Oplus_0

ರಾಷ್ಟ್ರೀಯ ಗೋರ ಸೇನಾ ಚಿತ್ತಾಪುರ ತಾಲೂಕು ಘಟಕ ರಚನೆ, ತಾಲೂಕು ಅಧ್ಯಕ್ಷರಾಗಿ ವಿಜಯಕುಮಾರ ಚವ್ಹಾಣ ಆಯ್ಕೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ರಾಷ್ಟ್ರೀಯ ಗೋರ ಸೇನಾ ಚಿತ್ತಾಪುರ ತಾಲೂಕು ಘಟಕ ರಚನೆ ಮಾಡಲಾಗಿದ್ದು, ತಾಲೂಕು ಅಧ್ಯಕ್ಷರಾಗಿ ವಿಜಯಕುಮಾರ ಚವ್ಹಾಣ ಯಾಗಾಪೂರ ಅವರನ್ನು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ನೆಹರು ಜಾಟೊತ್ ಇವರ ಸಮ್ಮುಖದಲ್ಲಿ  ಆಯ್ಕೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ರವಿ ಕಾರಭಾರಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗೋರ ಸೇನಾ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಂಜಾರಾ ಸಮಾಜದ ಸರ್ವತೋಮುಖ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಮತ್ತು ಕಂದಾಯ ತಾಂಡಾಗಳ ದರ್ಜೆ ಮತ್ತು ಸಂವಿಧಾನಿಕ ಸಾಮಾಜಿಕ ಹಕ್ಕುಗಳು ಪಡೆಯಲು ಹಾಗೂ ಸಮಾಜದ ಮೇಲೆ ಆಗುತ್ತಿರುವ ಶೋಷಣೆ ವಿರುದ್ಧ ಹೋರಾಟ ಮಾಡುವುದು ಗೋರ ಸೇನಾ ಸಂಘಟನೆಯ ಉದ್ದೇಶವಾಗಿದೆ ಎಂದು ಹೇಳಿದರು.

ತಾಲೂಕಿನಾದ್ಯಂತ ತಾಂಡಾಗಳಲ್ಲಿ ತಾಂಡಾ ಘಟಕ ರಚನೆ ಮಾಡುವ ನಿಟ್ಟಿನಲ್ಲಿ ಸಂಘಟನೆಯನ್ನು ಬಲಪಡಿಸಿ ವ್ಯಾಸನ ಮುಕ್ತ, ವರದಕ್ಷಣೆ ಮುಕ್ತ ತಾಂಡಾಗಳನ್ನು ಸಮಾಜದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ನೂತನ ಪದಾಧಿಕಾರಿಗಳು: 

ಅಧ್ಯಕ್ಷರಾಗಿ ವಿಜಯಕುಮಾರ ಚವ್ಹಾಣ ಯಾಗಾಪೂರ, ಕಾರ್ಯಾಧ್ಯಕ್ಷರಾಗಿ ಮೂರ್ತಿ ಚವ್ಹಾಣ, ಉಪಾಧ್ಯಕ್ಷರಾಗಿ ದಿನೇಶ್ ರಾಠೋಡ ಹಣಿಕೇರಾ, ಅನಿಲ್ ವಾಲ್ಮೀಕಿ, ರಾಜು ರಾಮತೀರ್ಥ, ಆನಂದ ಜಾಧವ, ಕಾರ್ಯದರ್ಶಿಯಾಗಿ ಆಕಾಶ್ ಚವ್ಹಾಣ, ಸಹಕಾರ್ಯದರ್ಶಿ ನೆಹರು ಪವಾರ್, ಖಜಾಂಚಿ ಶ್ರೀಕಾಂತ್ ರಾಠೋಡ, ನಗರಾಧ್ಯಕ್ಷರಾಗಿ ಗಣೇಶ್ ಚವ್ಹಾಣ, ಕಾರ್ಯದರ್ಶಿ ಸಿದ್ರಾಮ್ ಭೋಜು ರಾಠೋಡ, ಕಾರ್ಯಾಧ್ಯಕ್ಷ ರಾಮು ಚವ್ಹಾಣ, ಉಪಾಧ್ಯಕ್ಷರಾಗಿ ತಿರುಪತಿ ರಾಠೋಡ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಮುಖಂಡರಾದ ಅಶ್ವಥ್ ರಾಠೋಡ, ಶಿವರಾಮ್ ಪವಾರ್, ಕುಮಾರ್ ಚವ್ಹಾಣ ಯಾಗಾಪೂರ, ಶರಣಕುಮಾರ್ ಚವ್ಹಾಣ ಯಾಗಾಪೂರ, ರವಿ ರಾಠೋಡ ಯಾಗಾಪೂರ, ಮನೋಜ್ ರಾಠೋಡ, ರಾಮು ರಾಠೋಡ ವಾಡಿ, ಸಂಜು ಜಾಧವ ವಾಡಿ, ಸೀತಾರಾಮ ರಾಠೋಡ ಯಡ್ರಾಮಿ, ಶಂಕರ್ ರಾಠೋಡ ನಾಲವಾರ, ಶಂಕರ್ ರಾಠೋಡ ಬೆಳಗೇರಿ, ಜಗದೀಶ್ ಪವಾರ್, ಸುರೇಶ್ ಚವ್ಹಾಣ ಸೇರಿದಂತೆ ಇತರರು ಇದ್ದರು.

“ಮುಂಬರುವ ದಿನಗಳಲ್ಲಿ ತಾಲೂಕಿನ ಪ್ರತಿ ತಾಂಡಾಗಳಲ್ಲಿ ಗೋರ ಸೇನಾ ಶಾಖೆಗಳನ್ನು ಸ್ಥಾಪಿಸಲಾಗುವುದು ಮತ್ತು ಸಮಾಜದ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಲಾಗುವುದು”.-ವಿಜಯಕುಮಾರ ಚವ್ಹಾಣ ಯಾಗಾಪೂರ ನೂತನ ತಾಲೂಕು ಅಧ್ಯಕ್ಷರು.

Spread the love

Leave a Reply

Your email address will not be published. Required fields are marked *

You missed

error: Content is protected !!