ವಾಡಿಯಲ್ಲಿ ಅಂಬಲಿ ಬಂಡಿ ವೀಕ್ಷಿಸಿದ ಹಲಕರ್ಟಿ ಶ್ರೀ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದಲ್ಲಿ ಕಲಾವಿದ ಮಲ್ಲಿಕಾರ್ಜುನ ವಿಶ್ವಕರ್ಮ ಹಲಕರ್ಟಿಯ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮರದಿಂದ ಕೆತ್ತನೆ ಮಾಡಿದ ಮಲ್ಲಯ್ಯನ ಅಂಬಲಿ ಬಂಡಿಯನ್ನು ಹಳಕರ್ಟಿಯ ಶ್ರೀ ಮುನೀಂದ್ರ ಶಿವಾಚಾರ್ಯರು ಭಾನುವಾರ ವೀಕ್ಷಿಸಿದರು.
ಪುರಾತನ ಇತಿಹಾಸ ಹೊಂದಿದ ಹಲಕರ್ಟಿ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರೆ ಅನೇಕ ಸಾಂಪ್ರದಾಯಿಕ ಆಚರಣೆಗಾಗಿ ಪ್ರಖ್ಯಾತಿಯಾಗಿದೆ. ಇದರ ಒಂದು ಪ್ರಯುಕ್ತವಾಗಿ ಮರದಿಂದ ಕೆತ್ತನೆ ಮಾಡಿದ ಬಂಡಿಯಲ್ಲಿ ಅಂಬಲಗಿಯನ್ನು ತಯಾರಿಸಿ ವಿಶೇಷ ಪೂಜೆಯೊಂದಿಗೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ನೈವೇದ್ಯ ಮಾಡಲಾಗುವುದು. ನಂತರ ಅದನ್ನು ಐದು ದಿನಗಳ ಕಾಲ ಅಂಬಲಿ ಸೇವಿಸುವ ವಗ್ಗಯ್ಯನವರು ಸರಪಳಿಯನ್ನು ಹರಿದು ಭಕ್ತಿ ಮೇರೆಯುವರು.
ಈ ಒಂದು ಅಂಬಲಿ ಬಂಡಿ ಅನೇಕ ದೇವರುಗಳ ಕೆತ್ತನೆಯ ಮೂಲಕ ಗಮನ ಸೆಳೆಯವುದು, ಎತ್ತುಗಳ ಮೂಲಕ ಮೆರವಣಿಗೆ ಕೈಗೊಳ್ಳುವುದು ಇದರ ಒಂದು ವಿಶೇಷವಾಗಿದೆ.
ಈ ಸಂದರ್ಭದಲ್ಲಿ ರಾಜಶೇಖರ ಗೌಡ, ಚಂದ್ರಕಾಂತ ಮೇಲಿನಮನಿ, ರವೀಂದ್ರ ಚಿನವಾರ, ಬಸವರಾಜ ಲೋಕನಹಳ್ಳಿ, ವೀರಣ್ಣ ಯಾರಿ, ಬಸವರಾಜ ಮಹಾಗಾಂವ, ಸಂತೋಷ ಹೀರೆಮಠ, ಗಂಗಾಧರ ಹೀರೆಮಠ, ವಿಕಾಸ ವಿಶ್ವಕರ್ಮ, ಸುಧಾಕರ ನರಿಬೊಳ, ಶರಣಪ್ಪ ದೊಡ್ಡಮನಿ ಇದ್ದರು.