Oplus_0

ಚಿತ್ತಾಪುರ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಿಯಮಬದ್ಧವಾಗಿ ಮಾಡದೇ ಇರುವುದಕ್ಕೆ ಬಿಜೆಪಿ ಮುಖಂಡರ ಆಕ್ರೋಶ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಭುವನೇಶ್ವರಿ ವೃತ್ತದಲ್ಲಿ ಲ್ಯಾಂಡ್ ಆರ್ಮಿ ಇಲಾಖೆ ವತಿಯಿಂದ ಕೈಗೊಂಡ ರಸ್ತೆ ಕಾಮಗಾರಿ ಮತ್ತು ರಸ್ತೆ ಅಗಲೀಕರಣ ಮಾಡುವಲ್ಲಿ ನಿಯಮಬದ್ಧವಾಗಿ ಮಾಡದೇ ಇರುವುದಕ್ಕೆ ಬಿಜೆಪಿ ಮುಖಂಡರು ಶನಿವಾರ ರಸ್ತೆ ಅಗಲೀಕರಣ ಮಾಡುತ್ತಿರುವುದನ್ನು ತಡೆಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿ, ರಸ್ತೆಯ ಭಲ ಭಾಗದಲ್ಲಿ ಸಣ್ಣಪುಟ್ಟ ಅಂಗಡಿಗಳಿವೆ, ಜಗಧಂಬಾ ದೇವಸ್ಥಾನ ಇದೆ, ತರಕಾರಿ ಅಂಗಡಿಗಳಿವೆ ಎಡ ಭಾಗದಲ್ಲಿ ಖಬರಸ್ಥಾನದ ಗೋಡೆ ಇದೆ ಆದರೆ ಇಲ್ಲಿ ಎರಡು ಕಡೆ ಸಮಾನವಾಗಿ ರಸ್ತೆ ಅಗಲೀಕರಣ ಮಾಡುವುದನ್ನು ಬಿಟ್ಟು ಅಂಗಡಿಗಳು ಇರುವ ಭಲ ಭಾಗದಲ್ಲಿ ಮಾತ್ರ ರಸ್ತೆ ಅಗಲೀಕರಣ ಮಾಡುತ್ತಿದ್ದಾರೆ ಇದು ತಾರತಮ್ಯವಾಗಿದೆ ಮತ್ತು ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎಂಬಂತೆ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೋಳ್ಳುತ್ತಿದ್ದಾರೆ ಇದನ್ನು ಖಂಡಿಸುತ್ತೇವೆ ಎಂದು ಹೇಳಿದರು.

ಅಭಿವೃದ್ಧಿ ಕೆಲಸಗಳಿಗೆ ನಮ್ಮದೇನೂ ತಕರಾರು ಇಲ್ಲ ಅಭಿವೃದ್ಧಿಗೆ ನಮ್ಮದು ಸಂಪೂರ್ಣ ಬೆಂಬಲ ಇದೆ, ಆದರೆ ಅಧಿಕಾರಿಗಳು ಮಾತ್ರ ಅಭಿವೃದ್ಧಿ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಈ ಕಡೆ ಪುರಸಭೆ ಹಾಗೂ ಲ್ಯಾಂಡ್ ಆರ್ಮಿ ಅಧಿಕಾರಿಗಳು ಗಮನ ಹರಿಸಿ ರಸ್ತೆಯ ಎರಡು ಕಡೆ ಅಗಲೀಕರಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಮಾತನಾಡಿ, ರಸ್ತೆ ಅಗಲೀಕರಣ ಮಾಡುವ ಕಾಮಗಾರಿಯಲ್ಲಿ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ ಎರಡು ಕಡೆ ಅಗಲೀಕರಣ ಮಾಡದೇ ಒಂದೇ ಕಡೆ ಅಗಲೀಕರಣ ಮಾಡುವ ಮೂಲಕ ಸಮಸ್ಯೆ ಸೃಷ್ಟಿ ಮಾಡುತ್ತಿದ್ದಾರೆ ಹೀಗಾಗಿ ಕ್ಷೇತ್ರದ ಶಾಸಕರು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೂಡಲೇ ಗಮನ ಹರಿಸಿ ಈ ತಪ್ಪನ್ನು ಸರಿಪಡಿಸಿ ರಸ್ತೆಯ ಎರಡು ಕಡೆ ಅಗಲೀಕರಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಪುರಸಭೆ ಸದಸ್ಯರಾದ ರಮೇಶ್ ಬೊಮ್ಮನಳ್ಳಿ, ಶಾಮಣ್ಣ ಮೇಧಾ, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸುರಕರ್, ಮುಖಂಡರಾದ ಎಂ.ಡಿ.ಯುನುಸ್, ಅಂಬರೀಷ್ ಸುಲೇಗಾಂವ, ಬಸವರಾಜ ಹೂಗಾರ, ವಿವೇಕ್ ಹಂಚಾಟೆ, ಅಂಬರೀಷ್ ರಂಗನೂರ್ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!