ಮೊಗಲಾ ಈಡಿಗ ಸಮುದಾಯ ಭವನ ಕಾಮಗಾರಿಗೆ ಚಾಲನೆ, ನಿಗಧಿತ ಅವಧಿಯೊಳಗೆ ಕಾಮಗಾರಿ ಮುಗಿಸಿ: ಗುತ್ತೇದಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಮೊಗಲಾ ಗ್ರಾಮದಲ್ಲಿ ಆರ್ಯ ಈಡಿಗ ಸಮಾಜದ ಸಮುದಾಯ ಭವನ ಕಾಮಗಾರಿಗೆ ಗುರುವಾರ ಈಡಿಗ ಸಮಾಜದ ಗೌರವಾಧ್ಯಕ್ಷರು ಮತ್ತು ಪುರಸಭೆ ಸದಸ್ಯ ವಿನೋದ ಗುತ್ತೇದಾರ, ತಾಲೂಕು ಅಧ್ಯಕ್ಷ ಶಂಕರಗೌಡ ರಾವೂರಕರ್ ಅವರು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಜಿಲ್ಲಾ ಪಂಚಾಯತ್ ಉಪ ವಿಭಾಗದ ಕಿರಿಯ ಇಂಜಿನಿಯರ್ ಅಬ್ದುಲ್ ವಾಹೀದ್ ಮಾತನಾಡಿ, ಸಮುದಾಯ ಭವನ ಕಾಮಗಾರಿಗೆ ಶಾಸಕರ ಅನುದಾನದಡಿ 10 ಲಕ್ಷ ಹಾಗೂ ಓರಿಯಂಟ್ ಸಿಮೆಂಟ್ ಕಂಪೆನಿ ವತಿಯಿಂದ 10 ಲಕ್ಷ ಸೇರಿದಂತೆ ಒಟ್ಟು 20 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
ಸಮಾಜದ ಗೌರವಾಧ್ಯಕ್ಷರು ಹಾಗೂ ಪುರಸಭೆ ಸದಸ್ಯ ವಿನೋದ ಗುತ್ತೇದಾರ ಮಾತನಾಡಿ, ಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಸಕ್ತಿಯಿಂದ ಸಮುದಾಯದ ಭವನ ಮಂಜೂರು ಆಗಿದೆ ಹಾಗೂ ಅಗತ್ಯ ಅನುದಾನ ಸಹ ಬಿಡುಗಡೆ ಮಾಡಿಸಿದ್ದಾರೆ ಹೀಗಾಗಿ ನಿಗಧಿತ ಅವಧಿಯೊಳಗೆ ಕಾಮಗಾರಿ ಮುಗಿಸಿ ವಿಳಂಬಕ್ಕೆ ಅವಕಾಶ ಮಾಡಿಕೊಡಬೇಡಿ ಹಾಗೂ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರ ಬಸವರಾಜ ಪೂಜಾರಿ, ಮುಖಂಡರಾದ ವೆಂಕಟಯ್ಯ ಮೇಸ್ತ್ರಿ, ಗೂಳಿನಾಥ ಸೌಕಾರ, ಸಂತೋಷ ತೊನಸನಳ್ಳಿ, ಮಲ್ಲಿಕಾರ್ಜುನ ಗುತ್ತೇದಾರ, ಕಾಶಿನಾಥ ಗುತ್ತೇದಾರ, ಭೀಮಯ್ಯ ಗುತ್ತೇದಾರ, ನಾಗು ಮರಗೋಳ, ನಾರಾಯಣ ಗುತ್ತೇದಾರ, ಮಲ್ಲಿಕಾರ್ಜುನ ಪೂಜಾರಿ, ಶಿವಶರಣಪ್ಪ ಹಾಗಾರ, ಸಾಬಯ್ಯ ದಂಡೋತಿ, ಜಿಲ್ಲಾ ಪಂಚಾಯತ್ ಉಪ ವಿಭಾಗದ ಸಿಬ್ಬಂದಿಗಳಾದ ಲಿಂಗರಾಜ್, ಅಬ್ಬುಜರ್, ನಾಗನಾಥ ಸೇರಿದಂತೆ ಇತರರು ಇದ್ದರು.