46 ನೇ ಜನ್ಮದಿನದ ಸಂಭ್ರಮ ನಿಮಿತ್ತ ಲೇಖನ, ಸಂಘಟನೆ ಮೂಲಕ ಬೆಳೆದು ಬಂದ ಪ್ರಿಯಾಂಕ್ ಖರ್ಗೆ
ಹ್ಯಾಟ್ರಿಕ್ ಗೆಲುವು ಸಾಧಿಸಿ, ರಾಜ್ಯವೇ ಚಿತ್ತಾಪುರ ಕಡೆ ತಿರುಗಿ ನೋಡುವಂತೆ ಮಾಡಿದ ಧೀಮಂತ ನಾಯಕ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಎನ್.ಎಸ್.ಯು.ಐ ಮೂಲಕ ರಾಜಕೀಯ ಆರಂಭಿಸಿ, ಯುವ ಕಾಂಗ್ರೆಸ್ ಮೂಲಕ ಸಂಘಟನೆ ಕಟ್ಟಿ, ಹೋರಾಟ ರೂಪಿಸಿ, 2009 ರ ಉಪ ಚುನಾವಣೆಯಲ್ಲಿ ಸೋತರೂ ಅದನ್ನೇ ಸವಾಲಾಗಿ ಸ್ವೀಕರಿಸಿ, ಬೆಟ್ಟದಂತಹ ಸಾಕಷ್ಟು ಅಡೆ ತಡೆಗಳನ್ನು ಪುಡಿ ಪುಡಿ ಮಾಡಿ, ಮತ್ತೆ 2013 ರಲ್ಲಿ ಮತ್ತೆ ಚಿತ್ತಾಪುರ ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಿ ಗೆದ್ದ ಪ್ರಿಯಾಂಕ್ ಖರ್ಗೆ ಅವರು 2018 ಮತ್ತು 2019 ರ ಚುನಾವಣೆಗಳಲ್ಲಿ ನಿರಂತರವಾಗಿ ವಿಜಯಿಯಾದವರು.
2013 ರಲ್ಲಿ ಪ್ರಥಮ ಬಾರಿಗೆ ಶಾಸಕರು ಆಗಿ ಆಯ್ಕೆ ಆಗಿದ್ದ ಪ್ರಿಯಾಂಕ್ ಖರ್ಗೆ ಅವರು ಆಗಿನ ಸರ್ಕಾರದ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರ ಪ್ರಥಮ ಅವಧಿಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾಗಿ, ಬೆಂಗಳೂರು ಅಲ್ಲಿ ಐಟಿ ಕಂಪನಿಗಳು ನೆಲೆ ನಿಲ್ಲುವಂತೆ ಮತ್ತು ವಿಶ್ವದ ಎಲ್ಲಾ ದೇಶಗಳು ದೇಶದ ರಾಜ್ಯಧಾನಿ ದೆಹಲಿ ಬಿಟ್ಟು ಬೆಂಗಳೂರು ಕಡೆಗೆ ನೋಡುವಂತೆ ಮಾಡಿದರು. ಬೆಂಗಳೂರು ಅನ್ನು ಸಿಲಿಕಾನ್ ವ್ಯಾಲಿ ಆಗಿ ಗುರುತಿಸುವಂತೆ ಮಾಡುವಲ್ಲಿ ಪ್ರಿಯಾಂಕ್ ಖರ್ಗೆ ಅವರು ಸಚಿವರಾಗಿ ಮಾಡಿದ ಕಾರ್ಯ ದೊಡ್ಡದು.
