ವಾಡಿಯಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಯವರ 59ನೇ ಪುಣ್ಯ ಸ್ಮರಣೆ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಯವರ 59ನೇ ಪುಣ್ಯ ಸ್ಮರಣೆ ಆಚರಿಸಲಾಯಿತು.
ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾದ ಶಾಸ್ತ್ರಿ ಜೀ ಅತ್ಯಂತ ಬಡ ಕುಟುಂಬದಿಂದ ಬಂದು ಸರಳವಾಗಿ ಬದುಕು ನಡೆಸಿದವರು, ಬಡತನದ ಬಗ್ಗೆ ಎಂದೂ ಕೀಳರಿಮೆ ಹೊಂದಿರಲಿಲ್ಲ ಶ್ರೀಮಂತರಾಗಬೇಕೆಂಬ ಹಂಬಲವೂ ಇರಲಿಲ್ಲ ಎಂದರು.
ನ್ಯಾಯನಿಷ್ಠುರರಾಗಿ, ಸತ್ಯದಿಂದ ಆಡಳಿತ ಮಾಡಿ, ಅತ್ಯಂತ ಉನ್ನತ ಅಧಿಕಾರದಲ್ಲಿದ್ದು ಅವರ ಸರಳತೆಯ ಬದುಕು ನಮ್ಮೆಲ್ಲರಿಗೂ ಆದರ್ಶಪ್ರಾಯ ಅವರಿನ್ನೂ ಹೆಚ್ಚಿನ ಕಾಲ ಬದುಕಬೇಕಿತ್ತು. ಅವರನ್ನು ಸ್ಮರಿಸುವ ಮೂಲಕ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಬೇಕಾಗಿದೆ ಜೈ ಜವಾನ್, ಜೈ ಕಿಸಾನ್, ಅವರ ಅತ್ಯಂತ ಮಹತ್ವದ ಕೊಡುಗೆ. ಇಂದಿಗೂ ಈ ಘೋಷವಾಕ್ಯ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಹೇಳಿದರು.
1965ರ ಭಾರತ-ಪಾಕಿಸ್ತಾನ ಯುದ್ಧ ಸಮಯದಲ್ಲಿ ಅವರು ತೋರಿದ್ದ ದಿಟ್ಟ ನಿಲುವು ಎಂದಿಗೂ ಮರೆಯಲಾರದ ಸಂಗತಿಯಾಗಿದೆ. 1966ರಲ್ಲಿ ಪಾಕಿಸ್ತಾನದೊಡನೆ ಮಾತುಕತೆಗಾಗಿ ತಾಷ್ಕೆಂಟ್ ಗೆ ತೆರಳಿದ್ದ ಶಾಸ್ತ್ರಿ ಜೀ ಅಲ್ಲಿಯೇ ಅನುಮನಾಸ್ಪದವಾಗಿ ಸಾವನಪ್ಪಿದರು ಎಂದು ಹೇಳಿದರು.
ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಸಿದ್ದಣ್ಣ ಕಲ್ಲಶೆಟ್ಟಿ, ಪ್ರಮೋದ್ ಚೊಪಡೆ, ಮಲ್ಲಿಕಾರ್ಜುನ ಸಾತಖೇಡ, ಕುಮಾರ ಚವ್ಹಾಣ, ಅಕ್ರಮ್ ಶರಿಫ್ ಸೇರಿದಂತೆ ಇತರರು ಇದ್ದರು.