Oplus_0

ಚಿತ್ತಾಪುರದಲ್ಲಿ ಗೀತಾ ಜಯಂತಿ ಆಚರಣೆ, ಭಗವದ್ಗೀತೆಯು ಪವಿತ್ರ ಗ್ರಂಥ: ಕಂಬಳೇಶ್ವರ ಶ್ರೀ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಭಗವದ್ಗೀತೆಯು ಪ್ರಪಂಚದ 60 ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿರುವ ಪವಿತ್ರ ಗ್ರಂಥವಾಗಿದೆ ಎಂದು ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಬಾಲಾಜಿ ಮಂದಿರದ ಅಯ್ಯಪ್ಪ ಸನ್ನಿಧಾನದಲ್ಲಿ ನಡೆದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂಗಳ ಧರ್ಮದಲ್ಲಿ ಭಗವದ್ಗೀತೆಯನ್ನು ಪವಿತ್ರ ಗ್ರಂಥವೆಂದು ಪರಿಗಣಿಸಲಾಗಿದೆ. ದೇಶಾದ್ಯಂತ ಅನೇಕ ಹಿಂದೂ ಸಂಘಟನೆಗಳು ಭಗವದ್ಗೀತೆಯ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ ಎಂದರು.

ಕಳೆದ 20 ವರ್ಷಗಳಿಂದ ಅಯ್ಯಪ್ಪ ಸ್ವಾಮಿ ವ್ರತವನ್ನು ಆಚರಿಸುತ್ತಿರುವ ಇಲ್ಲಿನ ಅಯ್ಯಪ್ಪ ಸ್ವಾಮಿ ಭಕ್ತರ ಭಕ್ತಿ ಮತ್ತು ಪ್ರಾರ್ಥನೆ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಂದಿನ ಯುವಕರು ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಇಂತಹ ಪರಿಸ್ಥಿತಿಯಲ್ಲಿ ಯುವಕರಲ್ಲಿ ಅಯ್ಯಪ್ಪ ಸ್ವಾಮಿ ಭಕ್ತಿಯ ಬೆಳಕು ಮೂಡಿಸಿ ಅವರಲ್ಲಿ ಬದಲಾವಣೆ ತಂದ ಆನಂದ ಗುರುಸ್ವಾಮಿ ಮತ್ತು ಅವರ ಸಂಗಡಿಗರ ಸೇವೆ ಶ್ರೇಷ್ಠ ಎಂದು ಬಣ್ಣಿಸಿದರು. ಇದೇ ಸಂದರ್ಭದಲ್ಲಿ ಹನುಮಾನ್ ಮಾಲಾಧಾರಿಗಳಿಗೆ ಗೌರವಿಸಿ ನಂತರ ಪ್ರಸಾದ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ಬಾಲಾಜಿ ಮಂದಿರದ ಅರ್ಚಕ ಸೂರ್ಯಕಾಂತ, ಆನಂದ ಗುರುಸ್ವಾಮಿ, ಚಂದ್ರಶೇಖರ ಗುರುಸ್ವಾಮಿ, ಸಿದ್ದು ಸುಪಾರಿ ಗುರುಸ್ವಾಮಿ, ಲಕ್ಷ್ಮೀಕಾಂತ ಗುರುಸ್ವಾಮಿ, ಪವನ್ ಸ್ವಾಮಿ, ಶ್ರೀಧರ್ ಸ್ವಾಮಿ, ಬಸವರಾಜ ಸ್ವಾಮಿ, ಮುರುಳಿ ಹಡಪದ ಸ್ವಾಮಿ, ಮೇಘರಾಜ್ ಗುತ್ತೇದಾರ, ಮಲ್ಲು ಪೇಂಟರ್ ಸೇರಿದಂತೆ ಅಯ್ಯಪ್ಪ ಹಾಗೂ ಹನುಮಾನ್ ಮಾಲಾಧಾರಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!