2019ರಲ್ಲಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರದಲ್ಲಿ ಪ್ರಿಯಾಂಕ್ ಖರ್ಗೆ ಅವರು ಸಮಾಜ ಕಲ್ಯಾಣ ಖಾತೆಯ ಸಚಿವರಾಗಿ, ಈ ಇಲಾಖೆಯಲ್ಲಿ ಅಲ್ಪ ಅವಧಿಯಲ್ಲಿ ಹಲವಾರು ಸುಧಾರಣೆ ತಂದರು. ಈಗ 2023 ರಿಂದ ಸಿದ್ದರಾಮಯ್ಯ ಅವರ ನೇತೃತ್ವದ 2 ನೇಯ ಅವಧಿಯ ಅಧಿಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಜೊತೆ ಜೊತೆಗೆ ಐಟಿ ಮತ್ತು ಬಿಟಿ ಇಲಾಖೆಯ ಸಚಿವರಾಗಿದ್ದಾರೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಮೊದಲ ಅವಧಿಯಲ್ಲಿ ಪ್ರಿಯಾಂಕ್ ಖರ್ಗೆ ಅವರು ಐಟಿ ಬಿಟಿ ಇಲಾಖೆಯ ಸಚಿವರಾಗಿ ಮಾಡಿದ ಗಮನಾರ್ಹ ಕೆಲಸದಿಂದಲೇ ಈಗಿನ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಜೊತೆಗೆ ಐಟಿ ಬಿಟಿ ಖಾತೆಯೂ ದೊರೆಯಲು ಮುಖ್ಯ ಕಾರಣವಾಗಿದೆ. ಪ್ರಿಯಾಂಕ್ ಖರ್ಗೆ ಅವರು ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಸಚಿವರಾದ ಮೇಲೆ ಇಡೀ ದೇಶದಲ್ಲಿಯೇ ಗ್ರಾಮ ಪಂಚಾಯತಗಳ ಅತಿ ಹೆಚ್ಚು ಆದಾಯದಲ್ಲಿ ಗುಜರಾತ್ ನಂಬರ್ 1, ಕೇರಳ ನಂಬರ್ 2 ಇದ್ದರೆ, ಕರ್ನಾಟಕ ನಂಬರ್ 4 ಸ್ಥಾನದಲ್ಲಿ ಇದೆ. ಕರ್ನಾಟಕದಲ್ಲಿ ಗ್ರಾಮ ಪಂಚಾಯತ್ ಗಳ ಸಬಲೀಕರಣ ಆಗುವಲ್ಲಿ, ಸಂಪನ್ಮೂಲಗಳು ಕ್ರೋಡಿಕರಣಗೊಳಿಸಲು ನಿರಂತರ ಸಭೆಗಳನ್ನು ನಡೆಸಿ, ಜಡಗೊಂಡ ಅಧಿಕಾರಶಾಹಿಯನ್ನು ಚುರುಕುಗೊಳ್ಳಲು ಶ್ರಮವಹಿಸಿದ ಫಲವೇ ಇದಕ್ಕೆ ಮುಖ್ಯ ಕಾರಣವಾಗಿದೆ. ಅಷ್ಟೇ ಅಲ್ಲ ಬೆಂಗಳೂರು ಅಲ್ಲಿ ಬೆಂಗಳೂರು ಟೆಕ್ ಸಮ್ಮಿಟ್ – 2024 ಸಮ್ಮೇಳನವನ್ನು ಕರ್ನಾಟಕ ಸರ್ಕಾರದ ಐಟಿ ಮತ್ತು ಬಿಟಿ ಇಲಾಖೆಯ ಸಹಯೋಗದಲ್ಲಿ ಬೆಂಗಳೂರು ಟೇಕ್ ಸಮಿಟ್ಟ್ 2024 ನಡೆಯುತ್ತಿದ್ದು, ಅದರ ಕಲ್ಪನೆಯ ರೂವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರೇ ಆಗಿದ್ದಾರೆ.
ಈ ಸಮ್ಮೇಳನವು ಏಷ್ಯಾದಲ್ಲಿಯೇ ಅತಿ ದೊಡ್ಡ ಟೆಕ್ ಸಮ್ಮಿಟ್ ಆದ ‘ಬೆಂಗಳೂರು ಟೆಕ್ ಸಮ್ಮಿಟ್’ ಆಗಿದೆ. ಇದರಲ್ಲಿ 460+ ಅಂತಾರಾಷ್ಟ್ರೀಯ ತಂತ್ರಜ್ಞಾನ ಪರಿಣಿತರು 85+ ಸೆಷನ್ಸ್’ಗಳು 5000+ ಅತಿಥಿಗಳು 50+ ದೇಶಗಳು 500+ ಸ್ಟಾರ್ಟಪ್’ಗಳು ಹಾಗೂ 3 ದಿನಗಳ ಈ ಸಮ್ಮೇಳನದಲ್ಲಿ ಕರ್ನಾಟಕದ ಮಾತ್ರವಲ್ಲ ನೆರೆ ಹೊರೆಯ ರಾಜ್ಯಗಳಾದ ಆಂಧ್ರ ಪ್ರದೇಶ, ಕೇರಳ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳ ಜನಸಾಮಾನ್ಯರು ಪಾಲ್ಗೊಳ್ಳುತ್ತಿದ್ದಾರೆ.
