ಚಿತ್ತಾಪುರ ಡಿಎಸ್ಎಸ್ (ಅಂಬೇಡ್ಕರ್ ವಾದ) ಪದಾಧಿಕಾರಿಗಳ ಆಯ್ಕೆ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಸಂಜೀವಕುಮಾರ ಜವಳಕರ್,
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ವಿಭಾಗೀಯ ಸಂಚಾಲಕ ಶ್ರೀನಿವಾಸ ಖೇಳಗಿ, ಜಿಲ್ಲಾ ಸಂಚಾಲಕ ಸಂಜೀವಕುಮಾರ ಜವಳಕರ್, ಸಂಘಟನಾ ಸಂಚಾಲಕ ಬಾಬುರಾವ್ ಶೆಳ್ಳಗಿ, ಮಾರುತಿ ಹುಳಗೋಳಕರ್, ಸತೀಶ್ ಕುಮಾರ್ ಕೋಬಾಳಕರ್, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಶಿವಪುತ್ರ ಮಾವಿನ್, ಜಿಲ್ಲಾ ಸಂಘಟನಾ ಸಂಚಾಲಕ ಕಪೀಲ್ ಸಿಂಗೆ, ಜಿಲ್ಲಾ ಖಜಾಂಚಿ ದೇವಿಂದ್ರ ಕುಮಸಿ ಅವರು ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು: ಮೌನೇಶ್ ಮಾರಡಗಿ (ಸಂಚಾಲಕರು), ರವಿ ಸಿಂಗೆ ವಾಡಿ, ಜೈ ಭೀಮ್ ಭಂಕಲಗಿ, ಕುಶಾಲ್ ಕುಮಾರ್, ಮಹೇಶ್ ದೊಡ್ಡಮನಿ ದಿಗ್ಗಾಂವ, ಶಿವುಕುಮಾರ ಹಾರಬೂಳ, ಸೋಮನಾಥ್ ಕೊಂಚೂರು, ರಾಯಪ್ಪ ಪೂಜಾರಿ ನಾಲವಾರ (ಸಂಘಟನಾ ಸಂಚಾಲಕರು), ಹಾಜಿಸಾಬ್ ಸಾತನೂರು, ನಾಗಪ್ಪ ಇಟಗಿ, ಬಸವರಾಜ ಕಾಶಿ, ರಾಯಪ್ಪ ಪೂಜಾರಿ (ಕಾರ್ಯಕಾರಿ ಸಮಿತಿ ಸದಸ್ಯರು). ವಿದ್ಯಾರ್ಥಿ ಒಕ್ಕೂಟ: ಶಿವಕುಮಾರ ಯಾದಗಿರ (ಸಂಚಾಲಕರು).
ಜಿಲ್ಲಾ ಸಂಚಾಲಕ ಸಂಜೀವಕುಮಾರ ಜವಳಕರ್ ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತಾಲೂಕಿನಲ್ಲಿ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಜನರು ಧ್ವನಿಯಾಗಿ ಕಾರ್ಯನಿರ್ವಹಿಸಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮನೋಹರ ಕೊಳ್ಳೂರ, ಶಿವಯೋಗಿ ಕೋಲ್ಲೂರು, ಜಯವಂತ ಭಂಕಲಗಿ, ಮೋನಪ್ಪ ವಡಗೇರಿ, ದೇವಿಂದ್ರಪ್ಪ ಪೂಜಾರಿ, ಗಂಗಾಧರ ಕೊಡದೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.