ಒಳ ಮೀಸಲಾತಿ ಆಗುವವರೆಗೂ ನೇಮಕಾತಿ ತಡೆಹಿಡಿದಿದ್ದಕ್ಕೆ ಸ್ವಾಗತ, ಮೂರು ತಿಂಗಳ ಕಾಲಾವಕಾಶಕ್ಕೆ  ಬೆಳಮಗಿ ತೀವ್ರ ಖಂಡನೆ

ನಾಗಾವಿ ಎಕ್ಸಪ್ರೆಸ್

ಶಹಾಬಾದ: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟದಲ್ಲಿ ಒಳ ಮಿಸಲಾತಿ ಜಾರಿ ಯಾಗುವವರೆಗೂ ನೇಮಕಾತಿ ತಡೆದು ತಡೆ ಹಿಡಿದಿರುವ ಕ್ರಮವನ್ನು ಮಾದಿಗ ಸಮಾಜ ಸ್ವಾಗತಿಸುತ್ತದೆ ಎಂದು ಶಹಾಬಾದ ಮಾದಿಗ ಸಮಾಜದ ಯುವ ಮುಖಂಡ ರವಿ ಬೆಳಮಗಿ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಒಳಮೀಸಲಾತಿಗೆ ಜಾರಿಗೆ ಆಗುವವರೆಗೂ ಸಚಿವ ಸಂಪುಟ ಅನುಮೋದನೆ ನೀಡಿ ಮೂರು ತಿಂಗಳ ಒಳಗಾಗಿ ಒಳಮೀಸಲಾತಿ ಜಾರಿಗೆ ಮಾಡುತ್ತೇವೆ. ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾಗುವವರೆಗೂ ವಿವಿಧ ನೇಮಕಾತಿ ತಡೆ ನೀಡಿರುವುದಕ್ಕೆ ಮಾದಿಗ ಸಮಾಜದ

ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗವು ವೈಜ್ಞಾನಿಕ ವರದಿಯನ್ನು ಸರಕಾರಕ್ಕೆ ಒಪ್ಪಿಸಿದೆ. ಮತ್ತೆ ಮೂರು ಬಾರಿ ಸುಪ್ರೀಂ ಕೋರ್ಟ್ ಒಳ ಮೀಸಲಾತಿಯು ಆಯಾ ರಾಜ್ಯ ಸರ್ಕಾರಗಳು ನೀಡಬಹುದಾಗಿದೆ ಎಂದು ಐತಿಹಾಸಿಕ ತೀರ್ಪು ನೀಡಿದಾಗಿದೆ. ಇಷ್ಟಾದರೂ ರಾಜ್ಯ ಸರ್ಕಾರ ಮತ್ತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವ ಆಯೋಗ ರಚನೆ ಮಾಡಿ ವರದಿ ತರಿಸಿ, ಮೂರು ತಿಂಗಳಲ್ಲಿ ಜಾರಿಗೆ ಮಾಡುತ್ತೇವೆ. ಸರಕಾರ ಈಗಾಗಲೇ ಮಾತಿನಂತೆ ಜಾರಿಗೆ ಮಾಡಬೇಕು. ಸರಕಾರದ ಉದ್ದೇಶ ಉಪ ಚುನಾವಣೆ ಆಗೋವರೆಗೂ ಮಾದಿಗ ಸಮುದಾಯದವರು ಕಾಂಗ್ರೆಸ್ ಪರ ಮತದಾನ ಮಾಡಬೇಕೆಂದು ಒಂದು ಕಲ್ಪನೆಯಲ್ಲಿ ಇದ್ದಿದ್ದರೆ ಅದಕ್ಕಾಗಿ ಮಾದಿಗ ಸಮುದಾಯದ ಜೊತೆ ಸರಕಾರ ಚದುರಂಗ ಆಟ ಆಡುತ್ತಿದೆ ಈ ಮೂಲಕ ಸುಪ್ರೀಂ ಆದೇಶಕ್ಕೆ ಬೆಲೆ ನೀಡದೇ ಈಗ ಮತ್ತೆ ಮೂರು ತಿಂಗಳ ಕಾಲಾವಕಾಶ ತೆಗೆದುಕೊಂಡು ವಿನಾಕಾರಣ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಸಮುದಾಯದವರು ಕಾಂಗ್ರೆಸ್ ಪಕ್ಷಕ್ಕೆ ಮತದಾನ ಹಾಕಬೇಕೆಂಬ ಒಂದು ಗುರಿ ಇಟ್ಟುಕೊಂಡು ಮೂರು ತಿಂಗಳ ಕಾಲ ಕಾಲಾವಕಾಶವನ್ನು ತೆಗೆದುಕೊಂಡಂತೆ ಸಿದ್ದರಾಮಯ್ಯನವರು ನೀವು ಮನಸ್ಸು ಮಾಡಿದರೆ ಇದೇ ಸಚಿವ ಸಂಪುಟದಲ್ಲಿ ಜಾರಿಗೆ ಮಾಡಲು ಅವಕಾಶವಿತ್ತು. ತಾವು ಯಾಕೆ ಮಾಡಿಲ್ಲ? ಎಂಬ ಪ್ರಶ್ನೆಗೆ ಮಾದಿಗ ಸಮುದಾಯಕ್ಕೆ ತಾವು ಉತ್ತರ ನೀಡಬೇಕು, ಉಪಚುನಾವಣೆ ಸಲುವಾಗಿ ಮೂರು ತಿಂಗಳ ಕಾಲಾವಕಾಶ ಕೊಟ್ಟಿದ್ದೀರಿ ಅಥವಾ ತಾವು ಒಳ ಮೀಸಲಾತಿ ಜಾರಿಗೆ ಮಾಡಬೇಕೆಂದು ಹೇಳುತ್ತಾ ಇದೇ ರೀತಿಯಾಗಿ ಮುಂದುವರೆಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮತದಾನ ಹಾಕಿಕೊಳ್ಳುತ್ತಾ ಹೋಗುತ್ತೀರುವ ಸಿದ್ದರಾಮಯ್ಯ ನೀತಿ ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!