Oplus_0

ಚಿತ್ತಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ಫಲಿತಾಂಶ ತಡೆಯಾಜ್ಞೆಗೆ ಕಾಂಗ್ರೆಸ್ ನ ನಾಗರೆಡ್ಡಿ  ಪಾಟೀಲ ಕುತಂತ್ರ, ಡಿಎಪಿ ಹಗರಣ ಮುಚ್ಚಿ ಹಾಕಲು ಯತ್ನ: ಬಿಜೆಪಿ ಗಂಭೀರ ಆರೋಪ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಚುನಾವಣಾಧಿಕಾರಿ ಬಾರದಂತೆ ನೋಡಿಕೊಂಡು ನಂತರ ಚುನಾವಣೆ ಅಸಿಂಧು ಮಾಡಿಸಿ ಈಗ ತಡೆಯಾಜ್ಞೆ ತರುವ ಕೆಲಸದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ನಾಗರೆಡ್ಡಿ ಪಾಟೀಲ ಕರದಾಳ ಕುತಂತ್ರ ಅಡಗಿದೆ ಹಾಗೂ ಈ ಹಿಂದೆ ಬಸವರಾಜ ಸಂಗಾವಿ ಅಧ್ಯಕ್ಷರ ಕಾಲಾವಧಿಯಲ್ಲಿ ನಡೆದ ಡಿಎಪಿ ಹಗರಣ ಮುಚ್ಚಿ ಹಾಕಲು ವಾಮಮಾರ್ಗದ ಮೂಲಕ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆ ಮುಂದೂಡಿಸಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಸಂಘದ ಸದಸ್ಯರಾದ ವಿಶ್ವರಾಜ ನೆನೆಕ್ಕಿ, ಸಿದ್ಧರಾಮೇಶ್ವರ ರೇಷ್ಮಿ, ಬಿಜೆಪಿ ಪ್ರದಾನ ಕಾರ್ಯದರ್ಶಿ ನಾಗರಾಜ ಹೂಗಾರ ಅವರು ಗಂಭೀರವಾಗಿ ಆರೋಪಿಸಿದ್ದಾರೆ.

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಘದ ಅಧ್ಯಕ್ಷರು ಬೇರೆಯವರಾದರೆ ಡಿಎಪಿ ಹಗರಣ ಹೊರಬರಲಿದೆ ಎಂಬ ಎಕೈಕ ಉದ್ದೇಶದಿಂದ ದುಡ್ಡಿನ ದರ್ಪದಿಂದ ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡು ಚುನಾವಣೆಗೆ ತಡೆಯಾಜ್ಞೆ ತಂದಿದ್ದಾರೆ. 12 ಸದಸ್ಯರ ಪೈಕಿ 11 ಸದಸ್ಯರ ಬಹುಮತ ಇದೆ ಇದರಲ್ಲಿ ಬಿಜೆಪಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಇದ್ದಾರೆ. ನವೆಂಬರ್ 30 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರಾಗಿ ವಿಶ್ವರಾಜ್ ನೆನೆಕ್ಕಿ ಮತ್ತು ಕಾಂಗ್ರೆಸ್ ಬೆಂಬಲಿತ ಉಪಾಧ್ಯಕ್ಷರಾಗಿ ಅರ್ಜುನ್ ಸಾಲಹಳ್ಳಿ ಆಯ್ಕೆಯಾಗಿದ್ದರು ಆದರೆ ಇದನ್ನು ಅಸಿಂಧು ಮಾಡಿಸಿದ್ದರು ಎಂದು ಹೇಳಿದರು.

ಈಗ ಡಿ.10 ರಂದು ಮತ್ತೇ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಿಗದಿಯಾಗಿತ್ತು ಅದರಂತೆ ನಾವುಗಳು ಬೆಳಿಗ್ಗೆ 9 ಗಂಟೆಗೆ ಹಾಜರಿದ್ದೇವು ಆದರೆ ಚುನಾವಣಾಧಿಕಾರಿ ಜೀವನ್ ಧನಕರ್ 9.45 ಕ್ಕೆ ಆಗಮಿಸಿದ್ದ ಅವರು ಚುನಾವಣೆ ಪ್ರಕ್ರಿಯೆ ನಡೆಸುವುದನ್ನು ಬಿಟ್ಟು ಚುನಾವಣಕ್ಕೆ ತಡೆಯಾಜ್ಞೆ ಬಂದಿದೆ ಎಂದು ಹೇಳಿ ಅದರ ಪ್ರತಿ ಗೋಡೆಗೆ ಅಂಟಿಸಿ ಹೊರನಡೆದರು ಎಂದು ಹೇಳಿದರು

