Oplus_0

ಚಿತ್ತಾಪುರ ಕೋಲಿ ಸಮಾಜದ ಧ್ವನಿಯಾಗಿ ಸೇವೆ ಸಲ್ಲಿಸುವೆ: ಶಿವುಕುಮಾರ ಯಾಗಾಪೂರ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನಲ್ಲಿ ಕೋಲಿ ಸಮಾಜದ ಸಂಘಟನೆಗೆ ಹಗಲಿರುಳು ಶ್ರಮಿಸುವ ಜೊತೆಗೆ ಸಮಾಜದ ಧ್ವನಿಯಾಗಿ ಸೇವೆ ಸಲ್ಲಿಸುತ್ತೇನೆ ಎಂದು ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ ಹೇಳಿದರು.

ತಾಲೂಕಿನ ಮಾಡಬೂಳ ಗ್ರಾಮದಲ್ಲಿ ಕೋಲಿ ಸಮಾಜದ ಮುಖಂಡರು ಹಾಗೂ ಅಭಿಮಾನಿಗಳು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೋಲಿ ಸಮಾಜದಲ್ಲಿ ಕೆಲ ಮುಖಂಡರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಹಾಗೂ ಗೊಂದಲ ಮೂಡಿಸುತ್ತಿದ್ದಾರೆ ಅದಕ್ಕೆ ಯಾರೂ ಕಿವಿಗೊಡದೆ ನನ್ನ ಮೇಲೆ ವಿಶ್ವಾಸವಿಟ್ಟು ಬೆಂಬಲಿಸಿ ನಾನು ನಿಮ್ಮ ಧ್ವನಿಯಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಜಗನ್ನಾಥ  ಭಾಗೋಡಿ, ಶರಣಪ್ಪ ನಾಯ್ಕೋಡಿ ವಚ್ಚಾ, ಸಂತೋಷ್ ನಾಟೀಕಾರ ಇವಣಿ, ಅನಿಲ್ ಇವಣಿ, ಮಹಾಂತೇಶ್ ಸುಬೇದಾರ್, ನಾಗರಾಜ್ ಮುತ್ತಗಿ, ಭೀಮಣ್ಣ ತಳವಾರ್ ಮಾಡಬೂಳ, ದೇವರಾಜ್ ತಳವಾರ್ ಬೆಣ್ಣೂರ, ರೇವಣಸಿದ್ಧ ಇವಣಿ, ಪೋಮು ಕಲಗುರ್ತಿ, ಕರಣ ಕೋರವಾರ್, ದತ್ತು ಮತ್ತಿಮೂಡ್, ಸೆಮಿ ಪಟೇಲ್ ಮುಗಟಿ, ಆಸೀಫ್ ಗುಂಡುಗುರ್ತಿ, ಸದ್ದಾಂ ಇಂಗನಕಲ್, ಬೆಳ್ಳಪ್ಪ  ಇಂಗನಕಲ್. ಮಲ್ಲಿಕಾರ್ಜುನ್ ಇಂಗನಕಲ್, ಈರಣ್ಣ ಇಂಗನಕಲ್, ಅರುಣ ಯಾಗಾಪುರ, ಮಲ್ಕಣ್ಣ ತಳವಾರ್ ಬೆಣ್ಣೂರ,  ಬಸವರಾಜ ಮುತ್ತಗಿ ಸಂಗಾವಿ, ಸಾಗರ ಸೀತಾಳೆ ಪೇಟಶಿರೂರು, ರಮೇಶ್ ತಳವಾರ್ ಮಾಡಬೂಳ, ಕಾಶಿ ವಚ್ಚಾ, ಶಿವು ಮಾಡಬೂಳ, ರಾಹುಲ್ ಮಾಡಬೂಳ, ಸೋಮು ಮತ್ತಿಮೂಡ, ಆಕಾಶ್ ಕುಲಕರ್ಣಿ ಬೆಣ್ಣೂರ, ಸಂತು ಮತ್ತಿಮೂಡ, ಜಗ್ಗು ಕಾಶಿ ಮತ್ತಿಮೂಡ, ಸಿದ್ದಣ್ಣ ರೇವಗಿ ವಚ್ಚಾ, ಆಕಾಶ್ ಕಲಗುರ್ತಿ, ರಾಜು ಕಲಗುರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!