ಚಿತ್ತಾಪುರ ಸಮುದಾಯ ಶೌಚಾಲಯ ಕಾಮಗಾರಿಗೆ ಚಾಲನೆ, ಕಾಮಗಾರಿಯ ಗುಣಮಟ್ಟ ಕಾಯ್ದುಕೊಂಡು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಿ: ಕಾಳಗಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪುರಸಭೆ ವ್ಯಾಪ್ತಿಯ 15 ನೇ ವಾರ್ಡ್ ನ ಪಟ್ಟಣದ ಒಂಬತ್ತು ಕಮಾನ್ ಹತ್ತಿರ ಸಮುದಾಯ ಶೌಚಾಲಯ ಕಾಮಗಾರಿಗೆ ಭಾನುವಾರ ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಲ್ಲಿಕಾರ್ಜುನ ಕಾಳಗಿ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕ್ಷೇತ್ರದ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಹಕಾರದಿಂದ ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಎಂದರು.
ಈ ಭಾಗದಲ್ಲಿ ಶೌಚಾಲಯದ ಕೊರತೆ ಇರುವುದನ್ನು ಮನಗಂಡು ಪುರಸಭೆ ವತಿಯಿಂದ ಶೌಚಾಲಯ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿಯ ಗುಣಮಟ್ಟ ಕಾಯ್ದುಕೊಂಡು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಿ ಮಹಿಳೆಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಮಾತನಾಡಿ, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ 18 ಲಕ್ಷ ಅನುದಾನದಲ್ಲಿ ಸಮುದಾಯ ಶೌಚಾಲಯ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಪಟ್ಟಣದಲ್ಲಿ 2 ಸಾರ್ವಜನಿಕ ಶೌಚಾಲಯಗಳು, 2 ಸಮುದಾಯ ಶೌಚಾಲಯಗಳು ಸೇರಿದಂತೆ ಒಟ್ಟು 4 ಶೌಚಾಲಯಗಳ ಕಾಮಗಾರಿಗಳು 56 ಲಕ್ಷ ಅನುದಾನದಲ್ಲಿ ಕೈಗೊಳ್ಳಲಾಗಿದೆ. ಒಂಬತ್ತು ಕಮಾನ್ ಹಾಗೂ ಆಸೀಫ್ ಮೆಡಿಕಲ್ ಹತ್ತಿರ ತಲಾ 18 ಲಕ್ಷ ಹಾಗೂ ರೈಲ್ವೆ ಸ್ಟೇಷನ್ ಹತ್ತಿರ ಮತ್ತು ವಚ್ ವಚ್ ಗಲ್ಲಿಯಲ್ಲಿ ತಲಾ 10 ಲಕ್ಷ ಅನುದಾನದಲ್ಲಿ ಶೌಚಾಲಯ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಕಿರಿಯ ಅಭಿಯಂತರರು ರಾಕೇಶ್ ರೆಡ್ಡಿ, ಗುತ್ತಿಗೆದಾರ ಮಹ್ಮದ್ ಬಾಷೀದ್ ಪಟೇಲ್ ಸೇರಿದಂತೆ ಇತರರು ಇದ್ದರು.