ಚಿತ್ತಾಪುರ ಗ್ರಾಮ ಆಡಳಿತ ಅಧಿಕಾರಿಗಳ ಅಧಿಕ ಪ್ರಭಾರದ ಕರ್ತವ್ಯವನ್ನು ಸ್ಥಗಿತಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರ್ ಗೆ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾಜ್ಯಾದ್ಯಂತ ಕ್ಷೇತ್ರಮಟ್ಟದ ಮತ್ತು ಕಚೇರಿಯ ಗ್ರಾಮ ಆಡಳಿತ ಅಧಿಕಾರಿಗಳನ್ನು ಅವರ ಮೂಲ ಕರ್ತವ್ಯದ ಸ್ಥಳದಿಂದ ಬೇರೆಡೆಗೆ ನಿಯೋಜನೆ ಮಾಡಿರುವ ಪ್ರಕರಣಗಳಲ್ಲಿ ಅಧಿಕ ಪ್ರಭಾರದ ಕರ್ತವ್ಯವನ್ನು ಸ್ಥಗಿತಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಚಿತ್ತಾಪುರ ತಾಲೂಕು ಶಾಖೆ ನೇತೃತ್ವದಲ್ಲಿ ನೌಕರರು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ರಾಜ್ಯಾದ್ಯಂತ ಕ್ಷೇತ್ರಮಟ್ಟದ ಮತ್ತು ಕಚೇರಿಯ ಗ್ರಾಮ ಆಡಳಿತ ಅಧಿಕಾರಿಗಳನ್ನು ಅವರ ಮೂಲ ಕರ್ತವ್ಯದ ಸ್ಥಳದಿಂದ ಬೇರೆಡೆಗೆ ನಿಯೋಜನೆ ಮಾಡಿಕೊಂಡಿರುವ, ಖಾಲಿ ಇಲ್ಲದ ಹುದ್ದೆಗಳಿಗೂ ಅಧಿಕ ಪ್ರಭಾರದ ಮೇರೆಗೆ ಅತ್ಯಧಿಕ ಪ್ರಮಾಣದಲ್ಲಿ ನಿಯೋಜಿಸಿರುವುದು ಸರ್ಕಾರದ ಗಮನಕ್ಕೆ ಮತ್ತು ಸಂಘದ ಗಮನಕ್ಕೂ ಬಂದಿರುತ್ತದೆ. ಕ್ಷೇತ್ರಮಟ್ಟದ ಮತ್ತು ಕಚೇರಿಯ ಗ್ರಾಮ ಆಡಳಿತ ಅಧಿಕಾರಿಗಳನ್ನು ಅವರ ಮೂಲ ಕರ್ತವ್ಯದ ಸ್ಥಳದಿಂದ ಬೇರೆಡೆಗೆ ನಿಯೋಜನೆ ಮಾಡಿಕೊಂಡಿರುವ, ಖಾಲಿ ಇಲ್ಲದ ಹುದ್ದೆಗಳಿಗೂ ಅಧಿಕ ಪ್ರಭಾರದ ಮೇರೆಗೆ ಅತ್ಯಧಿಕ ಪ್ರಮಾಣದಲ್ಲಿ ನಿಯೋಜಿಸಿರುವ ಪ್ರಕರಣಗಳಲ್ಲಿ ತಾವು ಕರ್ತವ್ಯ ನಿರ್ವಹಿಸುತ್ತಿರುವ ಅಧಿಕ ಪ್ರಭಾರದ ಕೆಲಸವನ್ನು ಜ.13 ರಿಂದ ಸಂಪೂರ್ಣ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಂದು ಹುದ್ದೆಯ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಯನ್ನು, ಸದರಿ ನೌಕರರನ್ನು ಬೇರೆಡೆಗೆ ನಿಯೋಜನೆಗೊಳಿಸಿ ಅವರ ನಿಯೋಜನೆಯಿಂದ ಖಾಲಿಯಾದ ಸ್ಥಳಕ್ಕೆ ಪ್ರತಿಯಾಗಿ ಬೇರೆ ಗ್ರಾಮ ಆಡಳಿತ ಅಧಿಕಾರಿಗಳನ್ನು ಸದರಿ ಖಾಲಿ ಸ್ಥಳಕ್ಕೆ ನಿಯೋಜಿಸಿರುವ ಪ್ರಕರಣಗಳಲ್ಲಿಯೂ ಸಹ ಅಧಿಕ ಪ್ರಭಾರ ವಹಿಸಿರುವ ವೃತ್ತ, ಕಚೇರಿ ಕೆಲಸಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದರು.