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ,ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ. – ಬಸವಣ್ಣ
12ನೇಯ ಶತಮಾನದ ಬಸವಣ್ಣ ಮತ್ತು ಶರಣರ ಆಶಯವನ್ನು ಫಾಲಿಸುವ ರಾಜಕೀಯ ನಾಯಕರಲ್ಲಿ ಪ್ರಿಯಾಂಕ್ ಖರ್ಗೆ ಅವರು ಒಬ್ಬರು. ದಲಿತ, ಧಮನಿತ ಸಮುದಾಯಕ್ಕೆ ಸೀಮಿತವಾಗದೆ ಅಲ್ಪಸಂಖ್ಯಾತ, ಲಿಂಗಾಯತ ಹಾಗೂ ಎಲ್ಲಾ ಸಮುದಾಯದ ಜನರನ್ನು ಪ್ರೀತಿಸುವ, ಯುವಕರನ್ನು ತಮ್ಮ ಚುಂಬಕ ವ್ಯಕ್ತಿತ್ವದಿಂದ ಸೆಳೆಯಬಲ್ಲ ವ್ಯಕ್ತಿತ್ವ ಪ್ರಿಯಾಂಕ್ ಖರ್ಗೆ ಅವರದು.
ತಮ್ಮ ಅಧಿಕಾರದ ಉದ್ದಕ್ಕೂ ತಮಗೆ ದೊರೆತ ಅಧಿಕಾರದ ಅವಧಿಯಲ್ಲಿ ಜನೋಪಯೋಗಿ ಕೆಲಸ ಮಾಡಿ, ಜನ ಮನ್ನಣೆಗೆ ಪಾತ್ರರಾದವರು ಮತ್ತು ಈಗಲೂ ಆಗುತ್ತಿರುವವರ ರಾಜಕೀಯ ನಾಯಕರಲ್ಲಿ ಪ್ರಿಯಾಂಕ್ ಖರ್ಗೆ ಅವರ ಹೆಸರು ಮುಂಚೂಣಿಯಲ್ಲಿದೆ.
ನ್ಯಾಯ ನಿಷ್ಠುರಿ; ದಾಕ್ಷಿಣ್ಯಪರ ನಾನಲ್ಲ, ಲೋಕವಿರೋಧಿ; ಶರಣನಾರಿಗಂಜುವನಲ್ಲ, ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ.-ವಿಶ್ವಗುರು ಬಸವಣ್ಣನವರ ವಚನದ ಆಶಯದಂತೆ ನೇರ, ನಿರ್ಭಿಡೆಯ ಸ್ವಭಾವದ ಪ್ರಿಯಾಂಕ್ ಖರ್ಗೆ ಅವರ ರಾಜಕೀಯ ಜೀವನ ತೆರೆದಿಟ್ಟ ಪಕ್ಷದಂತೆ ಇದೆ. ತಮ್ಮ ಬಳಿ ಬರುವ, ತಮ್ಮ ಸಹಾಯ ಯಾಚಿಸಿ ಬರುವ ಯಾವುದೇ ಜನಸಾಮಾನ್ಯರಿಗೆ ಕೈಲಾದಷ್ಟು ಪ್ರಾಮಾಣಿಕವಾಗಿ ಮತ್ತು ಕಾನೂನು ರೀತಿಯಲ್ಲಿ ಸಹಾಯ ಮಾಡುವ ಕೆಲವೇ ಕೆಲವು ರಾಜಕೀಯ ನಾಯಕರಲ್ಲಿ ಒಬ್ಬರು. ಬಹಳಷ್ಟು ರಾಜಕೀಯ ನಾಯಕರುಗಳು ತತ್ವ, ಸಿದ್ಧಾಂತದ ಬಗ್ಗೆ ಭಾಷಣದಲ್ಲಿ, ವೇದಿಕೆಯಲ್ಲಿ ಹೇಳುತ್ತಾರೆ. ಇನ್ನು ಕೆಲವರು