂಬೆಡ್ಕರ ಭವನ ಉದ್ಘಾಟನಾ ಕಾರ್ಯಕ್ರಮದ ಸಮಿತಿ ರಚಿಸಲು ತಿರ್ಮಾನಿಸಲಾಯಿತು ಎಂದು ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಎಂ.ಬೆಣ್ಣೂರಕರ್ ತಿಳಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಶಂಭುಲಿಂಗ ಗುಂಡಗುರ್ತಿ, ಶಿವರುದ್ರ ಭೀಣ್ಣಿ, ಗ್ರಾ.ಪಂ ಮಾಜಿ ಅಧ್ಯಕ್ಷ ಸುನೀಲ್ ದೊಡ್ಡಮನಿ, ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ, ಪುರಸಭೆ ಮಾಜಿ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್, ಪ್ರಶಾಂತ್ ಹೇರೂರು, ಶರಣು ತಲಾಟಿ ಸೇರಿದಂತೆ ಅನೇಕರು ಇದ್ದರು.