Oplus_0

ಅಳ್ಳೋಳ್ಳಿಯಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ, ಕಣ್ಣು ಜೀವನದ ಪ್ರಮುಖ ಅಂಗ ಕಾಳಜಿ ವಹಿಸಿ: ಗವಿಮಠ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಕಣ್ಣು ಜೀವನ ಪ್ರಮುಖ ಅಂಗವಾಗಿದೆ ಇದರ ಬಗ್ಗೆ ನಿರ್ಲಕ್ಷ್ಯ ಬೇಡ ಕಣ್ಣಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಕಲಬುರ್ಗಿ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಯ ನೇತೃ ತಜ್ಞ ನಾಗರಾಜ್ ಗವಿಮಠ ಹೇಳಿದರು.

ತಾಲೂಕಿನ ಅಳ್ಳೋಳ್ಳಿ ಗ್ರಾಮದಲ್ಲಿ ಕಲಬುರ್ಗಿಯ ಸಿದ್ದರಾಮೇಶ್ವರ ಆಸ್ಪತ್ರೆ, ವಿಶ್ವ ಜನ ಸೇವಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಜ್ಞಾನಜ್ಯೋತಿ ಶಾಲೆ ಸಾವಿರ ದೇವರ ಸಂಸ್ಥಾನ ಮಠದಲ್ಲಿ ಶನಿವಾರ ಹಮ್ಮಿಕೊಂಡ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಯ ಸಮಾಜಮುಖಿ ಕೆಲಸ ಮಾಡುತ್ತದೆ ಈಗಾಗಲೇ ಆಸ್ಪತ್ರೆಯಿಂದ ಸುಮಾರು ಎರಡು ಲಕ್ಷ ಜನರಿಗೆ ನೇತ್ರ ತಪಾಸಣೆ ಮಾಡಲಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಯುವ ಮುಖಂಡ ಕಣ್ವಾ ನಾಯಕ್ ಮಾತನಾಡಿ, ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಯವರು ಗ್ರಾಮೀಣ ಭಾಗಕ್ಕೆ ತೆರಳಿ ಉಚಿತ ನೇತ್ರ ತಪಾಸಣೆ ಶಿಬಿರ ಮಾಡಿ ಕಡಿಮೆ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ಮಾಡುತ್ತಿರುವುದು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ರೆಡ್ಡಿ ಅವರ ಸಾಮಾಜಿಕ ಕಳಕಳಿ ಎತ್ತಿ ತೋರಿಸುತ್ತಿದೆ ಎಂದರು.

ವಿಶ್ವ ಜನ ಸೇವಾ ಸಂಸ್ಥೆಯ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ ಮಾತನಾಡಿ, ವಿಶ್ವ ಜನ ಸೇವಾ ಸಂಸ್ಥೆಯು ಕಳೆದ 15 ವರ್ಷಗಳಿಂದ ಈ ಭಾಗದಲ್ಲಿ ಕಲೆ, ಸಾಹಿತ್ಯ, ಸಂಗೀತ, ಆರೋಗ್ಯ ತಪಾಸಣೆ, ಮಹಿಳಾ ಸಬಲೀಕರಣ ಕುರಿತು ಅನೇಕ ಜನ ಉಪಯೋಗಿ ಕಾರ್ಯಗಳು ಮಾಡುತ್ತಿದೆ. ಈ ಸಂಸ್ಥೆಗೆ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆ ನೇತ್ರ ತಪಾಸಣೆ ಕಾರ್ಯಕ್ರಮದ ಜವಾಬ್ದಾರಿ ಸಂಸ್ಥೆಗೆ ನೀಡಿದ್ದು ಹೆಮ್ಮೆಯ ವಿಷಯ ಎಂದರು.

ಗ್ರಾಮದ ಮುಖಂಡ ಮಾದೇವಪ್ಪ ಡೋಣಗಾಂವ, ಸಿದ್ದರಾಮೇಶ್ವರ ಆಸ್ಪತ್ರೆಯ ಸಿಬ್ಬಂದಿ ಆಕಾಶ್ ಹಾಗೂ ಮಂಜುನಾಥ್ ಅವರು ವೇದಿಕೆಯಲ್ಲಿದ್ದರು. ಶಾಲೆಯ ಮುಖ್ಯಗರು ಬಸವರಾಜ್ ಹೊಟ್ಟೆ ಅವರು ಸ್ವಾಗತಿಸಿ ನಿರೂಪಿಸಿದರು, ಶಿಕ್ಷಕ ಸಲೀಂ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!