ಯಾಗಾಪೂರ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ಅಧ್ಯಕ್ಷ, ಪಿಡಿಓ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಯಾಗಾಪೂರ ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಅಭಿವೃದ್ಧಿ ಅಧಿಕಾರಿ ಸೇರಿಕೊಂಡು 15ನೇ ಹಣಕಾಸಿನ ಕಾಮಗಾರಿ ಹಾಗೂ ಅಂಗವಿಕಲ ಶೇ.5 ಪ್ರತಿಶತ ಅನುದಾನದಲ್ಲಿ ನಡೆದ ಅವ್ಯವಹಾರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾಜಿ ಗ್ರಾ.ಪಂ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮದನ್ ಹೇಮ್ಲಾ, ಸದಸ್ಯರಾದ ವಸಂತ ಖೂಬ್ಯಾ, ಚಂದ್ರಿಬಾಯಿ ಖೀರು ಅವರು ಮನವಿ ಸಲ್ಲಿಸಿದ್ದಾರೆ.
ಪಂಚಾಯತ ವ್ಯಾಪ್ತಿಯಲ್ಲಿ 15ನೇ ಹಣಕಾಸಿನಲ್ಲಿ ಯಾವುದೇ ಕಾಮಗಾರಿ ಮಾಡದೆ ಅನುದಾನ ಬಿಡುಗಡೆ ಮಾಡಿಕೊಂಡಿದ್ದಾರೆ. ಗ್ರಾಪಂ.ಸದಸ್ಯರ ಕಾಮಗಾರಿ ಕೆಲಸವನ್ನು ಮಾಡದೆ ಹಾಗೂ ಗ್ರಾಪಂ. ಸದಸ್ಯರ ಒಪ್ಪಿಗೆ ಪಡೆದುಕೊಳ್ಳದೆ ಕ್ರೀಯಾ ಯೋಜನೆಯನ್ನು ತಯಾರಿಸದೆ ಒಂದೇ ದಿನದಲ್ಲಿ ವಿವಿಧ ಏಜೆನ್ಸಿಗಳ ಮೂಲಕ 6 ಲಕ್ಷಕ್ಕೂ ಅಧಿಕ ಅನುದಾನವನ್ನು ಅಧ್ಯಕ್ಷ ಮತ್ತು ಪಿಡಿಓ ಇಬ್ಬರು ಸೇರಿ ಕೂಡಿಕೊಂಡು ಭಾರಿ ಭ್ರಷ್ಟಚಾರ ಮಾಡಿರುತ್ತಾರೆ.
ಗ್ರಾಪಂ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಇದ್ದರು ಕೂಡ ಹಾಬಾ ನಾಯಕ ಮತ್ತು ಜೈರಾಮ ನಾಯಕ ತಾಂಡಾದಲ್ಲಿ ಕಾಮಗಾರಿ ಮಾಡಿದ್ದರೂ ಸಹಿತ ಅನುದಾನವನ್ನು ನನಗೆ ವಿತರಿಸದೆ ಹಣ ದುರ್ಬಳಕೆ ಮಾಡಿಕೊಂಡಿರುತ್ತಾರೆ ಅಂಗವಿಕಲರಿಗೆ ಶೇ.5 ಪ್ರತಿಶತ ಅನುದಾನದಲ್ಲಿ ಹೊಲಿಗೆ ಯಂತ್ರಗಳನ್ನು ಸರ್ಕಾರದಿಂದ ಬಿಡುಗಡೆಯಾಗಿರುತ್ತದೆ. ಆದರೆ ಎರಡು, ಮೂರು ವರ್ಷಗಳಿಂದ ಅನುದಾನ ದುರ್ಬಳಕೆ ಮಾಡಿಕೊಂಡಿರುತ್ತಾರೆ.
ಕೂಡಲೇ ಗ್ರಾಪಂ ಅಧ್ಯಕ್ಷ, ಪಿಡಿಓ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಒಂದು ವೇಳೆ ನಿರ್ಲಕ್ಷ್ಯ ತೋರಿದಲ್ಲಿ ಗ್ರಾಪಂ ಮುಂದೆ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.