ಬ್ಯೂಟಿ ಪಾರ್ಲರ್ ತರಬೇತಿ ಉದ್ಘಾಟನೆ, ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಲು ಕರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯವರು ಕೇವಲ ಹಣಕಾಸಿನ ಸಹಕಾರ ಮಾತ್ರ ಮಾಡದೆ ಸ್ವ ಉದ್ಯೋಗ ಕೈಗೊಳ್ಳುವ ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ತರಬೇತಿ ನೀಡುತ್ತಿದೆ ಹೀಗಾಗಿ ಇದರ ಸದುಪಯೋಗ ಮಹಿಳೆಯರು ಪಡೆದುಕೊಳ್ಳಬೇಕು ಎಂದು ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಫರೀದಾ ಬೇಗಂ ಕರೆ ನೀಡಿದರು.
ತಾಲೂಕಿನ ನಾಗಾವಿ ನಾಡು ವಲಯದ ಪೆದ್ದು ಮಠ ಕಾರ್ಯಕ್ಷೇತ್ರದ ರಾಧಾ ಕೃಷ್ಣ ಜ್ಞಾನ ವಿಕಾಸ ಕೇಂದ್ರದಲ್ಲಿ ಸೃಜನ ಶೀಲ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ಬ್ಯೂಟಿ ಪಾರ್ಲರ್ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮಸ್ಥಳ ಸಂಸ್ಥೆಯವರು ಸ್ವ ಉದ್ಯೋಗ ಕೈಗೊಳ್ಳುವವರಿಗೆ ಪ್ರೇರಣೆ, ತರಬೇತಿ, ಆರ್ಥಿಕ ನೆರವು ಒದಗಿಸಿ ಕೊಡುವ ಮೂಲಕ ಮಹಿಳೆಯರ ಸಬಲೀಕರಣ ಮಾಡುತ್ತಿದೆ ಎಂದು ಹೇಳಿದರು.
ಆಯ್ದ 30 ಜನ ಮಹಿಳೆಯರಿಗೆ ಒಂದು ತಿಂಗಳ ಬ್ಯೂಟಿ ಪಾರ್ಲರ್ ತರಬೇತಿಯನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕ ಫಕೀರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅರ್ಚನಾ, ಬ್ಯೂಟಿಷನ್ ತರಬೇತುದಾರರು ಲತಾ, ಮೇಲ್ವಿಚಾರಕಿ ಗೌದಾವರಿ ಸೇರಿದಂತೆ ಸ್ಥಳೀಯ ಸೇವಾ ಪ್ರತಿನಿಧಿಯವರು, ಸಂಘದ ಸದಸ್ಯರು ಉಪಸ್ಥಿತರಿದ್ದರು.