ಬಜಾಜ್ ಕಾಂಪ್ಲೆಕ್ಸ್ ಅಂಗಡಿಯೊಂದರಲ್ಲಿ ಬರ್ತಡೇ ಸೆಲೆಬ್ರೇಷನ್ ಆಂಡ್ ಇವೆಂಟ್ಸ್ ಹೆಸರಲ್ಲಿ ಅನೈತಿಕ ಚಟುವಟಿಕೆಗಳು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಹೃದಯ ಭಾಗದಲ್ಲಿರುವ ಬಿಸಿನೆಸ್ ಕೇಂದ್ರವಾದ ಬಜಾಜ್ ಕಾಂಪ್ಲೆಕ್ಸ್ ನ ಅಂಗಡಿಯೊಂದರಲ್ಲಿ ಬರ್ತಡೇ ಸೆಲೆಬ್ರೇಷನ್ ಆಂಡ್ ಇವೆಂಟ್ಸ್ ಹೆಸರಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಮೂಲನಿವಾಸಿ ಸಂಘದ ಜಿಲ್ಲಾಧ್ಯಕ್ಷ ಶೇರ್ ಅಲಿ ತಿಳಿಸಿದ್ದಾರೆ. ಈ ಕೂಡಲೇ ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಗಮನ ಹರಿಸಿ ಇಂತಹ ಅನೈತಿಕ ಚಟುವಟಿಕೆಗಳು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸ್ವಾಮಿ ಬರ್ತಡೇ ಸೆಲೆಬ್ರೇಷನ್ ಆಂಡ್ ಇವೆಂಟ್ಸ್ ಅಂಗಡಿಯಲ್ಲಿ ಸಣ್ಣ ಪುಟ್ಟ ಬರ್ತಡೇ ಸೆಲೇಬ್ರೇಷನ್ ಅಂತಹ ಕಾರ್ಯಕ್ರಮ ಮಾಡಲು ಅದಕ್ಕೆ 499 ರೂ. ನಿಗದಿ ಮಾಡಿ ಕಳೆದ ಐದಾರು ತಿಂಗಳಿಂದ ಅಂಗಡಿ ನಡೆಯುತ್ತಿದೆ. ಆದರೆ ಅಲ್ಲಿ ನಡೆಯುತ್ತಿರುವುದೇ ಬೇರೆನೇ ಆಗಿದೆ.
ಕಳೆದ ಕೆಲ ತಿಂಗಳಿಂದ ಅನುಮಾನ ಇತ್ತು ಅದು ಸೋಮವಾರ ಮಧ್ಯಾಹ್ನ ಖಚಿತವಾಗಿದೆ. ಅಂಗಡಿ ಸೆಟ್ಟರ್ ತೆಗೆದು ಒಳಗಿನಿಂದ ಒರ್ವ ಯುವಕ ಮತ್ತು ಯುವತಿ ಹೊರಬರುತ್ತಿರುವ ದೃಶ್ಯ ಕಂಡುಬಂತು, ನಂತರ ಒಳಗಡೆ ಹೋಗಿ ನೋಡಿದರೆ ಕಾಂಡೊಮಗಳು ಬಿದ್ದಿರುವುದು ಕಂಡುಬಂದಿದೆ. ಅಂಗಡಿ ನಡೆಸುತ್ತಿರುವ ಸ್ವಾಮಿ ಬರ್ತಡೇ ಸೆಲೆಬ್ರೇಷನ್ ಗಾಗಿ ಬಾಡಿಗೆ ನೀಡಿ ಸೆಟ್ಟರ್ ಹಾಕಿ ಹೋಗಿ ಬಿಡುತ್ತಾನೆ ಆಗ ಮೋಜು ಮಸ್ತಿ ಸೇರಿದಂತೆ ಯುವಕ ಯುವತಿಯರ ಹಾದಿ ತಪ್ಪಿಸುವ ಇದೊಂದು ಅಂಗಡಿಯಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ಬಂದಿದ್ದು ಅಂಗಡಿ ನಡೆಸುತ್ತಿರುವ ಸ್ವಾಮಿ ಯನ್ನು ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿ ಪೊಲೀಸರು ಕೈಗೊಳ್ಳುವ ತನಿಖೆಯಿಂದ ಹೊರಬೀಳಲಿದೆ ಅಲ್ಲಿವರೆಗೆ ಕಾದುನೋಡಬೇಕಿದೆ.