ಯಾದಗಿರಿ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ದಿನಾಚರಣೆ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಭಾರತೀಯ ಜನತಾ ಪಾರ್ಟಿ ಯಾದಗಿರಿ ಜಿಲ್ಲಾ ಕಾರ್ಯಲಯದಲ್ಲಿ ಮಂಗಳವಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಹಾಗೂ ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿ ಗೌಡ ಮುದ್ನಾಳ ಅವರು ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಸಂವಿಧಾನ ಪ್ರಸ್ತಾವನೆ ಓದಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಡಾ. ಶರಣಭೂಪಾಲ್ ರೆಡ್ಡಿ, ದೇವಿಂದ್ರನಾಥ ನಾದ್, ವೆಂಕಟರೆಡ್ಡಿ ಅಬ್ಬೆ ತುಮಕೂಮಕೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ, ಜಿಲ್ಲಾ ಬಿಜೆಪಿ ವಕ್ತಾರ ಹಣಮಂತ ಇಟಗಿ, ನಗರ ಸಭೆ ಸದಸ್ಯರಾದ ಸ್ವಾಮಿ ದೇವ್ ದಾಸನ್ಮ ಕೇರಿ, ಮಲ್ಲಿಕಾರ್ಜುನ್ ಹೊನಗೇರಿ, ರಾಜಶೇಖರ ಸ್ನೇಹರಾಸಳಕರ, ಬಸವರಾಜ್ ಸೊನ್ನದ ಕಾಡಮನೋರ, ಬಸವರಾಜ್ ಚಂಡ್ರಕಿ, ಗೋಪಾಲ್ ದಾಸನ್ಮ ಕೇರಿ, ಮಲ್ಲಿಕಾರ್ಜುನ ಜಲ್ಲಪ್ಪನೂರ, ಚಂದ್ರಶೇಖರ್ ಕಡೆಸೂರ, ನಾಗಪ್ಪ ಗಚ್ಚಿನಮನಿ, ಶ್ರೀಕಾಂತ್ ಸುಂಗಗೂಲ್ಕರ್ ಸೇರಿದಂತೆ ಪಕ್ಷದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.