ಚಿತ್ತಾಪುರದಲ್ಲಿ ಕಾಯಕ ಬಂಧುಗಳ ತರಬೇತಿ ಕಾರ್ಯಕ್ರಮ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಕಲಬುರ್ಗಿ, ತಾಲೂಕು ಪಂಚಾಯತ್, ಚಿತ್ತಾಪುರ ಗ್ರಾಮ ಸ್ವರಾಜ್ ಅಭಿಯಾನ – ಕರ್ನಾಟಕ ಹಾಗೂ ಸಹರಾ ಸಂಸ್ಥೆ ಕಲಬುರಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ-2005, ಕಾಯಕ ಬಂಧುಗಳ (ಮೆಟ್ಸ್) ತರಬೇತಿ ಕಾರ್ಯಕ್ರಮವನ್ನು ಕಾರ್ಯನಿರ್ವಾಹಕ ಅಧಿಕಾರಿ ಅಕ್ರಂ ಪಾಷಾ ಅವರು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ಪಂಡಿತ್ ಶಿಂಧೆ, ಕೃಷಿ ಸಹಾಯಕ ನಿರ್ದೇಶಕ ಸಂಜೀವಕುಮಾರ್ ಮಾನಕಾರ್, ಗ್ರಾಮ ಸ್ವರಾಜ್ಯ ಅಭಿಯಾನ ರಾಜ್ಯ ಸಮಿತಿ ಸದಸ್ಯ ಮಸ್ತಾನ್ ಬಿರಾದಾರ, ರಾಜ್ಯ ಸಂಪನ್ಮೂಲ ವ್ಯಕ್ತಿ ಅಬ್ದುಲ್ ರಹೀಮ್ ಹಾಗೂ ಎಲ್ಲಾ ಬಿಎಫ್ಟಿ, ಎಫ್ಎಂ, ಜಿಕೆಎಂ, ಎಂಇಎಸ್, ಟಿಸಿ, ಟಿಎಇ ಮತ್ತು ತಾಲೂಕು ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.