ನಾಳೆ ಓರಿಯಂಟ್ ಸಿಮೆಂಟ್ ಕಂಪೆನಿ ವಿರುದ್ಧ ಬಿಜೆಪಿ ಪ್ರತಿಭಟನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬಿಜೆಪಿ ಮುಖಂಡರ ಲಾರಿ ನಂಬರ ಕೆಎ-32, ಎಬಿ-2200 ವಾಹನವನ್ನು ಓರಿಯಂಟ ಸಿಮೆಂಟ್ ಕಂಪನಿಯವರು ಲೋಡ್ ಮಾಡದೆ ವಿನಾಕಾರಣ ಕಿರುಕುಳ ನೀಡುತ್ತಿರುವ ಕಾರಣ ಸದರಿ ಕಂಪನಿಯ ವಿರುದ್ದ ಕಂಪನಿಯ ಗೇಟ್ 2 ರ ಮುಂದೆ ಜನವರಿ 9 ರಂದು 11.30 ರಿಂದ 1.30 ವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ತಿಳಿಸಿದ್ದಾರೆ.
ನಮ್ಮ ಪಕ್ಷದ ಮುಖಂಡರ ಲಾರಿ ವಾಹನ ಸಂಖ್ಯೆ KA-32, AB-2200 ವಾಹನದ ಲೋಡಿಂಗ್ ಅನ್ ಲೋಡಿಂಗ್ ಮಾಡದೆ ವಿನಾಕಾರಣ ಸದರಿ ಮುಖಂಡನ ವಾಹನವನ್ನು ಕಂಪನಿಯಲ್ಲಿ ನಡೆಯದಂತೆ ತಕರಾರು ಮಾಡುತ್ತಿದ್ದಾರೆ. ಆದರೆ ಇವರ ವಾಹನ ಬಿಟ್ಟು ಇತರೆ ವಾಹನಗಳು ಕಂಪನಿಯಲ್ಲಿ ನಡೆಯುತ್ತಿವೆ. ಸದರಿ ವಿಷಯದಲ್ಲಿ ಪೊಲೀಸರ ಯಾವುದೇ ಅಧಿಕಾರ ಇಲ್ಲದಿದ್ದರೂ ಪೊಲೀಸ್ ಇಲಾಖೆಯ ಪತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸದರಿ ಲಾರಿಗಳನ್ನು ಬ್ಲಾಕ್ ಮಾಡುವ ಅಧಿಕಾರ ಆರ್.ಟಿ.ಓ ಇಲಾಖೆಯವರಿಗೆ ಇರುತ್ತದೆ. ಆದರೆ ಉದ್ದೇಶಪೂರ್ವಕವಾಗಿ ಈ ರೀತಿ ಕಂಪನಿಯ ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಕಾರಣ ಕಂಪನಿಯ ಎದುರುಗಡೆ 2 ಗಂಟೆಗಳ ಕಾಲ ಗೇಟ್ ಬಂದ್ ಮಾಡಿ ಪ್ರತಿಭಟನೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.