Oplus_0

ಚಿತ್ತಾಪುರ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಆಯ್ಕೆ ರದ್ದು, ಪುನಃ ಸಭೆ ಕರೆದು ಒಮ್ಮತದ ಹಾಗೂ ಸೂಕ್ತರಾದವರೊಬ್ಬರನ್ನು ಆಯ್ಕೆ ಮಾಡಲಾಗುವುದು: ಭೀಮಣ್ಣ ಸಾಲಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಆಯ್ಕೆ ರದ್ದು ಮಾಡಲಾಗಿದೆ ಪುನಃ ಬರುವ ಬುಧವಾರ ಸಮಾಜದ ಪ್ರಮುಖರ ಸಭೆ ಕರೆದು ಹೊಸದಾಗಿ ಒಮ್ಮತದ ಹಾಗೂ ಸೂಕ್ತರಾದವೊಬ್ಬರನ್ನು ಆಯ್ಕೆ ಮಾಡಲಾಗುವುದು ಎಂದು ಕೋಲಿ ಸಮಾಜದ ಹಿರಿಯ ಮುಖಂಡ ಭೀಮಣ್ಣ ಸಾಲಿ ಹೇಳಿದರು.

ಪಟ್ಟಣದ ತಮ್ಮ ಸ್ವಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋಲಿ ಸಮಾಜದ ತಾಲೂಕು ಅಧ್ಯಕ್ಷರನ್ನು ಆಯ್ಕೆ ಸಲುವಾಗಿ ಶುಕ್ರವಾರ ಕರೆದ ಸಭೆಯಲ್ಲಿ ನಿಂಗಣ್ಣ ಹೆಗಲೇರಿ ಡೋಣಗಾಂವ ಅವರನ್ನು ಆಯ್ಕೆ ಮಾಡಲಾಗಿತ್ತು ಆದರೆ ಇದಕ್ಕೆ ಸಮಾಜದ ಮುಖಂಡರು, ಯುವಕರು ಆಕ್ಷೇಪ ವ್ಯಕ್ತಪಡಿಸಿದರು ಹೀಗಾಗಿ ಈ ಆಯ್ಕೆ ರದ್ದು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾದ ತಮಣ್ಣ ಡಿಗ್ಗಿ, ಶಿವಕುಮಾರ ಯಾಗಾಪೂರ, ನಿಂಗಣ್ಣ ಹೆಗಲೇರಿ, ಭಾಗಣ್ಣ ಹಲಕಟ್ಟಿ, ಅಂಬಣ್ಣ ಹೋಳಿಕಟ್ಟಿ ಈ ಐವರನ್ನು ಕರೆಯಿಸಿ ಪ್ರಮುಖರ ಸಮ್ಮುಖದಲ್ಲಿ ಒಮ್ಮತದ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಲಾಗುವುದು ಎಂದರು.

ಸಮಾಜದಲ್ಲಿ ಒಡಕು ಉಂಟಾಗಬಾರದು ಎಂಬ ಉದ್ದೇಶದಿಂದ ಈ ಆಯ್ಕೆ ರದ್ದುಪಡಿಸಲಾಗಿದೆ. ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ ಮಾಡಲಾಗುವುದು, ಕೋಲಿ ಸಮಾಜದ ತಾಲೂಕು ಅಧ್ಯಕ್ಷರು ಇಲ್ಲಿವರೆಗೆ ದಿಗ್ಗಾಂವ ಜಿಲ್ಲಾ ಪಂಚಾಯತ್ ವ್ಯಾಪ್ತಿಯ (ಒಂಟಿ ಕಮಾನ್) ಭಾಗದವರೇ ಆಗಿದ್ದಾರೆ ಹೀಗಾಗಿ ಈ ಬಾರಿ ದಂಡೋತಿ, ಗುಂಡಗುರ್ತಿ ಭಾಗದವರಿಗೆ ಅವಕಾಶ ನೀಡಬೇಕು ಎಂಬ  ಒತ್ತಾಯ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ಕ್ರಮಕ್ಕೆ ಅವರು ಒಪ್ಪಿಕೊಳ್ಳಬೇಕು ಇಲ್ಲದಿದ್ದರೆ ಚುನಾವಣೆ ನಡೆಸಿ ಆಯ್ಕೆ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಕೋಲಿ ಸಮಾಜದ ಮುಖಂಡರಾದ ಜಯಪ್ರಕಾಶ ಕಮಕನೂರ, ಹಣಮಂತ ಸಂಕನೂರ, ಗುಂಡು ಐನಾಪುರ, ಶರಣಪ್ಪ ನಾಟೀಕಾರ, ಶಿವಕುಮಾರ ಯಾಗಾಪೂರ, ತಮಣ್ಣ ಡಿಗ್ಗಿ, ಶರಣಪ್ಪ ನಾಶಿ, ನಿಂಗಣ್ಣ ಅಲ್ಲೂರು, ಮಹಾದೇವ ಕೊನಿಗೇರಿ, ಶರಣು ಭಾಗೋಡಿ, ಭೀಮಾಶಂಕರ ಹೋಳಿಕಟ್ಟಿ ಸೇರಿದಂತೆ ಇತರರು ಇದ್ದರು.

ಕೋಲಿ ಸಮಾಜದ ನಗರಾಧ್ಯಕ್ಷರಾಗಿ ಪ್ರಭು ಹಲಕಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಭೀಮಣ್ಣ ಸಾಲಿ ಘೋಷಣೆ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!