Oplus_0

ಚಿತ್ತಾಪುರ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ, ಮನಮೋಹನ್ ಸಿಂಗ್ ಶ್ರೇಷ್ಠ ಆರ್ಥಿಕ ತಜ್ಞರು: ಭೀಮಣ್ಣ ಸಾಲಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ದೇಶದ ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರು ಶ್ರೇಷ್ಠ ಆರ್ಥಿಕ ತಜ್ಞರು ಆಗಿದ್ದರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಮನಮೋಹನ್ ಸಿಂಗ್ ಅವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಭಾರತ ದೇಶದ ಎರಡು ಬಾರಿ ಅಂದರೆ 10 ವರ್ಷಗಳ ಪ್ರಧಾನಮಂತ್ರಿಯಾಗಿ ಅಭೂತಪೂರ್ವ ಸೇವೆ ಸಲ್ಲಿಸಿ ಅಪಾರ ಕೊಡುಗೆ ನೀಡಿದ್ದಾರೆ ಅವರ ಸೇವೆ ಅವಿಸ್ಮರಣೀಯ ಎಂದು ಹೇಳಿದರು. ಅವರ ನಿಧನದಿಂದ ದೇಶಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಂತಾಪ ಸೂಚಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಪುರಸಭೆ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶೀಲಾ ಕಾಶಿ, ಸದಸ್ಯ ಜಗದೀಶ್ ಚವ್ಹಾಣ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್, ಯುವ ಅಧ್ಯಕ್ಷ ಸಂಜಯ ಬುಳಕರ್, ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಸಾಬಣ್ಣ ಕಾಶಿ, ಮುಖಂಡರಾದ ಮಲ್ಲಿಕಾರ್ಜುನ್ ಬೊಮ್ಮನಹಳ್ಳಿ, ನಾಗರೆಡ್ಡಿ ಗೋಪಸೇನ್, ಹಣಮಂತ ಸಂಕನೂರ, ವಿಜಯಕುಮಾರ್ ಯಾಗಾಪೂರ, ಬೋರು ರಾಠೋಡ, ಬಸವರಾಜ ಕೆ.ಬಿ, ಖಾಜಾ ಬಾದಲ್, ನಿಂಗಣ್ಣ ಹೆಗಲೇರಿ, ಪ್ರಭು ಹಲಕಟ್ಟಿ, ಭೀಮಣ್ಣ ಹೊತಿನಮಡಿ, ಶಿವರಾಜ್ ಕಲ್ಲಕ್, ನಿಂಬಣ್ಣಗೌಡ ಇಟಗಿ, ಕರಣುಕುಮಾರ್ ಅಲ್ಲೂರು, ಮಹ್ಮದ್ ಯಕ್ಬಾಲ್, ಮಹಾಂತೇಶ್ ಬೊಮ್ಮನಳ್ಳಿ, ಲಕ್ಷ್ಮೀಕಾಂತ ಸಾಲಿ, ಶರಣಪ್ಪ ಕೋರವಾರ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!