Oplus_0

ಹಾಸ್ಟೆಲ್ ಕಾರ್ಮಿಕರ ಕಾರ್ಮಿಕರಿಗೆ ಜೀವನ ಯೋಗ್ಯ ವೇತನ, ಸೇವಾ ಭದ್ರತೆ, ಶಾಸನಬದ್ದ ಸೌಲಭ್ಯಗಳಿಗೆ ಆಗ್ರಹಿಸಿ ಚಿತ್ತಾಪುರ ತಾಲೂಕ ಮಟ್ಟದ ಸಮಾವೇಶ, ನೂತನ ಪದಾಧಿಕಾರಿಗಳ ಆಯ್ಕೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಹಾಸ್ಟೆಲ್ ಕಾರ್ಮಿಕರಿಗೆ ಜೀವನ ಯೋಗ್ಯ ವೇತನ, ಸೇವಾ ಭದ್ರತೆ, ಶಾಸನಬದ್ದ ಸೌಲಭ್ಯಗಳಿಗೆ ಆಗ್ರಹಿಸಿ, ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರ ಚಿತ್ತಾಪುರ ತಾಲೂಕ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವಸತಿ ನಿಲಯ ಕಾರ್ಮಿಕರ ಸಂಘದ ಕಲಬುರಗಿ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ಎಮ್. ಹೇಳಿದರು.

ಪಟ್ಟಣದ ಕಾಶಿ ಬಡಾವಣೆಯ ಗಣೇಶ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎಐಯುಟಿಯುಸಿ ಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಚಿತ್ತಾಪುರ ತಾಲೂಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸಕ್ತ ದೇಶದಲ್ಲಿ ಖಾಯಂ ಸ್ವರೂಪದ ಉದ್ಯೋಗಗಳೆ ನಾಶವಾಗುತ್ತಿವೆ, ಎಲ್ಲಾ ಹುದ್ದೆಗಳಿಗೆ ಹೊರಗುತ್ತಿಗೆ, ಒಳ ಗುತ್ತಿಗೆ ಹೆಸರಿನಲ್ಲಿ ನೇಮಕ ಮಾಡಿಕೊಂಡು ಕಡಿಮೆ ಸಂಭಳ ನೀಡಿ ಶೋಷಿಸಲಾಗುತ್ತಿದೆ. ಇದಕ್ಕೆಲ್ಲ ಜಾಗತಿಕರಣ, ಉಧಾರಿಕಾರಣಗಳೇ ಮೂಲಕರಣ ಎಂದು ಹೇಳಿದರು.

ಕಾರ್ಮಿಕರು ವೈಚಾರಿಕವಾಗಿ ಹಾಗೂ ಸಂಘಟನಾತ್ಮಕವಾಗಿ ಬೆಳೆಯದಿರುವುದೇ ದುಡಿಯುವ ಜನಗಳ ಇಂದಿನ ಸಮಸ್ಯೆಗೆ ಕಾರಣವಾಗಿದೆ, ಕಾರ್ಮಿಕರು ಒಗ್ಗಟ್ಟಿನಿಂದ ಹೋರಾಟವನ್ನು ಕಟ್ಟಬೇಕು, ಕಾರ್ಮಿಕರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಾದ ವೇತನ ಕಡಿತ. ಇ ಎಸ್ ಐ. ಈ ಪಿ ಎಫ್, ಹಣ ಕಡಿತ, ಕನಿಷ್ಠ ವೇತನ 35950ರೂ ನಿಗದಿ ಮಾಡಬೇಕು, ಶಾಸನಬದ್ದ ಸೌಲಭ್ಯಗಳು ಒದಗಿಸಬೇಕು, ಜೀತ ಪದ್ಧತಿಯಂತೆ ವರ್ಷಾನುಗಟ್ಟಲೆ ತುಡಿಯುತ್ತಿರುವ ಹಾಸ್ಟೆಲ್ ಕಾರ್ಮಿಕರನ್ನು ಖಾಯಂ ಗೊಳಿಸಬೇಕು ಎಂದು ಆಗ್ರಹಿಸಿದರು.

ಹಾಸ್ಟೆಲ್ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯಧರ್ಶಿ ಶರಣು ಹೇರೂರು ಮಾತನಾಡಿ, ರಾಜಕೀಯ ಮಂತ್ರಿಗಳು, ಶಾಸಕರು, ತಮ್ಮ ಸಂಭಳವನ್ನು ಹೆಚ್ಚಿಸಿಕೊಳ್ಳಲು ಹಾತೋರಿಯುತ್ತಾರೆ ಹೊರತು ಹೊರಗುತ್ತಿಗೆ ಆಧಾರದ ಮೇಲೆ ಕೆಲಸಮಾಡುವ ಲಕ್ಷಾಂತರ ಕಾರ್ಮಿಕರ ಸಮಸ್ಯೆಗಳನ್ನು ಯಾವುದೇ ರಾಜಕೀಯ ಪಕ್ಷಗಳು ಗಮನಹರಿಸದೆ ಇರೋದು ವಿಪರ್ಯಾಸ. ಆದ್ದರಿಂದ ಕಾರ್ಮಿಕರೇ ಬಿದಿಗಿಳಿದು ನಮ್ಮ ಹಕ್ಕಿಗಾಗಿ ಹೋರಾಟವನ್ನು ಕಟ್ಟಬೇಕು ಎಂದು ಕರೆಕೊಟ್ಟರು.

ಸಂತೋಷ ದೊಡ್ಡಮನಿ ನಿರೂಪಿಸಿದರು, ಶರಣಮ್ಮ ಕಟ್ಟಿಮನಿ ವಂದಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ:

ಸಂತೋಷ ದೊಡ್ಡಮನಿ (ಅಧ್ಯಕ್ಷರು), ಇಸಮ್ಮ ನಾಲವಾರ, ವಿಯಲಕ್ಷ್ಮಿ ಕಾಶಿ, ಸದಾನಂದ ಧನ್ನೆಕರ್, ಮಲ್ಲಮ್ಮ ಚಿತ್ತಾಪುರ (ಉಪಾಧ್ಯಕ್ಷರು), ಶರಣಮ್ಮ ಕಟ್ಟಿಮನಿ (ಕಾರ್ಯಧರ್ಶಿ), ರಾಜು ಒಡೆಯರ್ (ಜಂಟಿ ಕಾರ್ಯಧರ್ಶಿ), ತೋಫಿಕ್ ಕೋರವಾರ, ಮಾರುತಿ ಶಹಾಬಾದ್, ಲತಾ ಶ್ರೀನಿವಾಸ್, ಬಸವರಾಜ್ ನಟೆಕಾರ್, ಜಗ್ಗು ಉಂಡಿ, ಈರಮ್ಮ ಮಲ್ಲಿಕಾರ್ಜುನ, ಹಿರಗಪ್ಪ ಕರಣಿಕ್, ನಂದ ಅಶೋಕ್, ಮೀನಾಕ್ಷಿ, ಶಾಲಿನಿ (ಸದಸ್ಯರು).

Spread the love

Leave a Reply

Your email address will not be published. Required fields are marked *

You missed

error: Content is protected !!