ಶ್ರೀ ಸಿಮೆಂಟ್ ಕಂಪನಿಯ ಭಾರಿ ವಾಹನಗಳು ಚಲಿಸಿದಂತೆ ತಡೆಹಿಡಿಯಲು ಕರವೇ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಶ್ರೀ ಸಿಮೆಂಟ್ ಕಂಪನಿಯಿಂದ ಪ್ಯಾಕಿಂಗ್ ಪ್ಲಾಂಟಿನ ಸೂಲಹಳ್ಳಿ ವರಿಗೆ ಹೋಗಿ ಬರುತ್ತಿರುವ ಭಾರಿ ವಾಹನಗಳನ್ನು ಚಲಿಸದಂತೆ ತಡೆ ಹಿಡಿಯಬೇಕು ಎಂದು ಕರವೇ ನಾರಾಯಣಗೌಡ ಬಣ ಪದಾಧಿಕಾರಿಗಳು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ.
ತಾಲೂಕು ಅಧ್ಯಕ್ಷ ಚಂದರ್ ಚವ್ಹಾಣ ಮಾತನಾಡಿ, ಶ್ರೀ ಸಿಮೆಂಟ್ ಕಂಪನಿಯಿಂದ ಡೋಣಗಾಂವ, ಭಂಕಲಗಿ, ಹೊಸ್ಸುರ, ಸಾತನೂರ, ಎಜುಕೇಶನ್ ಹಬ್ಬ ಚಿತ್ತಾಪುರ, ಕರದಾಳ ಮಾರ್ಗವಾಗಿ ಪ್ಯಾಕಿಂಗ್ ಪ್ಲಾಂಟಿನ ಸೂಲಹಳ್ಳಿ ವರೆಗೆ ಪ್ರತಿ ದಿನ ಸುಮಾರು 25 ಭಾರಿ ವಾಹನಗಳು ಹೋಗಿ ಬರುತ್ತಿವೆ. ಇದರಿಂದ ಈ ಮಾರ್ಗದ ಎಲ್ಲ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿದ್ದು ರೈತರಿಗೆ, ಸಾರ್ವಜನಿಕರಿಗೆ, ಹಾಗೂ ಸರಕಾರಿ ಬಸ್ಸುಗಳಿಗೆ ಹೋಗಿ ಬರುವುದಕ್ಕೆ ಬಹಳ ತೊಂದರೆ ಆಗುತ್ತಿದೆ. ಮತ್ತು ಸದರಿ ರಸ್ತೆಯಿಂದ ಸುಮಾರು 30 ರಿಂದ 40 ಗ್ರಾಮಗಳಿಗೆ ಈ ರಸ್ತೆ ಅತೀ ಮುಖ್ಯವಾಗಿರುತ್ತದೆ ಹೀಗಾಗಿ ರಸ್ತೆ ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಶ್ರೀ ಸಿಮೆಂಟ್ ಕಂಪನಿಯಿಂದ ಪ್ಯಾಕಿಂಗ್ ಪ್ಲಾಂಟಿನ ಸೂಲಹಳ್ಳಿ ವರಿಗೆ ಹೋಗಿ ಬರುತ್ತಿರುವ ಭಾರಿ ವಾಹನಗಳನ್ನು ಚಲಿಸದಂತೆ ತಡೆಹಿಡಿಯಬೇಕು, ಒಂದು ವಾರದ ಒಳಗೆ ಕ್ರಮಕೈಗೊಳ್ಳದಿದ್ದರೆ, ಒಂದು ವೇಳೆ ನಿರ್ಲಕ್ಷ ತೋರಿದಲ್ಲಿ ಮುಂಬರುವ ದಿನಗಳಲ್ಲಿ ಸಾತನೂರ ಹಾಗೂ ಕರದಾಳ ಕ್ರಾಸ್ ಎಜುಕೇಶನ ಹಬ್ಬ್ ಹತ್ತಿರ ರಸ್ತಾ ರೋಕೋ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಮಹಿಳಾ ಘಟಕದ ಅಧ್ಯಕ್ಷೆ ಈಶ್ವರಮ್ಮ ಯಾದವ್, ಮುಖಂಡರಾದ ಶೇರ್ ಅಲಿ, ಗಣೇಶ ರಾಠೋಡ, ರಾಹುಲ್ ಶಾಸ್ತ್ರಿ, ನಂದಾ ನಾಯಕ, ಅರ್ಜುನ್ ಕಟ್ಟಿಮನಿ, ಮಾನಪ್ಪ ಹಾದಿಮನಿ, ಅಪ್ಸರ್ ಸೇಟ್ ನಾಲವಾರ, ಅರುಣ್ ಸಿಂಧೆ ಇಂಗಳಗಿ, ದೇವಪ್ಪ ಮಾರ್ನಳ್ಳಿ, ಪ್ರೇಮ್ ಜೋಶಿ, ಮಜೀದ್ ಅಡ್ಡಾವಾಲೆ, ಭರತ್ ಭಂಗಿ ಭಾಗೋಡಿ ಸೇರಿದಂತೆ ಇತರರು ಇದ್ದರು.