Oplus_0

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ಬಿ.ರಾಜಪ್ಪ ರಾಜೀನಾಮೆ

ನಾಗಾವಿ ಎಕ್ಸಪ್ರೆಸ್

ಬೆಂಗಳೂರು: ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ಬಿ.ರಾಜಪ್ಪ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ಸಂಘದಲ್ಲಿ  ಉಸಿರು ಕಟ್ಟುವ ವಾತಾವರಣ ಇರುವುದರಿಂದ ಸಂಘಟನಾ ಕಾರ್ಯದರ್ಶಿಯಾಗಿ ಮುಕ್ತವಾಗಿ ಸಂಘಟನಾ ಚಟುವಟಿಕೆಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡು ಆ ಸ್ಥಾನಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗದ ಕಾರಣದಿಂದ ರಾಜಿನಾಮೆ ನೀಡುತ್ತಿದ್ದೇನೆ ಎಂದು ಡಿ.3 ರಂದು ರಾಜ್ಯಾಧ್ಯಕ್ಷರಿಗೆ ಬರೆದ‌ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ನಾನು ಕಳೆದ ಎರಡೂವರೆ ವರ್ಷಗಳಿಂದ ಸಂಘಟನಾ ಕಾರ್ಯದರ್ಶಿಯಾಗಿದ್ದರೂ ಸಹ ನನ್ನನ್ನು ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ರಾಜ್ಯಾಧ್ಯಕ್ಷರು ಯಾವುದೇ ವೇದಿಕೆಯನ್ನು ಕಲ್ಪಿಸಿಕೊಡದಿರುವುದು ನನಗೆ ತೀವ್ರ ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸಭೆಗಳಲ್ಲಿ ಸಂಘಟನಾ ಚಟುವಟಿಕೆಗಳ ಹೊರತಾಗಿ ಸಂಘದ ಮಾಸಿಕ ಖರ್ಚು ಮತ್ತು ವೆಚ್ಚ, ಶ್ರೀ ವಿಶ್ವೇಶ್ವರಯ್ಯ ಬಡಾವಣೆ ನಿವೇಶನ ವಿಚಾರ ಮತ್ತು ಸದಸ್ಯತ್ವ ಬಯಸಿ ಬರುತ್ತಿದ್ದ ಅರ್ಜಿಗಳ ಬಗ್ಗೆ ಮಾತ್ರ ಚರ್ಚೆಗೆ ಸಭೆಯನ್ನು ಸೀಮಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಜಿಲ್ಲಾ ಮತ್ತು ರಾಜ್ಯ ಸಂಘಗಳ ನಡುವೆ ಬಾಂಧವ್ಯ ರೂಪಿಸುವಲ್ಲೂ ಪದಾಧಿಕಾರಿಗಳಾದ ನಾವು ವಿಫಲವಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಪ್ರತಿಷ್ಠೆಗಾಗಿ ಮತ್ತು ಸರ್ಕಾರದ ಓಲೈಕೆಗಾಗಿ ಸುಮಾರು ಏಳರಿಂದ ಎಂಟು ಕೋಟಿ ರೂ.ಗಳನ್ನು ವ್ಯಯ ಮಾಡಿ ರಾಜ್ಯ ಮಟ್ಟದ ಸಮಾವೇಶವನ್ನು ನಡೆಸಿದ್ದರಿಂದ ಸಮಾಜಕ್ಕೆ ಬಿಡಿಗಾಸಿನ ಉಪಯೋಗವಾಗದಿರುವುದು ಪದಾಧಿಕಾರಿಗಳಾದ ನಮಗೆ ಒಂದು ರೀತಿಯಲ್ಲಿ ಮುಜುಗರ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.

ಇನ್ನೊಂದು ಮುಖ್ಯವಾದ ವಿಚಾರ ಏನೆಂದರೆ, ಸಮಾಜದ ನಿಗಮ ಮಂಡಳಿ ಸ್ಥಾಪನೆಗೆ ಅಗತ್ಯ ಕ್ರಮವನ್ನು ಸಂಘದಿಂದ ಕೈಗೊಳ್ಳದಿರುವುದು ನಮ್ಮ ವಿಫಲತೆಗೆ ಸಾಕ್ಷಿಯಾಗಿದೆ. ಸಮಾಜದ ಸಂಸ್ಥಾನ ಮಠಕ್ಕೆ ಪೀಠಾಧೀಶರನ್ನು ನೇಮಕ ಮಾಡುವ ಸಂದರ್ಭದಲ್ಲೂ ನಾವುಗಳು ಕೆಲ ಸ್ವಾಮೀಜಿಗಳ ಓಲೈಸಲು ಹೋಗಿ ಗೊಂದಲ ಸೃಷ್ಟಿಸುವ ಮೂಲಕ ಸಮಾಜಕ್ಕೆ ಒಂದು ರೀತಿಯಲ್ಲಿ ಕೆಟ್ಟ ಸಂದೇಶವನ್ನು ನೀಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ಘಟನಾವಳಿಗಳು ನನ್ನನ್ನು ಘಾಸಿಗೊಳಿಸಿವೆ. ಮೇಲೆ ತಿಳಿಸಿರುವ ಕಾರಣಗಳಿಂದ ನಾನು ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ಸರಿಯಾದ ನ್ಯಾಯವನ್ನು ಒದಗಿಸಿಕೊಡಲು ಸಾಧ್ಯವಾಗದೆ ಮಾನಸಿಕವಾಗಿ ನೊಂದು ಈ ರಾಜಿನಾಮೆ ಸಲ್ಲಿಸುತ್ತಿದ್ದೇನೆ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!