ಮೇಲ್ಕಂಡ ಪ್ರಕರಣಗಳಿಗೆ ಸಂಬಂಧಿಸಿದ ಅಧಿಕ ಪ್ರಭಾರದಲ್ಲಿರುವ ವೃತ್ತ, ಕಚೇರಿಯ ದಪ್ತರ್ ದಾಖಲೆಗಳನ್ನು ಜ.13 ರಂದು ಸಂಬಂಧಿಸಿದ ರಾಜಸ್ವ ನಿರೀಕ್ಷಕರು, ಉಪ ತಹಶೀಲ್ದಾರರು, ಸಂಬಂದಿಸಿದ ಕಚೇರಿಗಳಿಗೆ ಹಸ್ತಾಂತರಿಸಲು ತೀರ್ಮಾನಿಸಲಾಗಿದೆ.
ಮೂಲ ವೃತ್ತದಲ್ಲಿ ಕರ್ತವ್ಯ ನಿರ್ವಹಿಸದೇ, ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ವೃತ್ತ, ಕಚೇರಿಗಳ ಅಧಿಕ ಪ್ರಭಾರದ ನಿಯೋಜನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ತಮ್ಮ ದಪ್ತರ್ ದಾಖಲೆಗಳನ್ನು ಸಂಬಂಧಿಸಿದ ರಾಜಸ್ವ ನಿರೀಕ್ಷಕರು, ಉಪ ತಹಶೀಲ್ದಾರರು, ಸಂಬಂಧಿಸಿದ ಕಚೇರಿ ಮುಖ್ಯಸ್ಥರಿಗೆ ಹಸ್ತಾಂತರಿಸಿ, ತಮ್ಮ ತಾಲೂಕು ತಹಶೀಲ್ದಾರ್ ರವರಿಗೆ ವರದಿ ಮಾಡಿಕೊಂಡು ಮತ್ತು ಮೂಲ ವೃತ್ತಕ್ಕೆ ಕರ್ತವ್ಯ ನಿರ್ವಹಿಸಲು ಕಾರ್ಯಾದೇಶ ಹೊರಡಿಸುವಂತೆ ಲಿಖಿತ ರೂಪದಲ್ಲಿ ಮನವಿ ನೀಡಲು ತೀರ್ಮಾನಿಸಲಾಯಿತು.
ಕೆಲವು ವಿಶೇಷ ಚೇತನರು, ಕೆಲವು ದೀರ್ಘಕಾಲಿನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿವುವರು ಮತ್ತು ವಿವಿಧ ರಜೆಗಳ ಮೇಲಿರುವವರುಗಳ ಪ್ರಕರಣಗಳನ್ನು ಹೊರತುಪಡಿಸಿ, ಉಳಿದೆಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇಲ್ಕಂಡಂತೆ ಕ್ರಮವಹಿಸಲು ತೀರ್ಮಾನಿಸಲಾಯಿತು ಎಂಬ ಅಂಶವನ್ನು ತಮ್ಮ ಗಮನಕ್ಕೆ ಸಂಘವು ತರಬಯಸುತ್ತದೆ ಎಂದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ನೌಕರರಾದ ಅನೀಲಕುಮಾರ ಭಾಗೋಡಿ, ಮೈನೋದ್ದಿನ್, ವಿಜಯಕುಮಾರ್ ಯರಗಲ್, ನರಸರೆಡ್ಡಿ, ಮಾರುತಿ, ಶ್ವೇತಾ, ವಸಂತರಾಜ ಮೂರ್ತಿ, ಶೇಖಪ್ಪ, ಹಾಲಮ್ಮ, ಮಲ್ಲವ್ವ, ಸಿದ್ದಮ್ಮ, ಪೂಜಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.