ನಾಗಾವಿ ಎಕ್ಸಪ್ರೆಸ್ ಸುದ್ದಿಯ ಪರಿಣಾಮ
ಚಿತ್ತಾಪುರ ಮಹಿಳಾ ಶೌಚಾಲಯ ಗಿಡಗಂಟಿಗಳು ತೆರವುಗೊಳಿಸಿದ ಪುರಸಭೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಪುರಸಭೆಯ ವಾರ್ಡ್ ಸಂಖ್ಯೆ 15 ರ ವ್ಯಾಪ್ತಿಯಲ್ಲಿ ಬರುವ ಒಂಬತ್ತು ಕಮಾನ್ ಏರಿಯಾದ ಮಹಿಳಾ ಶೌಚಾಲಯ ಅವ್ಯವಸ್ಥೆಯಿಂದ ಮಹಿಳೆಯರು ಶೌಚಕ್ಕಾಗಿ ಪರದಾಡುತ್ತಿದ್ದಾರೆ ಹೀಗಾಗಿ ಪುರಸಭೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ದುರಸ್ತಿ ಕಾರ್ಯ ಮಾಡಬೇಕು ಎಂದು ಪುರಸಭೆ ಸದಸ್ಯ ಶ್ಯಾಮ್ ಮೇಧಾ ಅವರು ಬೆಳಿಗ್ಗೆ ಆಗ್ರಹಿಸಿದ ನಾಗಾವಿ ಎಕ್ಸಪ್ರೆಸ್ ಸುದ್ದಿಗೆ ಪುರಸಭೆ ಸ್ಪಂದಿಸುವ ಮೂಲಕ ಸಾಯಂಕಾಲ ಶೌಚಾಲಯದ ಸುತ್ತ ಬೆಳೆದಿದ್ದ ಗಿಡಗಂಟಿಗಳು ತೆರೆವುಗೊಳಿಸುವ ಮೂಲಕ ಸ್ವಚ್ಛತೆ ಕಾರ್ಯ ಮಾಡಿದೆ.
ಶೌಚಾಲಯಕ್ಕೆ ಹೋಗುವ ರಸ್ತೆ ಹಾಗೂ ಸುತ್ತ ಗಿಡಗಂಟಿಗಳು ಬೆಳೆದಿದ್ದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ ಹೀಗಾಗಿ ಮಹಿಳೆಯರು ಆತಂಕದಲ್ಲಿದ್ದಾರೆ. ಹೊಸ ಶೌಚಾಲಯ ನಿರ್ಮಾಣ ಆಗುವವರೆಗೆ ಈಗಿರುವ ಶೌಚಾಲಯದ ರಿಪೇರಿ ಮಾಡಿಸಿ ಬೆಳೆದಿರುವ ಗಿಡಗಂಟಿಗಳು ತೆರವುಗೊಳಿಸಿ ಮಹಿಳೆಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬೆಳಿಗ್ಗೆ ಒತ್ತಾಯಿಸಿದ್ದೆ, ಇದಕ್ಕೆ ಪುರಸಭೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸಂಜೆ ಹೊತ್ತಿಗೆ ಸಮಸ್ಯೆ ಬಗೆಹರಿಸಿದ್ದು ತುಂಬಾ ಖುಷಿಯನ್ನುಂಟು ಮಾಡಿದೆ ಅಲ್ಲದೇ ಇಲ್ಲಿನ ಮಹಿಳೆಯರು ಕೂಡ ಪುರಸಭೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಪುರಸಭೆ ಸದಸ್ಯ ಶ್ಯಾಮ್ ಮೇಧಾ ತಿಳಿಸಿದ್ದಾರೆ. ಜನಪರ ಸುದ್ದಿ ಪ್ರಕಟಿಸಿದ ನಾಗಾವಿ ಎಕ್ಸಪ್ರೆಸ್ ಮೀಡಿಯಾ ಕ್ಕೂ ಧನ್ಯವಾದಗಳು ತಿಳಿಸಿದ್ದಾರೆ.