Oplus_0

ಚಿತ್ತಾಪುರ: ಸಚಿವ ಪ್ರಿಯಾಂಕ್ ಖರ್ಗೆಯವರ ಹುಟ್ಟು ಹಬ್ಬದ ಪ್ರಯುಕ್ತ ನೇತ್ರಾದಾನ ಮಾಡಿದ ಕಾಂಗ್ರೆಸ್ ಯುವ ಅಧ್ಯಕ್ಷ ಬುಳಕರ್

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರ 46 ನೇಯ ಹುಟ್ಟು ಹಬ್ಬವು ನ. 22 ರಂದು ಇರುವ ಪ್ರಯುಕ್ತ ಅವರ ಅಭಿಮಾನಿ ಹಾಗೂ ಚಿತ್ತಾಪುರ ಯುವ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬುಳಕರ್ ಅವರು ಕಲಬುರಗಿಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಗೆ ನೇತ್ರಾದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗುವ ಮಾದರಿಯ ಕೆಲಸಕ್ಕೆ ಮುಂದಾಗಿದ್ದಾರೆ.

36 ವರ್ಷದ ಯುವಕ ಸಂಜಯ ಬುಳಕರ್ ಮೊದಲಿಂದಲೂ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಪ್ಪಟ್ಟ ಅಭಿಮಾನಿಯಾಗಿದ್ದು, ಅವರ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದಾಗಿ ಕಣ್ಣುಗಳ ದಾನಕ್ಕೆ ಮುಂದಾಗುವ ಮೂಲಕ ಸಚಿವರ ಹುಟ್ಟು ಹಬ್ಬಕ್ಕೆ ಸಾಕ್ಷಿಯಾಗಿದ್ದು ಇತನ ಸಮಾಜಮುಖಿ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಣ್ಣುದಾನದ ಒಪ್ಪಿಗೆ ಪತ್ರ: ನನ್ನ ಮರಣ ನಂತರ ನನ್ನ ಕಣ್ಣುಗಳ ದಾನಕ್ಕೆ ಸಮ್ಮತಿಸಿರುವ ನಾನು ಇತರರಿಗೆ ಸಹಾಯಕವಾಗಬಹುದೆಂಬ ಆಶಯದಿಂದ, ವೈದ್ಯಕೀಯ ದೃಷ್ಟಿಯಿಂದ ಸದುಪಯೋಗವಾಗಬಹುದಾಗಿದ್ದರೆ, ನನ್ನ ದೇಹದ ಪ್ರಮುಖ ಭಾಗವಾಗಿರುವ ನನ್ನ ಕಣ್ಣುಗಳನ್ನು ದಾನ ಮಾಡಬಯಸುತ್ತೇನೆ. ಹಾಗೆಯೇ ಮುಂದೆ ಕಾಣಿಸಿದ ಅಂಶಗಳನ್ವಯ ನನ್ನ ಕಣ್ಣುಗಳನ್ನು ನಾಟಿಮಾಡಲು ವೈದ್ಯಕೀಯ ಸಂಶೋಧನೆ ಇಲ್ಲವೇ ಬೋಧನೆಗೆ ಬಳಸಲು ಅನುಮತಿ ನೀಡುತ್ತೇನೆ ಎಂದು ರುಜು ಮಾಡಿದ ಒಪ್ಪಿಗೆ ಪತ್ರವನ್ನು ಕಲಬುರಗಿಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಗೆ ಸಂಜಯ ಬುಳಕರ್ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!