ಚಿತ್ತಾಪುರ: ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನದ ಪ್ರಯುಕ್ತ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಮತ್ತು ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ 46 ನೇ ಜನ್ಮದಿನದ ಅಂಗವಾಗಿ ನ್ಯಾಷನಲ್ ಸ್ಟುಡೇಂಟ್ಸ್ ಯುನಿಯನ್ ಆಫ್ ಇಂಡಿಯಾ (ಎನ್.ಎಸ್.ಯು.ಐ) ತಾಲೂಕು ಅಧ್ಯಕ್ಷ ಭೀಮಶಂಕರ ಹೊಳಿಕಟ್ಟಿ ನೇತೃತ್ವದಲ್ಲಿ ಪಟ್ಟಣದ ಬಸ್ ನಿಲ್ದಾಣ ಹತ್ತಿರ ಶುಕ್ರವಾರ ಹಮ್ಮಿಕೊಂಡಿದ್ದ ಅನ್ನದಾಸೋಹ ಕಾರ್ಯಕ್ರಮಕ್ಕೆ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಅವರು ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಜಿಪಂ ಮಾಜಿ ಸದಸ್ಯ ಶಿವರುದ್ರಪ್ಪ ಭೀಣ್ಣಿ, ಪುರಸಭೆ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಕಾಶಿ, ಮಲ್ಲಿನಾಥ ಕಾಳಗಿ, ಮುಖಂಡರಾದ ಜಗದೇವರೆಡ್ಡಿ ಪಾಟೀಲ, ಗುಂಡು ಐನಾಪುರ, ಸುರೇಶ್ ಮೆಂಗನ್, ಮಲ್ಲಿಕಾರ್ಜುನ ಬೆಣ್ಣೂರಕರ್, ಜಗದೀಶ್ ಚವ್ಹಾಣ, ಬೋಜು ಭಾಗೋಡಿ, ಸಂತೋಷ ಪೂಜಾರಿ, ಗುರುಪ್ರಸಾದ್ ಕಮರವಾಡಿ ಅರ್ಜುನ್ ಕಟ್ಟಿಮನಿ, ಶರಣು ಮರಗಳು ಕದಂಬ ಹೊಸೂರ್ ಬಿರಪ್ಪ ಪೂಜಾರಿ ರಾಜೋಳಿ ವಿಶ್ವನಾಥ್ ಹೊಸ್ಸುರ್, ವಿಶ್ವನಾಥ ಕರದಾಳ, ಅಯ್ಯಪ್ಪ ಜನಾಬೊಗರಿ, ಸಾಬಣ್ಣ ಹೊಳಿಕಟ್ಟಿ, ನಾಗೇಂದ್ರ ಬುರ್ಲಿ, ಯಲ್ಲಯ್ಯ ಕಲಾಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.