ಭೂಮಿ ರೈತ ಜಿಲ್ಲಾ ಪ್ರಶಸ್ತಿಗೆ ಈರಣ್ಣ ಈಸಬಾ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸಹಜಾನಂದ ಕಂಪ್ಯೂಟರ್ – ಏಡೆಡ್ ರೂರಲ್ ಎಜುಕೇಶನ್ ಅಂಡ್ ಡೆವಲಪ್ಟೆಂಟ್ ಟ್ರಸ್ಟ್ ವತಿಯಿಂದ ಪ್ರಸ್ತುತ ಪಡಿಸುವ ಭೂಮಿ ರೈತ ಜಿಲ್ಲಾ ಪ್ರಶಸ್ತಿಗೆ (ಅತ್ಯುತ್ತಮ ತೋಟಗಾರಿಕೆ ಪ್ರಶಸ್ತಿ) ಹಲಕಟ್ಟಿ ಗ್ರಾಮದ ಈರಣ್ಣ ಈಸಬಾ ಆಯ್ಕೆಯಾಗಿದ್ದು ಪ್ರಮಾಣಪತ್ರ ನೀಡಿ ಸತ್ಕರಿಸಲಾಗಿದೆ ಎಂದು ಸೇಕ್ರೆಡ್ ಟ್ರಸ್ಟ್ ಅಧ್ಯಕ್ಷ ಡಾ. ವಿ.ಎನ್.ವಾಸುದೇವ್ ತಿಳಿಸಿದ್ದಾರೆ.
ನಮ್ಮ ದೇಶದ ಬೆನ್ನೆಲುಬಾಗಿರುವ ರೈತರಿಗಾಗಿ ‘ರೈತ ಪ್ರಶಸ್ತಿ” ಪ್ರದಾನ ಸಮಾರಂಭವನ್ನು ಆಚರಿಸಲು. ಕೃಷಿಯ ಮೇಲೆ ಪ್ರಭಾವ ಬೀರುವ ಅವರ ಬದ್ಧತೆ. ಕಠಿಣ ಪರಿಶ್ರಮ, ನವೀನ ಮತ್ತು ಪರಿವರ್ತಕ ವಿಚಾರಗಳನ್ನು ಗೌರವಿಸುವ ನಿಟ್ಟಿನಲ್ಲಿ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಆಗ್ರಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮತ್ತು ನಿರ್ದೇಶಕ ವಿಸ್ತರಣಾ ಸೇವೆ ಡಾ.ಕೆ ಮಂಜುನಾಥ್ ನಾಯಕ್, ಕೊಡಗು ವಿಶ್ವವಿದ್ಯಾಲಯ ಉಪ ಕುಲಪತಿ ಡಾ. ಅಶೋಕ್ ಎಸ್ ಆಲೂರ್, ಸಿಇಒ ನೋಡಲ್ ಅಧಿಕಾರಿ ಡಾ.ಧನಂಜಯ್, ನಾಬರ್ಡ್ ಮಾಜಿ ಮುಖ್ಯ ಪ್ರದಾನ ವ್ಯವಸ್ಥಾಪಕ ಟಿ ರಮೇಶ್, ಮಾಜಿ ಪ್ರೊಫೆಸರ್ ಮತ್ತು ನೋಡಲ್ ಅಧಿಕಾರಿ ಡಾ. ಚಿದಾನಂದ್ ಬಿ.ಲ್, ಸೇರಿದಂತೆ ಪ್ರಶಸ್ತಿ ತೀರ್ಪುಗಾರರು ಮತ್ತು ರೈತ ನಾಯಕರು, ಪಾಲುದಾರರು ಮತ್ತು ಸಹವರ್ತಿಗಳು ಇದ್ದರು.