ಚಿತ್ತಾಪುರ ಪಟ್ಟಣದಲ್ಲಿ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ವೃತ್ತ ಹಾಗೂ ಪುತ್ತಳಿ ನಿರ್ಮಾಣ ಮಾಡುವಂತೆ ಆಗ್ರಹಿಸಿ ಭೋವಿ ವಡ್ಡರ ಸಮಾಜದಿಂದ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ರಾಜ್ಯ ಭೋವಿ ವಡ್ಡರ ಮಹಾಸಭಾದ ಕಲ್ಯಾಣ ಕರ್ನಾಟಕ ಸಮಿತಿ ಉಪಾಧ್ಯಕ್ಷ ವಿಠ್ಠಲ ಎಸ್. ಕಟ್ಟಿಮನಿ ಅವರ ನೇತೃತ್ವದಲ್ಲಿ ಮುಖಂಡರು ಚಿತ್ತಾಪುರ ಪಟ್ಟಣದಲ್ಲಿ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ವೃತ್ತವನ್ನು ಹಾಗೂ ಪುತ್ತಳಿ ನಿರ್ಮಾಣ ಮಾಡಬೇಕು ಎಂದು ತಹಸೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಭೋವಿ ವಡ್ಡರ್ ಮಹಾಸಭಾ ತಾಲೂಕು ಅಧ್ಯಕ್ಷ ವೆಂಕಟೇಶ್ ಹರವಾಳ, ಭೋವಿ ವಡ್ಡರ ಸಮಾಜದ ತಾಲೂಕ ಅಧ್ಯಕ್ಷ ಹನುಮಂತ ಕಟ್ಟಿಮನಿ, ನಗರ ಅಧ್ಯಕ್ಷ ಸಂತೋಷ್ ಕಾಶಿ, ತಾಲೂಕ ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ಪವಾರ್, ತಮ್ಮಣ್ಣ ಭೋಸಗಿ, ಸಂಜೀವ್ ಕಾಶಿ, ಪ್ರಭು ಕಾಶಿ, ಉಪಾಧ್ಯಕ್ಷರಾದ ಮಹೇಶ್ ಕಾಶಿ, ಜಗನ್ನಾಥ್ ಕಾಶಿ, ರೇವಣ ಕಾಶಿ, ರಮೇಶ್ ಬೋಸಗಿ, ತಿಮ್ಮಯ್ಯ ಪವಾರ್, ಪ್ರಕಾಶ್ ಕಾಶಿ, ಭೀಮಾಶಂಕರ್ ವಾಡಿ, ರಾಮು ಹರವಾಳ ಸೇರಿದಂತೆ ಇತರರು ಇದ್ದರು.