ಚಿತ್ತಾಪುರ ವಿಶ್ವ ಹಿಂದು ಪರಿಷತ್ ವತಿಯಿಂದ ಗೀತಾ ಜಯಂತಿ ಕಾರ್ಯಕ್ರಮ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಶ್ಯಾಮ್ ಮೇಧಾ ಗೀತಾ ಜಯಂತಿಯ ಕುರಿತು ಶ್ರೀಕೃಷ್ಣನು ಅರ್ಜುನನಿಗೆ ಗೀತೋಪೋದೇಶ ಮಾಡಿದ ಕುರಿತು ಮಾತನಾಡಿದರು.
ಪ್ರಖಂಡ ಅಧ್ಯಕ್ಷ ಶ್ರೀನಿವಾಸ್ ಹಳ್ಳಿ ಜಿಲ್ಲಾ ಕಾರ್ಯದರ್ಶಿ ಮಹಾದೇವ ಅಂಗಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಾಂತ ಸಹ ಸೇವಾ ಪ್ರಮುಖ ಅಂಬರೇಶ ಸುಲೇಗಾoವ, ಜಿಲ್ಲಾ ಸೇವಾ ಪ್ರಮುಖ ವೀರಣ್ಣ ಶಿಲ್ಪಿ, ಮಾತೃ ಶಕ್ತಿ ಪ್ರಮುಖ ಸುವರ್ಣ ಶಿಲ್ಪಿ, ಪ್ರಖಂಡ ಮಾತೃಶಕ್ತಿ ಪ್ರಮುಖ ರೇಣುಕಾ ಬಿರಾದಾರ, ಸಂಘದ ಜಿಲ್ಲಾ ಸೇವಾ ಪ್ರಮುಖ ಪ್ರಲ್ಹಾದ ವಿಶ್ವಕರ್ಮ, ನಿರ್ಮಲಾ ಭಂಗಿ, ವಿಜಯಲಕ್ಷ್ಮಿ ತುರೆ, ಅಕ್ಕಮಹಾದೇವಿ ದೇಸಾಯಿ, ಜ್ಯೋತಿ ಜಗನಾಥ್, ಶೀಲಾ ದೊಡ್ಡಮನಿ, ನಗರ ಅಧ್ಯಕ್ಷ ಯಲ್ಲಾಲಿಂಗ ಸುಲ್ತಾನಪೂರ, ನಗರ ಬಜರಂಗದಳ ಸಂಯೋಜಕ ಯಲ್ಲಪ್ಪ ಪುಂಗಿ, ನಗರ ಸುರಕ್ಷಾ ಪ್ರಮುಖ ಉಮೇಶ ವಾಡಿ, ನಗರ ಬಜರಂಗದಳ ಸಹ ಸಂಯೋಜಕ ಅನೀಲ್ ಪೂಜಾರಿ, ಸೀಮಾ ಜಿತುರೆ ಇದ್ದರು.
ಪ್ರಖಂಡ ಕಾರ್ಯದರ್ಶಿ ಸಾಬಣ್ಣ ಪೂಜಾರಿ ಸ್ವಾಗತಿಸಿದರು, ಪ್ರಲ್ಹಾದ ವಿಶ್ವಕರ್ಮ ವೈಯಕ್ತಿಕ ಗೀತೆ ಹೇಳಿದರು, ವಿಜಯಲಕ್ಷ್ಮಿ ಬಿರಾದಾರ ಶಾಂತಿಮಂತ್ರ ಜೈಕಾರ ನಡೆಸಿಕೊಟ್ಟರು.