ಅವರ ಹತ್ತಿರ ಅನುಮೋದಕರು ಹಾಗೂ ಸೂಚಕರು ಇಲ್ಲ ಹೀಗಾಗಿ ಹೇಗಾದರೂ ಮಾಡಿ ಚುನಾವಣೆ ಮುಂದೂಡಿಸಿ ನಂತರ ನಿರ್ದೇಶಕರನ್ನು ಖರೀದಿ ಮಾಡಿ ತಮ್ಮ ಬೆಂಬಲಿಗರನ್ನು ಅಧಿಕಾರಕ್ಕೆ ತರುವ ದುರಾಲೋಚನೆ ಹೊಂದಿದ್ದಾರೆ ಈಗಾಗಲೇ ಕೆಲ ನಿರ್ದೇಶಕರನ್ನು ಅಧಿಕಾರದ ಸ್ಥಾನಮಾನ ಹಾಗೂ 50 ಸಾವಿರ ಹಣದ ಆಮಿಷ ಒಡ್ಡಿದ್ದಾರೆ ಎಂದು ನಾಗರೆಡ್ಡಿ ಪಾಟೀಲ ಕರದಾಳ ವಿರುದ್ಧ ವಿಶ್ವರಾಜ ನೆನೆಕ್ಕಿ ನೇರವಾಗಿ ಆರೋಪಿಸಿದರು. ಇಂತಹ ಕುತಂತ್ರ ನಾಗರೆಡ್ಡಿ ಪಾಟೀಲ ಕರದಾಳ ಅವರಿಗೆ ಕ್ಷೇತ್ರದ ಶಾಸಕರು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಬೆಂಬಲಿಸಬೇಡಿ, ಒಂದು ವೇಳೆ ಬೆಂಬಲಿಸಿದರೇ ಮುಂದಿನ ದಿನಗಳಲ್ಲಿ ನಿಮಗೆ ಹಿನ್ನೆಡೆ ಆಗಲಿದೆ ಎಂದು ಹೇಳಿದರು.

ನಮ್ಮ ಪಕ್ಷದ ಜಿಲ್ಲಾ ನಾಯಕರನ್ನು ಸಂಪರ್ಕಿಸಿ ಕಾನೂನಾತ್ಮಕ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ಅರ್ಜುನ್ ಭಂಕಲಗಿ, ಸಿದ್ಧರಾಮೇಶ್ವರ ರೇಷ್ಮಿ, ಸೋಮಶೇಖರ ಯಲ್ಲಾಪುರ, ಶ್ರೀಶೈಲ ಸುಬೇದಾರ್, ಅಶ್ವಥ್ ರಾಠೋಡ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಪ್ರದಾನ ಕಾರ್ಯದರ್ಶಿಗಳಾದ ನಾಗರಾಜ ಹೂಗಾರ, ಮಲ್ಲಿಕಾರ್ಜುನ ಮಾಲಗತ್ತಿ, ಮುಖಂಡರಾದ ದಶರಥ ದೊಡ್ಡಮನಿ, ದೀಪಕ್ ಹೊಸ್ಸುರಕರ್, ಚಂದ್ರು ಸಾತನೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

“ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಜಿಲ್ಲಾ ಸಹಕಾರ ಚುನಾವಣಾಧಿಕಾರಿ ಕಲಬುರ್ಗಿ ಇವರ ಆದೇಶದಂತೆ ನೇಮಕವಾದ ನಾನು ಡಿ.2 ರಂದು ಚುನಾವಣೆ ನೋಟಿಸ್ ಹೊರಡಿಸಿ ಡಿ.10 ರಂದು ಪದಾಧಿಕಾರಿಗಳ ಆಯ್ಕೆ ದಿನಾಂಕ ನಿಗದಿಪಡಿಸಲಾಗಿತ್ತು, ಆದರೆ ಡಿ.10 ರಂದು ಬೆಳಿಗ್ಗೆ 9 ಗಂಟೆಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಸೇಡಂ ಉಪ ವಿಭಾಗ ಇವರ ಆದೇಶದನ್ವಯ ಆಡಳಿತ ಮಂಡಳಿ ನಿರ್ದೇಶಕ ಆಯ್ಕೆಯ ಫಲಿತಾಂಶ ತಡೆಯಾಜ್ಞೆ ನೀಡಿ ಆದೇಶಿಸಿದ್ದಾರೆ ಪ್ರಯುಕ್ತ ಪದಾಧಿಕಾರಿಗಳ ಆಯ್ಕೆಯ ಪ್ರಕ್ರಿಯೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ”.- ಜೀವನ ಧನಕರ್ ಸಹಾಯಕ ರಿಟರ್ನಿಂಗ್ ಅಧಿಕಾರಿ.

Spread the love

Leave a Reply

Your email address will not be published. Required fields are marked *

error: Content is protected !!