ತಮ್ಮ ಪಕ್ಷದ ವಿರೋಧ ಪಕ್ಷವಾದ ಬಿಜೆಪಿ, ಜೆಡಿಎಸ್ ಪಕ್ಷಗಳ ನಾಯಕರ ಬಗ್ಗೆ, ಆ ಪಕ್ಷದ ಸಿದ್ಧಾಂತದ ಮೃಧು ದೋರಣೆ ತಾಳಿ, ಸ್ವ ಹಿತಕ್ಕಾಗಿ ಸ್ವಂತ ಪಕ್ಷವನ್ನೇ ಬಲಿ ಕೊಡುವವರೇ ಅಧಿಕ ಆಗಿರುವ ಕಾಲಘಟ್ಟದಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ತತ್ವ – ಸಿದ್ಧಾಂತ ಹಾಗೂ ಕ್ರಿಯೆ ಒಂದೇ ತರಹ ಇರುವ ರಾಜಕೀಯ ನಾಯಕರ ಮತ್ತು ಮುತ್ಸದ್ದಿಗಳ ಸಂಖ್ಯೆ ತುಂಬಾ ಅಪರೂಪವಾಗಿದ್ದರೂ ಅವರುಗಳಲ್ಲಿ ಪ್ರಿಯಾಂಕ್ ಖರ್ಗೆ ಅವರಿಗೆ ದೊಡ್ಡ ಸ್ಥಾನವಿದೆ. ಈಗ ಕನ್ನಡ ನಾಡಿನಲ್ಲಿರುವ ರಾಜಕಾರಣಿಗಳಲ್ಲಿ ಪ್ರಿಯಾಂಕ್ ಖರ್ಗೆ ಅವರು ದುರದೃಷ್ಠಿಯುಳ್ಳ, ಜನಪರ ಚಿಂತನೆಯ ರಾಜಕೀಯ ನಾಯಕರಲ್ಲಿ ಅಗ್ರಗಣ್ಯರಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಸಿದ್ಧಾಂತ ದ ಜೊತೆ ರಾಜಿಯಾಗದ, 2019 ರಿಂದ 2023ರ ಅವಧಿಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷವಾಗಿದ್ದಾಗ ಆಗಿನ ಬಿಜೆಪಿ ಸರ್ಕಾರದ ಮತ್ತು ನಾಯಕರುಗಳ ದ್ವಿಮುಖ ನೀತಿಗಳು, ತಾರತಮ್ಯ, ಸ್ವಜನ ಪಕ್ಷಪಾತ,ಭ್ರಷ್ಟಾಚಾರ, ಪಿಎಸ್ಐ ನೇಮಕಾತಿ ಅಕ್ರಮ ದಂತಹ ಹಲವಾರು ಅಕ್ರಮಗಳ ವಿರುದ್ಧ ನಿರಂತರವಾಗಿ ದಿಟ್ಟ ಧ್ವನಿ ಎತ್ತಿದ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರಲ್ಲಿ ಪ್ರಿಯಾಂಕ್ ಖರ್ಗೆ ಅವರ ಹೆಸರು ಮುಂಚೂಣಿಯಲ್ಲಿದೆ. ಎಲ್ಲೂ ಕೂಡಾ ತಂದೆಯ ಹೆಸರು ಬಳಸಿಕೊಳ್ಳದೆ, ಸ್ವಂತ ಶ್ರಮ, ಬಲ ಮತ್ತು ದೂರದೃಷ್ಟಿಯಿಂದ ರಾಜಕೀಯ ರಂಗದಲ್ಲಿ ಪ್ರಿಯಾಂಕ್ ಖರ್ಗೆ ಅವರ ಹೆಸರು ಎದ್ದು ಕಾಣುತ್ತಿದೆ.
