ಕೊಡ್ಲಾ ಉರಿಲಿಂಗ ಪೆದ್ದಿ ಚತುರ್ಥ ಮಠದ ಶ್ರೀ ಡಾ.ನಂಜುಂಡ ಮಹಾಸ್ವಾಮಿಗಳ ನಿಧನಕ್ಕೆ ಮಹಾಂತಪ್ಪ ಸಂಗಾವಿ ಕಂಬನಿ
ನಾಗಾವಿ ಎಕ್ಸಪ್ರೆಸ್
ಸೇಡಂ: ತಾಲೂಕಿನ ಕೊಡ್ಲಾದ ಉರಿಲಿಂಗ ಪೆದ್ದಿ ಮಠದ ಪರಮಪೂಜ್ಯ ಡಾ.ಶ್ರೀ ನಂಜುಂಡ ಮಹಾಸ್ವಾಮೀಜಿಗಳವರು ಲಿಂಗೈಕ್ಯರಾದ ಸುದ್ದಿ ಮನಸ್ಸಿಗೆ ಅತೀವ ದುಃಖವುಂಟು ಮಾಡಿದೆ ಎಂದು ಕಾಡಾ ಮಾಜಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಕಂಬನಿ ಮಿಡಿದಿದ್ದಾರೆ.
ಪೂಜ್ಯ ಶ್ರೀಗಳ ಅಗಲಿಕೆಯಿಂದ ಕಲ್ಯಾಣ ಕರ್ನಾಟಕದ ಶರಣ ಪರಂಪರೆಯ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.
ಈ ಭಾಗದಲ್ಲಿ ಬಸವಾದಿ ಶರಣರ ತತ್ವಗಳನ್ನು ಪ್ರಚಾರ ಮಾಡುವ ಮೂಲಕ ಪೂಜ್ಯರು ವಚನಕ್ರಾಂತಿ ಮಾಡಿದ್ದರು. ಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯ ಜೀವನದುದ್ದಕ್ಕೂ ನಡೆಸಿದ ಶ್ರೀಗಳು, ಸಾಮಾಜಿಕ ನ್ಯಾಯ ಹಾಗೂ ಸಹೋದರತ್ವದ ತಳಹದಿಯಲ್ಲಿ ಮಠವನ್ನು ನಡೆಸಿಕೊಂಡು ಬಂದವರು ಅನೇಕ ವಿದ್ಯಾಸಂಸ್ಥೆಗಳ ಮೂಲಕ ಬಡ ಮಕ್ಕಳಿಗೆ ವಿದ್ಯಾಧಾನ ಮಾಡಿದ್ದಾರೆ,
ಲಿಂಗೈಕ್ಯ ಪೂಜ್ಯರಿಗೆ ಬಸವಾದಿ ಶರಣರು ಸದ್ಗತಿ ನೀಡಲಿ, ಅಪಾರ ಸಂಖ್ಯೆಯ ಭಕ್ತಾದಿಗಳಿಗೆ ಅವರು ಅಗಲಿಕೆಯ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಮಹಾಂತಪ್ಪ ಸಂಗಾವಿ ಪ್ರಾರ್ಥಿಸಿದ್ದಾರೆ.