ಡೋಣಗಾಂವ ಗ್ರಾಮದಿಂದ ಮೈಲಾಪುರ ಜಾತ್ರೆ ಅಂಗವಾಗಿ 9ನೇ ವರ್ಷದ ಪಾದಯಾತ್ರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಜನವರಿ 13 ರಂದು ಚಿತ್ತಾಪುರ ತಾಲೂಕಿನ ಡೋಣಗಾಂವ ಗ್ರಾಮದಿಂದ ಯಾದಗಿರಿ ಜಿಲ್ಲೆಯ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದವರೆಗೆ 9 ನೇ ವರ್ಷದ ಪಾದಯಾತ್ರೆ ನಡೆಯಿತು.
ಈ ಪಾದಯಾತ್ರೆಯು ಲೋಕ ಕಲ್ಯಾಣಕ್ಕಾಗಿ ನಾಡಿನ ಜನತೆಗೆ ಮಳೆ, ಬೆಳೆ, ಶಾಂತಿ, ನೆಮ್ಮದಿ, ಐಶ್ವರ್ಯ ಸಿಗಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಮ್ಮಿಕೊಳ್ಳಲಾಗುತ್ತಿದೆ ಎಂದು ಗ್ರಾಮದ ಯುವ ಮುಖಂಡ ಶರಣು ಡೋಣಗಾಂವ ತಿಳಿಸಿದ್ದಾರೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವರು. ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಎರಡು ದಿವಸ ಪ್ರಸಾದ ಮತ್ತು ಉಳಿದುಕೊಳ್ಳಲು ವ್ಯವಸ್ಥೆ ಇರಲಿದೆ ಎಂದು ತಿಳಿಸಿದ್ದಾರೆ.
ಪಾದಯಾತ್ರೆಯಲ್ಲಿ ಮಲ್ಲಿಕಾರ್ಜುನ ಹೊನ್ನಪುರ, ಸಿದ್ದು ಮೆಂಗನವರ, ಅಂಬರೀಶ್ ಬಾನರ, ಮೌನೇಶ್ ತಳವಾರ, ಕಾಶಪ್ಪ ಜಮನಕಿ, ಜಟ್ಟಪ್ಪ ಪೂಜಾರಿ, ಮೈನುದ್ದಿನ್ ಕೊರಬಾ, ಆಕಾಶ್ ಬನ್ನಾರ್, ಕಾಶಪ್ಪ ಹಲಕಟ್ಟಿ, ದೇವಪ್ಪ ನಂಜಳ್ಳಿ, ಈಶಪ್ಪ ಮುತ್ತಗಿ, ಹನುಮಂತ ಹಲಕಟ್ಟಿ, ಕಾಶಪ್ಪ ಕ್ವಾಡಿಗೇರಿ ಸೇರಿದಂತೆ ಇನ್ನಿತರ ನೂರಾರು ಯುವಕರು ಮಕ್ಕಳು ಮಹಿಳೆಯರು ಪಾಲ್ಗೊಂಡಿದ್ದರು.