ಪ್ರಿಯಾಂಕ್ ಖರ್ಗೆ ಅವರು ಕಲ್ಯಾಣ ನಾಡಿನ ಹೆಮ್ಮೆಯ ಸುಪುತ್ರರು ಹೌದು. ಜೊತೆಗೆ ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವ, ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರ ಅಕ್ರಮ, ಭ್ರಷ್ಟಾಚಾರ ವಿರುದ್ಧ ಕಾನೂನು ಮಾರ್ಗದಲ್ಲಿ ಸುಧೀರ್ಘ ಅಧ್ಯಯನ ಮಾಡಿ, ಅಂಕಿ ಅಂಶಗಳ ಸಮೇತ ಗಟ್ಟಿ ಧ್ವನಿಯಿಂದ ಮಾತನಾಡುವ ರಾಜ್ಯದ ಜನಸಾಮಾನ್ಯರ ಧ್ವನಿ ಮತ್ತು ಜನಸಾಮಾನ್ಯರ ನಿಜವಾದ ಜನಪ್ರತಿನಿದಿ(ಎಂಎಲ್ಎ )ಗಳಲ್ಲಿ ನಾಯಕರಲ್ಲಿ ಪ್ರಿಯಾಂಕ್ ಖರ್ಗೆ ಅವರು ಮುಂಚೂಣಿಯಲ್ಲಿದೆ.
ಕೊನೆಯದಾಗಿ, ಎಡ ಪಂಥಿಯ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದ ನನ್ನನ್ನು NSUI ಗೆ ಕರೆ ತಂದು ಅಲ್ಲಿ ಜಿಲ್ಲಾ ಉಪಾಧ್ಯಕ್ಷ ಹುದ್ದೆಯ ಅವಕಾಶ ನೀಡಿ ಅಲ್ಲಿಂದ ನಾನು ಈಗ ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗದ ಕಾರ್ಯದರ್ಶಿ ಆಗುವವರೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅವರ ಆಶೀರ್ವಾದ ಮತ್ತು ಬೆಂಬಲವಿದೆ. ಪ್ರಿಯಾಂಕ್ ಖರ್ಗೆ ಅವರು ನನ್ನ ರಾಜಕೀಯದ ಮೂಲ ಗುರುಗಳು ಹೌದು.ನನ್ನ ಹೋರಾಟದ ಮತ್ತು ರಾಜಕೀಯ ಬೆಳವಣಿಗೆ ಹಿಂದಿನ ಶಕ್ತಿ ಕೂಡಾ ಅವರೇ ಆಗಿದ್ದಾರೆ. ಕೇವಲ ನನಗೆ ಅಷ್ಟೇ ಅಲ್ಲ ನಾಡಿನ ವಿವಿಧ ಭಾಗದ ನನ್ನಂತಹ ಹಲವಾರು ಯುವಕರಿಗೆ ಗುರುವಾಗಿ, ಪ್ರೇರಕ ಶಕ್ತಿಯಾಗಿದ್ದಾರೆ. ಇದು ಅಕ್ಷರದ ರೂಪದಲ್ಲಿ ಗುರುವಿಗೆ ಹುಟ್ಟುಹಬ್ಬದ ಅಂಗವಾಗಿ ಶುಭಾಶಯಗಳ ನೆಪದಲ್ಲಿ ಸಲ್ಲಿಸುತ್ತಿರುವ ಚಿಕ್ಕ ಕಾಣಿಕೆ ಮತ್ತು ನನ್ನ ಕರ್ತವ್ಯ ಎಂದೇ ಭಾವಿಸುತ್ತೇನೆ.
-ಭೀಮನಗೌಡ ಪರಗೊಂಡ, ನ್ಯಾಯವಾದಿಗಳು ಹಾಗೂ ಕಾರ್ಯದರ್ಶಿಗಳು, ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗ, ಬೆಂಗಳೂರು. ಪ್ರಧಾನ ಕಾರ್ಯದರ್ಶಿಗಳು, ಕೆಪಿಸಿಸಿ ಪದವೀಧರ ವಿಭಾಗ, ಬೆಂಗಳೂರು.