ಶಹಾಬಾದ ನಗರದಲ್ಲಿ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರ ಭಾವಚಿತ್ರಕ್ಕೆ ಸಿಪಿಐಎಂ ಪಕ್ಷದ ಮುಖಂಡರು ಬೆಂಕಿ ಹಚ್ಚಿ ಪ್ರತಿಭಟನೆ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಅರ್ ಅಂಬೇಡ್ಕರ ಅವರ ಬಗ್ಗೆ ಹಗುರವಾಗಿ ಮಾತನಾಡರುವುದನ್ನು ಖಂಡಿಸಿ ಸಿಪಿಐಎಂ ಪಕ್ಷದಿಂದ ರೈಲ್ವೆ ಸ್ಟೇಷನ್ ಹತ್ತಿರ ಪ್ರತಿಭಟನೆ ಮಾಡಿ ಶಾ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಲಾಯಿತು.
ಅಂಬೇಡ್ಕರ್ ಅವರಿಗೆ ಸಂಸತ್ತಿನಲ್ಲಿ ಅವಮಾನ ಮಾಡಿದ ಶಾ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಸಿಪಿಐಎಂ ಪಕ್ಷದ ಚಿತ್ತಾಪುರ ತಾಲೂಕು ಕಾರ್ಯದರ್ಶಿ ಕಾಂ. ಶೇಖಮ್ಮ ಕುರಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಾಗಪ್ಪ ರಾಯಚೂರಕರ್, ಅಂಗನವಾಡಿ ನಗರ ಅಧ್ಯಕ್ಷೆ ಕಾಂ. ಮೈತ್ರಾದೇವಿ, ಕಾಶಿನಾಥ ಬಂಡಿ, ಬೀಮಶ್ಯಾ ಹಳ್ಳಿ, ಕಟ್ಟಡ ಕಾರ್ಮಿಕ ಮುಖಂಡರು ಹಾಗೂ ಪ್ರಗತಿಪರ ಚಿಂತಕರು ಮತ್ತು ಇನ್ನು ಅನೇಕರು ಉಪಸ್ಥಿತರಿದ್ದರು.