ಕಲ್ಯಾಣ ಕರ್ನಾಟಕ ಉತ್ಸವ ಶಾಲಾ ಸಮಯ ಬದಲಾವಣೆ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಕಲ್ಯಾಣ ಕರ್ನಾಟಕ ಉತ್ಸವ ದಿನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ತಿಳಿಸುತ್ತಾ ಶಾಲೆಯ ಸಮಯವನ್ನು ಈ ದಿನಾಂಕಕ್ಕೆ ಮಾತ್ರ ಅನ್ವಯವಾಗುವಂತೆ ಬೆಳಗಿನ 7 ಗಂಟೆಯಿಂದ ಮಧ್ಯಾಹ್ನ 1.30 ವರೆಗೆ ನಡೆಸುವಂತೆ ಕಲಬುರ್ಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಜ್ಞಾಪನ ಹೊರಡಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯ ದೊರೆತ ದಿನವಾದ ಸೆ.17 ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನ ಎಂದು ಆಚರಿಸಲಾಗುತ್ತದೆ, ಈ ದಿನದಂದು ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಧ್ವಜಾರೋಹಣವನ್ನು ನಡೆಸಿ ಮಕ್ಕಳು ಪುನಃ ಎಂದಿನಂತೆ ಬೆಳಿಗ್ಗೆ 10 ಗಂಟೆಯಿಂದ ಶಾಲೆಯ ತರಗತಿಗಳಿಗೆ ಹಾಜರಾಗುವುದು ಮಕ್ಕಳಿಗೆ ಅನಾನುಕೂಲವಾಗುತ್ತದೆ ಹೀಗಾಗಿ ಈ ದಿನದಂದು ಶಾಲೆಯನ್ನು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1.30, ವರೆಗೆ ನಡೆಸಲು ಅನುಮತಿ ನೀಡಬೇಕು ಎಂದು ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಕಲಬುರ್ಗಿ ಅವರು ಮಾಡಿದ ಮನವಿಗೆ ಸ್ಪಂದಿಸಿದ ಉಪನಿರ್ದೇಶಕರು ಅಪಾರ ಆಯುಕ್ತರ ಆದೇಶನುಸಾರ ಕ್ರಮ ಕೈಗೊಂಡು ಶಾಲಾ ಸಮಯ ಬದಲಾವಣೆ ಮಾಡಿ ಜ್ಞಾಪನ ಹೊರಡಿಸಿದ್ದಾರೆ.