ಕಾರ್ತಿಕ ಮಾಸದ ಪ್ರಯುಕ್ತ ಒಂದು ತಿಂಗಳ ದೀಪಾರಾಧನೆ: ಕರಬಸಯ್ಯ ಶಾಸ್ತ್ರೀ
ನಾಗಾವಿ ಎಕ್ಸಪ್ರೆಸ್
ಕಾಳಗಿ: ತಾಲೂಕಿನ ರೇವಗ್ಗಿ-ರಟಕಲ್ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ನವೆಂಬರ್ 9 ರಿಂದ ಡಿಸೆಂಬರ್ 9 ರವರೆಗೆ (ಒಂದು ತಿಂಗಳವರೆಗೆ) ಕಾರ್ತಿಕ ಮಾಸದ ದೀಪ ಹಚ್ಚುವ ಸಂಕಲ್ಪ ಮಾಡಲಾಗಿದೆ ಎಂದು ವೇದಮೂರ್ತಿ ಕರಬಸಯ್ಯ ಶಾಸ್ತ್ರೀ ಚಿತ್ತಾಪುರ ತಿಳಿಸಿದ್ದಾರೆ.
ಕಾರ್ತಿಕ ಮಾಸದ ಪ್ರಯುಕ್ತವಾಗಿ ಒಂದು ತಿಂಗಳ ದೀಪಾರಾಧನೆ ಕೊನೆಯಲ್ಲಿ ಸಾವಿರದ ಎಂಟು ದೀಪಾರಾಧನೆ ಮಾಡಲಾಗುವುದು. ಪ್ರತಿನಿತ್ಯ ಚಿತ್ತಾಪುರದಿಂದ ರೇವಗ್ಗಿ ಕ್ಷೇತ್ರಕ್ಕೆ ಹೋಗಿ ನಾಡಿನ ಜನತೆಗೆ ಸುಖ, ಶಾಂತಿ, ನೆಮ್ಮದಿ, ಮಳೆ ಬೆಳೆ ಚೆನ್ನಾಗಿ ಬರಲಿ ಅಂತ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

