ನಾಗಾವಿ ಎಜ್ಯುಕೇಶನ್ ಹಬ್ಬ್ ಹತ್ತಿರ ನಾಳೆ ಕರವೇ ಯಿಂದ ರಸ್ತೆ ತಡೆ ಪ್ರತಿಭಟನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಎಜ್ಯುಕೇಶನ್ ಹಬ್ಬ್ ಹತ್ತಿರ ಸಾತನೂರ ಹಾಗೂ ಕರದಾಳ ಕ್ರಾಸ್ ನಡುವೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನ.14 ರಂದು ಬೆಳಿಗ್ಗೆ 11 ಗಂಟೆಗೆ ರಸ್ತಾ ರೋಕೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷ ಚಂದರ್ ಚವ್ಹಾಣ ತಿಳಿಸಿದ್ದಾರೆ.
ಶ್ರೀ ಸಿಮೆಂಟ್ ಕಂಪನಿಯಿಂದ ಡೋಣಗಾಂವ, ಭಂಕಲಗಾ, ಹೊಸೂರ, ಸಾತನೂರ, ಎಜುಕೇಶನ್ ಹಬ್ಬ ಚಿತ್ತಾಪುರ, ಕರದಾಳ ಮಾರ್ಗವಾಗಿ ಪ್ಯಾಕಿಂಗ್ ಪ್ಲಾಂಟಿನ ಸೂಲಹಳ್ಳಿ ವರಿಗೆ ಪ್ರತಿ ದಿನ ಸುಮಾರು 25 ಭಾರಿ ವಾಹನಗಳು ಹೋಗಿ ಬರುತ್ತಿವೆ. ಇದರಿಂದ ಈ ಮೇಲೆ ತೋರಿಸಿದ ಎಲ್ಲಾ ಗ್ರಾಮದ ರಸ್ತೆಯು ಸಂಪೂರ್ಣ ಹದಗೆಟ್ಟು ಹೋಗಿದ್ದು ರೈತರಿಗೆ, ಸಾರ್ವಜನಿಕರಿಗೆ, ಹಾಗೂ ಸರಕಾರಿ ಬಸ್ಸುಗಳಿಗೆ ಹೋಗಿ ಬರುವುದಕ್ಕೆ ಬಹಳ ತೊಂದರೆ ಆಗುತ್ತಿದೆ ಮತ್ತು ಸದರಿ ರಸ್ತೆಯಿಂದ ಸುಮಾರು 30 ರಿಂದ 40 ಗ್ರಾಮಗಳಿಗೆ ಈ ರಸ್ತೆ ಅತೀ ಮುಖ್ಯವಾಗಿರುತ್ತದೆ. ಹೀಗಾಗಿ ಭಾರಿ ವಾಹನಗಳ ಓಡಾಟ ನಿಲ್ಲಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಬಂದರು, ಮತ್ತು ಒಳನಾಡು ಜಲಸಾರಿಗೆ ಇಲಾಖೆ ಉಪ-ವಿಭಾಗ ಚಿತ್ತಾಪುರ ರವರಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ ಆದ್ದರಿಂದ ರಸ್ತೆ ತಡೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

